(೧೪೧) ನೈಜಜೀವನದಲ್ಲಿ ಭೂತಕಾಲವನ್ನು ನೆನಪಿನ ಮೂಲಕ ಪುನರ‍್ಸಂಪಾದಿಸುತ್ತೇವೆ. ಘಟನೆಯೊಂದು ಉಂಟಾಗುವ ಮುನ್ನವೇ ಸ್ಮೃತಿಯ ಮೂಲಕ ಬದುಕಿಬಿಡುವುದನ್ನು ಕನಸು ಎನ್ನುತ್ತೇವೆ. ಇದು ಅಸಹಜವೆನ್ನುಸುವುದೇಕೆಂದರೆ, ನೀವುಗಳು ಇದನ್ನು ನೈಜ ಜೀವನದಲ್ಲಿ ಓದುತ್ತಿದ್ದೀರೆಂದು ಕನಸು ಕಾಣುತ್ತಿದ್ದೀರ ಅದಕ್ಕೆ!

(೧೪೨) ತಾನು ಸೃಷ್ಟಿಸಿದ ಮನುಷ್ಯ ತನ್ನನ್ನೇ ಊರ್ಜಿತಗೊಳಿಸುವ ಮುನ್ನವೂ ತಾನು ಅಸ್ತಿತ್ವದಲ್ಲಿದ್ದೆನೆಂಬ ಸತ್ಯವೇ ದೇವರಿಗೆ ತಿಳಿದಿಲ್ಲ!

(೧೪೩) ಭೌತಿಕವಾಗಿ ನಿಮ್ಮೊಂದಿಗಿಲ್ಲದವರೊಂದಿಗೆ ಮಾತನಾಡಲು ಮೊಬೈಲು ಸೌಕರ್ಯ ಮಾಡಿಕೊಡುವುದಿಲ್ಲ. ಬದಲಿಗೆ ನಿಮ್ಮ ಬೆನ್ನಿಗಂಟಿ ನಿಂತವರೊಂದಿಗೆ ಮಾತು ಕಳೆದುಕೊಳ್ಳುವಂತೆ ಮಾಡುತ್ತದದು!

(೧೪೪) ರಕ್ತದಾನಿಗಳಾಗುವುದಕ್ಕಿಂತಲೂ ದಾನ ಬುದ್ಧಿಯು ನಿಮ್ಮ ರಕ್ತದಲ್ಲಿರುವುದು ಒಳ್ಳೆಯದು!

(೧೪೫) ಬಹುಪಾಲು ಬುದ್ಧಿಜೀವಿಗಳು ಗಡ್ಡಧಾರಿಗಳಾಗಿರಬಹುದು. ಆದರೆ ಗಡ್ಡ ಬಿಟ್ಟವರೆಲ್ಲ ಬುದ್ಧಿಜೀವಿಗಳಲ್ಲ. ಸ್ತ್ರೀವಾದಿಗಳನ್ನು ಕೇಳಿನೋಡಿ!