♫♫♫ಮಾತುಪಲ್ಲಟ - ೪♫♫♫

♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣

ಮಾತುಪಲ್ಲಟ ಸರಣಿಯ ನಾಲ್ಕನೇ ಹಾಡು ತಿರಕ್ಕಥ (ಮಲೆಯಾಳ ಭಾಷೆ) ಚಿತ್ರದ್ದು. ಮೂಲದ ಭಾವವನ್ನು  ಕಾಯ್ದುಕೊಣ್ಡು ಅರ್ಥಕ್ಕೆ ಆಭಾಸವಾಗದನ್ತೆ ಬರೆದಿರುವೆನೆಂಬ ನಂಬಿಕೆಯೊಡನೆ ಮುನ್ದಡಿಯಿಡುತ್ತಿರುವೆನು.

ಸಂಗೀತ : ಶರತ್♪,
ಮೂಲ ಸಾಹಿತ್ಯ : ರಫಿಕ್ ಅಹಮ್ಮದ್♪
ಹಾಡುಗಾರರು : ಮಧು ಬಾಲಕೃಷ್ಣ ಮತ್ತು ಟೀನು ಟೆಲನ್ಸ್♪ (ಪ್ರತ್ಯೇಕ ಸೋಲೋ ಹಾಡುಗಳು )

ವಿಡಿಯೋ : http://www.youtube.com/watch?v=PGw68tXT3r4

♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣

♪ಮೂಲ ಸಾಹಿತ್ಯ♪ :

ಅರಿಗಿಲ್ | ನೀ ಇಲ್ಲ ಎನ್ನ ಸತ್ಯತ್ತಿನೆ | ಅಱಿಯುವಾನ್ ಆಯದಿಲ್ಲೆನಿಕ್ಕ್ ಇಪ್ಪೋೞುಮ್ |
ಅದಿನು ಮಣ್ಣಿಲ್ ಚಿರಿಕ್ಕಾದಿರಿಕ್ಕಣಮ್ | ಇನಿ ಒರಿಕ್ಕಲುಮ್ ಪಿಚ್ಚಗ ಪೂವುಗಳ್, ಪಿಚ್ಚಗ ಪೂವುಗಳ್ ||

ಜನಲ್ ಅೞಿಗಳಿಲ್ ಪುಲರಿ ತನ್ ಪೊನ್ ವಿರಲ್ ಪದಿಯೆ ವನ್ನು ತೊಡಾದಿರಿಕ್ಕಣಮ್ |
ಒರು ನಿಶ್ಶಬ್ದಮಾಂ ಸಮ್ಮತಮೆನ್ನ ಪೋಲ್ ಪುೞಯಿಲ್ ಓಳಮ್ ಸ್ಫುರಿಕ್ಕಾದಿರಿಕ್ಕಣಮ್ |
ಪುದುಮೞ ಪೆಯ್ತಿನ್ ಆರ್ದ್ರಮಾಯ್ ಮಣ್ಣಿನ್ಡೆ ನಱುಮಣಮ್ ವೀಣ್ಡುಂ ಉಣರಾದಿರಿಕ್ಕಣಂ || ಅರಿಗಿಲ್ ||

ಚಿರಗಡಿಚ್ಚು ವನ್ನ್ ಅಂಬಲ ಪ್ರಾವುಗಳ್ ಕುಱುಕಿ ಸಂಧ್ಯಯೆ ಮೀಟ್ಟಾದಿರಿಕ್ಕಣಮ್ |
ಚೆವಿಯಿಲ್ ಎಂದೋ ಮೊೞಿಂಜ ಪೋಲ್ ಕಾಟ್ರಿನ್ಡೆ ಕುಸ್ರುದಿ ವೀಣ್ಡುಮ್ ಕಿಲುಂಗಾದಿರಿಕ್ಕಣಮ್ |
ತೆಳಿ ವೆಳಿಚ್ಚತ್ತಿಲ್ ಉಡಲಿಲ್‍ನಿನ್ನ್ ಇತ್ತಿರಿ ವೞುದಿ ಮಾಱಣಮ್ ನಿೞಲಿನೆ ವಿಟ್ಟಿನಿ |
ಅದುವರೇಯ್ಕುಮ್ ಅಱಿಯುನ್ನದ್ ಎಂಗನೆ ಅರಿಗಿಲ್ ಇಲ್ಲ ನೀ ಎನ್ನ ಸತ್ಯತ್ತಿನೆ |

♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣
♪ಭಾವಾರ್ಥ♪ :

ಸನಿಹದಲ್ಲಿ ನೀನಿಲ್ಲವೆಂಬ ಸತ್ಯವನ್ನು ನನ್ನಿನ್ದ ಗ್ರಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹಾಗಾಗಬೇಕಾದರೆ ಮಲ್ಲಿಗೆ ಹೂಗಳು ನಗುತ್ತಿರಬಾರದು, ಬೆಳಕಿಣ್ಡಿಗಳಿನ್ದ ಬೆಲಕು ಹಾಯಬಾರದು, ಮೞೆಯೇ ಸುರಿದರೂ ಅದು ಭೂಮಿಯಲ್ಲಿ ಕಂಪನ್ನು ಪಸರಿಸಬಾರದು.
ಸಂಜೆಯ ಆಗಸದಲ್ಲಿ ಪಾರಿವಾಳಗಳೂ ಹಾಱಬಾರದು. ಹಗಲಿನ ಬೆಳಕಿಗೆ ಶರೀರವ ಬಿಟ್ಟು ನೆರಳು ದೂರ ನಿಲ್ಲಬೇಕು. ಅಲ್ಲಿಯವರೆಗೂ ಸನಿಹದಲ್ಲಿ ನೀನಿಲ್ಲವೆಂಬ ಸತ್ಯವನ್ನು ನಾನು ಹೇಗೆ ಗ್ರಹಿಸಿಕೊಳ್ಳಲಿ?

♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣
♪ಮಾತುಪಲ್ಲಟ♪ :

ಸನಿಹ | ನೀನಿಲ್ಲವೆಂಬ ಸತ್ಯವನ್ನು | ತಿಳಿಯದಾದೆನು ನಾನೆನ್ನಲು |
ಅದರಿನ್ದಲೇ ಸೂಸದಿದ್ದವೊಲು ನರುಗಂಪನ್ನಾ ಹೂಗಳು |

ಜಾವ ಮುನ್ದಿನಲ್ಲಿ ಬೆಳಕಿನ ಕಿರಣವೂ ಕಿಣ್ಡಿಗಳಿನ್ದಲೇ ಹೊಗದಿದ್ದವೊಲು |
ಮೌನವೇ ಒಪ್ಪಿಗೆಯೆನ್ನುತ್ತಲೇ ಹರಿವಿನೊಳ್ ಅಲೆಗಳ ಹೆಸರೂ ಕುಡಿಯೊಡೆಯದವೊಲು |
ಹೊಸತು ನೀರನ್ನು ತಾರದ ಮೞೆಗಳು ಮಣ್ಣಿನ ಕಂಪನ್ನೂ ಉದ್ದರಿಸದಿದ್ದವೊಲು || ಸನಿಹ ||

ಬೆಳ್ಳನೆ ಬೆಳಕಿನೊಳ್ ಬೆಳ್ಳಿಚುಕ್ಕಿಗಳು ತಿಳಿಯಾಗಸದೊಳು ತೋಱದಿದ್ದವೊಲು |
ಕಿವಿಯೊಳೇನೋ ಉಸುರಿದ ಗಾಳಿಯ ಉಲಿಕೆಯೂ ಮತ್ತೆ ಕೇಳಿಸುತ್ತಿದ್ದವೊಲು |
ಸುಡುಬಿಸಿಲಿನೊಳ್ ನೆರಳನ್ನು ತೊರೆದು ದೇಹವನ್ನಿನಿತು ಸರಿಯಿಸಿದವೊಲು |
ಅದರಿನ್ದಲೇ ತಿಳಿಯಲೂ ಒಲ್ಲದು ಸನಿಹವಿಲ್ಲ ನೀನೆಂಬ ಸತ್ಯವದು |

♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣