ಬೆಲ್ಲದ ಮೂಟೆಯ ಹಿಡಿಯೊ

ಚಕ್ಕರೆ ಮೂಟೆಯ ಹಿಡಿಯೊ

ಚಿನ್ನದ ಮೂಟೆಯ ಹಿಡಿಯೊ

ನಮ್ಮ ಪುಟ್ಟಣ್ಣನ ಹಿಡಿಯೋ

ಸರಳವಾಗಿ ಬರೆದ ನಾಲ್ಕು ಸಾಲುಗಳು ಶಿಶುಪ್ರಾಸ ಗೀತವಾಗಿ ಬದಲಾಗುವ ಕೌತುಕ ಇಲ್ಲಿದೆ! ಸಾಲುಗಳನ್ನು ಹಿಂದು ಮುಂದಾಗಿ ಜೋಡಿಸಿದಾಗ ಮೂರು ಚರಣಗಳು ಆದುವು. ವಿಶೇಷ ಎಂದರೆ ಶಿಶುಪ್ರಾಸ ಗೀತವನ್ನು ಯಾವುದೇ ಪ್ರಕಾರದ ಸಂಗೀತಕ್ಕೆ ದನಿಗೂಡಿಸಬಹುದು.

ಕಂದನ ತೊದಲುನುಡಿಗಾಗಿ "ಚಕ್ಕರೆ" ಎಂಬ ಪ್ರಯೋಗ ಉದ್ದೇಶಪೂರ್ವಕ: ಇದು ಸ್ಖಾಲಿತ್ಯವಲ್ಲ.

~ಕೃಷ್ಣಪ್ರಕಾಶ ಬೊಳುಂಬು