ಯಾರೂ ಕೇಳರು ನಿನ್ನ
ಸಾವಿರ ಚಿಂತನೆಗಳ
ಆಕ್ರೋಶ ಕೂಗಾಟ
ಕ್ರಮಿಸಲು
ದಾರಿ ತೋರರು
ಬದಲಾದ ಸಂಕೇತದ
ಹಸಿರಿಗೆ ತಾನವೇ ವೇಗ
ಎಲ್ಲಿಯೂ ನಿಲ್ಲದೇ
ಕ್ರಮಿಸುವ ನಿಲ್ಲದ ಪಯಣ
ಕಿತ್ತಳೆಯಲಿ ಎಚ್ಚರವಿರಲಿ
ಸರಿಯುವ ಸಂಭಂಧಗಳ
ಕಾದು ನೋಡುವ
ಯಾಂತ್ರಿಕ ಸಂಕೇತ
ನಿಂತಿತೇ ಆಸೆಗಳ ಗೋಜಲು
ಕೆಂಪಿನ ಸಂಕೇತಕೆ
ಎಚ್ಚರವಿದ್ದರೆ ಎಲ್ಲವೂ
ನಿನ್ನದೇ ಹಿಡಿತದಲ್ಲಿ
ಪಯಣ
ಕಡಿವಾಣ,
ಮತ್ತು
ರಹದಾರಿಯ
ಮುಕ್ತಾಯ.
ಪ್ರತಿಕ್ರಿಯೆ (4)