ನಲ್ಲೆ.....
ನೀನೊಂದು ಎಲೆ
ಆಗಾಗ.........ನೀನು
ನನ್ನ ಕೋಪದ ಬಿಸಿಲಿಗೆ
ಬಾಡುವೆ..!
ಮಾತಿನ ಚಳಿಗೆ
ಸೆಟೆಯುವೆ...!
ವಿರಸದ ಮಳೆಯ ಹೊಡೆತಕ್ಕೆ
ಅಲ್ಲಾಡುವೆ..!
ಆದರೂ............
ಅವೆಲ್ಲ ನಿಂತ ಮೇಲೆ
ಪುನಃ ಮೊದಲಿನ ಲವಲವಿಕೆ..!
ಅದರಿಂದಲೇ....
ನೀನು ನನ್ನ ಮನದಾಳದಲ್ಲಿ
ಸದಾ ......ಹಸಿರು ! ನನ್ನ ..... ಉಸಿರು !
ಪ್ರತಿಕ್ರಿಯೆ (12)