ನಿನ್ನಿಂದ ಅರಿತೆ ನಾನು ಒಲವಿನಾ ಅರ್ಥವನ್ನೂ
ಆ ಭಾವದುಂಬಿ ನಾನು ನಿನಗೆಂದೆ ನಗುವ ಹೂವು
ಕಣ್ಣಲ್ಲೇ ಇಟ್ಟು ನಿನ್ನ ಕಣ್ಮುಚ್ಚಿ ಕುಳಿತೆ ಚಿನ್ನ
ಮನದಲ್ಲಿ ತುಂಬಿ ನಿನ್ನ ಮರೆತೆಲ್ಲ ಬಾಹ್ಯವನ್ನ
ಬಿಡಲೊಲ್ಲೆ ನಿನ್ನ ನಾನು, ಕಣ್ತೆರೆದು ನೋಡಿ ಜಗವ
ಉಸಿರಂತೆ ನನ್ನಲಿರುವ , ಇರುವಂತೆ ನಿನ್ನಲೇ ನಲಿವ
ಊರೆಲ್ಲ ಕರೆದರೇನು ಮರುಳಾದೆನೆಂದು ನನ್ನ
ಜತೆಗಿಲ್ಲವೇನು ನೀನು ಸಾಕೆನಗೆ ಅದುವೆ ರನ್ನ
ನನಗಿಲ್ಲ ಇನ್ನು ಚಿಂತೆ ನಿನ್ನೊಲವೆ ನನ್ನ ಲಹರಂತೆ
ಬೆರೆತಂತೆ ನನ್ನಲಿರುವ ನಿನ್ನೊಲವೆ ನನ್ನ ಉಸಿರಂತೆ
ನನ್ನುಸಿರ ರಾಗವೇ ನೀನು,ಅದರಲ್ಲೇ ತಾನವೇ ನಾನು
ನನ್ನೆದೆಯ ಹಾಡಾದೆ ನೀನು, ಆ ಹಾಡಿನಕ್ಷರವೇ ನಾನು
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
ಹೆಚ್ಚು ಸವಿ ಡಾ ಎಚ್ಚೆಸ್ವೀಯವರ ಅಭ್ಯಾಸ ೪೧..
ಸಂಪದಿಗ ಭಂಧುಗಳೆಲ್ಲರಿಗೂ ಸಂಪದ್ಭರಿತ ೨೦೧೪ ರ ಹೊಸ ವರುಷದ ಶುಭಾಶಯಗಳು
ಘಾತ
ಬೆಳಗನು ಮುಸುಕುವ ಮಾಯೆಯ ಮಂಜು
ನೇತಿ
ಮಹಾ ತಿಮಿರ
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (8)