‘ಅಪ್ಪ’ ನಾಟಕದಲ್ಲಿ ತೇಜಸ್

 

 

"ತನ್ನನ್ನು ತಾನು ನಿರಂತರವಾಗಿ ಶೋಧಿಸಿಕೊಳ್ಳುತ್ತಲೇ ಇರುವುದು ಮನುಷ್ಯನ ಮನುಷ್ಯತ್ವದ ಲಕ್ಷಣ. ಭೂತದ ಬೇರುಗಳಿಂದಲೇ ತನ್ನ ವರ್ತಮಾನಕ್ಕೂ, ಭವಿಷ್ಯಕ್ಕೂ ಜೀವಸತ್ವ ಅವನಿಗೆ ದೊರೆಯುವುದು. ಆದರೆ ನಮ್ಮ ವಿಚಿತ್ರ, ವಿಕ್ಷಿಪ್ತ ಸಾಮಾಜಿಕ ಸನ್ನಿವೇಶದಲ್ಲಿ ಇಂಥ ಒಂದು ಶೋಧನೆಯೇ ದುರಂತಮಯವಾಗಬಹುದು."

ಸ್ನೇಹಿತರೆ,

ಖ್ಯಾತ ಸಾಹಿತಿ ಪ್ರೊ.ಚಂದ್ರಶೇಖರ್ ಪಾಟೀಲ್ ಅವರು ರಚಿಸಿದ, ಪ್ರಖ್ಯಾತ ರಂಗ ನಿರ್ದೇಶಕ ಅಶೋಕ್ ಬಾದರದಿನ್ನಿ ಅವರು ನಿರ್ದೇಶಿಸಿದ ‘ಅಪ್ಪ’ ನಾಟಕವನ್ನು ‘ಹೆಜ್ಜೆ’ ತಂಡ ಪ್ರಸ್ತುತಪಡಿಸುತ್ತಿದೆ.

ನಮ್ಮ ಸಂಪದ ಬಳಗದ ಅನಿಲ್ ರಮೇಶ್, ಶ್ರೀಹರ್ಷ ಸಾಲಿಮಠ, ಕಿರಣ್ ವಟಿ ಮತ್ತು ನಾನು ಅಲ್ಲದೆ ಪುಟಾಣಿ ತೇಜಸ್, ಹರೀಶ್, ದರ್ಶನ್ ಗಾಯಕ್‍ವಾಡ್ ಅಭಿನಯಿಸುತ್ತಿದ್ದೇವೆ.

ಸಂಗೀತ:ಅವಿನಾಶ್ ಕಾಮತ್ (ಮುಂಬೈ). ಬೆಳಕು: ಮುಸ್ತಫಾ.
ರಂಗದ ಹಿಂದೆ ಅಪಾರ ಸ್ನೇಹಿತರು.

ದಯವಿಟ್ಟು ನಾಟಕ ನೋಡಲು ಬನ್ನಿ. ನಿಮ್ಮ ಕುಟುಂಬದವರನ್ನು, ಸ್ನೇಹಿತರನ್ನೂ ಕರೆತನ್ನಿ.

 

ಜಾಗ : ಎಡಿಎ ರಂಗಮಂದಿರ, ಜೆ ಸಿ ರೋಡ್ ಬೆಂಗಳೂರು

ದಿನಾಂಕ : ೧೪-ಆಗಸ್ಟ್-೨೦೧೦, ಶನಿವಾರ ಸಂಜೆ ೬.೪೫ಕ್ಕೆ.

 

ಟಿಕೇಟಿನ ಮುಂಗಡ ಬುಕ್ಕಿಂಗಿಗಾಗಿ '9980027189'  ನಂಬರ್ ಗೆ ಸಂಪರ್ಕಿಸಿ.