ತಾನು ತನದೆಂಬ
ಶ್ರೇಷ್ಠತೆಯು ಮೂಡಿ
ಸಹಬಾಳ್ವೆ ಕಮರಿ
ದೌರ್ಜನ್ಯಗಳು ಬಹುವಾಗಿ
ಸಹನೆಯು ಮೀರಿ
ಮನಗಳು ಕದಡಿ
ಶಾಂತತೆ ಕಲಕಿ
ಕೋಪಾಗ್ನಿ ಉಕ್ಕಿದಾಗ
ರೋಷವೇ ಸಂಗಾತಿ
ಮೌನಗಳು ಶಬ್ದಗಳಾಗಿ
ಶಬ್ದಗಳೇ ಮಾತಾಗಿ
ಮಾತಿಗೆ ಮಾತುಗಳು ಬೆಳೆದು
ವಿಕಾರ ಪ್ರತಿಕ್ರಿಯೆಯಾಗಿ ಹೊಮ್ಮಿ
ಪ್ರತಿಕ್ರಿಯೆಗಳು ಕ್ರಿಯೆಯಾಗಿ
ಕ್ರಿಯೆಗಳು ಕ್ರೂರವಾಗಿ
ಕ್ರೂರತನದ ಭೀಕರತೆಯೇ
ಮಾನವೀಯ ಮೌಲ್ಯಗಳ ಅಂತ್ಯ
ಪ್ರತಿಕ್ರಿಯೆ (9)