___LINK_OPEN_href="http://4.bp.blogspot.com/_Xahtxjj2WYE/TECutUDUBqI/AAAAAAAAAs0/6dKuK9EG5qI/s1600/Biyanka.bmp"___
ನಾ ಒಂದು ಚಿತ್ರ ನೋಡಿದೆ. ಅದು ಕೇವಲ ಅರ್ಧ ಗಂಟೆ. ಆರಂಭ ಗೊತ್ತಿಲ್ಲ. ಅಂತ್ಯವೂ ಗೊತ್ತಿಲ್ಲ. ವೀಕ್ಷಿಸಿದ ಕೇವಲ ೩೦ ನಿಮಿಷದಲ್ಲಿ ನೆಚ್ಚಿನ ಹಾಡು ಬಂದು ಹೋಯಿತು. ಹೀರೊ.ಹೀರೋಯಿನ್ ಬಗ್ಗೆ ಅವರಿಂದಲೇ ಕೇಳಿ ತಿಳಿದುಕೊಂಡ ವಿಷಯಗಳ ದರುಶನವೂ ಆಯಿತು. ನೋಡಿದ ಅರ್ಧ ಗಂಟೆಯ ವಿರ್ಮಶೆ ಇಲ್ಲಿದೆ. ಎರಡೂ ವರೆ ಗಂಟೆ ಚಿತ್ರ ನೋಡಿದಾಗಲೇ ಚಿತ್ರ ವಿರ್ಮಶೆ ಮಾಡುವುದು ಕಷ್ಟ. ಅಂತದ್ರಲ್ಲಿ ಇದು ಸರೀನಾ ಅನ್ನಬಹುದು. ಇದು ನಿಜಾನೆ. ಆದ್ರೂ, ಅರ್ಧಗಂಟೆಯ ಚಿತ್ರ ಕಾಡುತ್ತಿದೆ. ಸಾಲಾಗಲು ಪ್ರಯತ್ನಿಸುತ್ತಿದೆ. ಅದಕ್ಕೇನೆ ಮನಸ್ಸು ಈಗ ಅಕ್ಷರಗಳ ಗುಲಾಮ..
ಚಿತ್ರ ನಟ ರಾಜ್ . ಗೆಳತಿ ಬಿಂದು. ಇದು ಅರ್ಧಗಂಟೆಯಲ್ಲಿ ತಿಳಿದ ಸತ್ಯ. ಇಬ್ಬರಲೂ ಪ್ರೀತಿ. ಅವನಿಗೆ ಅಂತರಾಳದ ಪ್ರೀತಿ ಹೇಳಲಾಗದ ಸ್ಥಿತಿ. ಬಿಂದು ಗೆ ಗೆಳೆಯನ ಮನ ತಿಳಿಯುವ ಕುತೂಹಲ. ಇದರ ಮಧ್ಯೆ ಕಾಡಲ್ಲಿ ಕುಳಿತು ಇಬ್ಬರ ಪರಸ್ಪರ ಪ್ರೀತಿಯ ಸುತ್ತದ ಮಾತು-ಕಥೆ. ಆಗಲ್ಲ ಅಂದು ಹೋಗುವ ನಾಯಕ ಕೈಹಿಡಿದು ನಾ..ನಿನ್ನ ಪ್ರೇಯಸಿ ಅಂದು ಬಿಡುವ ಬಿಂದು. ಇಷ್ಟಾದ ಮೇಲೆ ಅದಲ್ಲೊಂದು ಹಾಡು...
ಗಾಳಿಯೇ ನೋಡು ಬಾ...
ದೀಪದಾ ನರ್ತನ...
ಹೌದು!!! ಇದು "ಸಂಚಾರಿ" ಚಿತ್ರದ ಕ್ಲೈಮ್ಯಾಕ್ಸ್ನ ಮುಂಚೆ ನಡೆಯುವ ದೃಶ್ಯ. ಈ ಅಂತ್ಯದಲ್ಲಿ ಖಳನಾಯಕರು ಬಂದು ಹೋಗುತ್ತಾರೆ. ಅವರು ಬಂದ ಮೇಲೆ ಮುಂದೇನಾಗುತ್ತದೆ ಅಂತ ಹೇಳೋದು ಬೇಡ.