ಆಂಗ್ಲ ಭಾಷೆಯಲ್ಲಿ ಪ್ರೋ. ಬಾಲಗಂಗಾಧರ ಅವರು ರಚಿಸಿದ ಕೃತಿ The Heathen in his Blindness…Asia the West and the Dynamics of Religion ಇದರ ಕನ್ನಡಾನುವಾದ  “ಸ್ಮೃತಿ-ವಿಸ್ಮೃತಿ : ಭಾರತೀಯ ಸಂಸ್ಕೃತಿ”  ಕೃತಿಯ ಬಿಡುಗಡೆ ಕಾರ್ಯಕ್ರಮ ತಾರೀಕು ೨೯೦೮-೨೦೧೦ನೆಯ ಭಾನುವಾರ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಯಶಸ್ವಿಯಾಗಿ ನಡೆಯಿತು. ಅಕ್ಷರ ಪ್ರಕಾಶನ, ಹೆಗ್ಗೋಡು ಪ್ರಕಟಿಸಿರುವ ಈ ಕೃತಿಯನ್ನು ಖ್ಯಾತ ಪತ್ರಕರ್ತ ರವಿ ಬೆಳೆಗೆರೆ ಲೋಕಾರ್ಪಣೆ ಮಾಡಿದರು. ಈ ಸಂಧರ್ಭದಲ್ಲಿ ಮಾತನಾಡಿದ ಅವರು ವಾಸ್ತವವನ್ನು ಅರ್ಥಮಾಡಿಕೊಳ್ಳದೆ ಸಂಸ್ಕೃತಿಯನ್ನು ಅರ್ಥಮಾಡಿಕೊಳ್ಳಳು ಸಾಧ್ಯವಿಲ್ಲ, ಹೊರಗಿನವರ ಪರಿಭಾಷೆಯಲ್ಲಿ ಒಂದು ಸಂಸ್ಕೃತಿಯನ್ನು ಅಥವಾ ಸಂಸ್ಕೃತಿಯ ಜನರನ್ನು ಅರ್ಥಮಾಡಿಕೊಂಡರೆ ಅರ್ಥ ಮಾಡಿಕೊಳ್ಳುವುದಕ್ಕಿಂತ ಆಪಾರ್ಥ ಮಾಡಿಕೊಳ್ಳುವುದೆ ಹೆಚ್ಚು ಎಂದರು. ಅನುವಾದಕ ಹಾಗೂ ಸ್ಥಳೀಯ ಸಂಸ್ಕೃತಿಗಳ ಅಧ್ಯಯನ ಕೇಂದ್ರದ ನಿರ್ದೇಶಕರಾಗಿರುವ ರಾಜಾರಾಮ ಹೆಗಡೆ ಪ್ರಾಸ್ತಾವಿಕವಾಗಿ ಮಾತನಾಡಿ  ಈ ಕೃತಿಯು ಕನ್ನಡಕ್ಕೆ ಅನುವಾದ ಮಾಡಬೇಕೆಂಬ ಕೆ.ವಿ. ಸುಬ್ಬಣ್ಣರ  ಇಛ್ಛೆಯನ್ನು ನೆನಪಿಸಿಕೊಂಡರು.  ಚರಿತ್ರಕಾರರಾಗಿ ಅನುವಾದಕರು ಒಂದು ಕಾಲಘಟ್ಟದಲ್ಲಿ ಎದುರಿಸಿದ್ದ ಪ್ರಶ್ನೆಗಳು ಮತ್ತು ಸಂಧಿಗ್ದತೆಗಳಿಗೆ ಉತ್ತರ ದೊರೆಯದೇ ಗೊಂದಲದಲ್ಲಿದ್ದಾಗ ಬಾಲಗಂಗಾಧರರೊಂದಿಗಿನ  ಸಂವಾದ ಮತ್ತು ಈ ಕೃತಿಯ ಓದು ಆ ಸಂಧಿಗ್ದಗಳಿಂದ ಹೊರಬರಲು ಹೊಸ ದಾರಿ ತೋರಿಸಿತು ಎಂದರು. ಸಮಾಜ ಮತ್ತು ಸಾಂಸ್ಕೃತಿಕ ಚಿತ್ರಣಗಳ ತುಲನಾತ್ಮಕ ಅಧ್ಯಯನಗಳಲ್ಲಿ  ಹೊಸ ಪ್ರಶ್ನೆಗಳನ್ನು ಮತ್ತು ವಾದಗಳನ್ನು ಮುಂದಿಡಲು ಈ ಕೃತಿಯ ಕನ್ನಡಾನುವಾದ ಕನ್ನಡ ಸಾರಸ್ವತ ಲೋಕಕ್ಕೆ  ನೆರವಾಗಬಲ್ಲದು ಎಂದು ಅಭಿಪ್ರಾಯಪಟ್ಟರು.  ಬೆಂಗಳೂರು  ವಿ.ವಿಯ ನಿವೃತ್ತ ಸಮಾಜ ಶಾಸ್ತ್ರ ಪ್ರಾಧ್ಯಾಪಕರಾದ ಸಿವರಾಮ ಕೃಷ್ಣನ್ ಪುಸ್ತಕವನ್ನು ಪರಿಚಯಿಸುತ್ತಾ ಈ ಕೃತಿ ಸಮಾಜವಿಜ್ಞಾನಗಳಲ್ಲಿ ಇದುವರೆವಿಗೂ ನಡೆದಿರುವ ಚರ್ಚೆಗಳಿಗೆ ಹೇಗೆ ಒಂದು ಹೊಸ ಸವಾಲನ್ನು ಇಡುತ್ತದೆ ಮತ್ತು ಇಂದಿನ ಸಮಾಜ ವಿಜ್ಞಾನಗಳು  ಈ ಸವಾಲನ್ನು ಎದುರಿಸದೆ ಇಂದಿನ ಸ್ಥಿತಿಯಲ್ಲಿಯೇ ಮುಂದುವರಿಯಲು ಹೇಗೆ ಅಸಾಧ್ಯವೆಂಬುದನ್ನು ವಿವರಿಸಿದರು. ಮುಖ್ಯವಾಗಿ, ಈ ಕೃತಿ ಹೇಗೆ ಅತ್ಯಂತ ತಾರ್ಕಿಕವಾಗಿ, ಸಮಾಜ ವಿಜ್ಞಾನಗಳಲ್ಲಿ ಬರುವ ಸಾಂಸ್ಕೃತಿಕ ಚಿತ್ರಣಗಳೆಲ್ಲವೂ ಬಹುತೇಕ ವೈಜ್ಞಾನಿಕ ಚಿತ್ರಣಗಳ ಹೆಸರಿನ ಯೂರೋಪಿಯನ್ ಅದರಲ್ಲೂ ಪ್ರೊಟೆಸ್ಟಂಟ್ ಕ್ರಿಶ್ಚಿಯಾನಿಟಿಯ ಸ್ವಗತದ ಚಿತ್ರಣವೆಂದು ಸಾಧಿಸುತ್ತದೆ ಎಂಬುದನ್ನು ಪರಿಣಾಮಕಾರಿಯಾಗಿ ಬಿಡಿಸಿಟ್ಟರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಾಮಾಜಿಕ ಮತ್ತು ಮಾನವಿಕ  ಶಾಸ್ತ್ರಗಳ ಅಕಾಡೆಮಿ ನಿರ್ದೇಶಕ ಜೆ ಎಸ್. ಸದಾನಂದ ವಹಿಸಿದ್ದರು. ಅವರು ಕೊನೆಯಲ್ಲಿ ಮಾತನಾಡುತ್ತಾ ಇಂದಿನ ಸಮಾಜ ವಿಜ್ಞಾನದ ಚರ್ಚೆಯಲ್ಲಿ ಸಿದ್ಧಾಂತಗಳ ಕುರಿತ ವಾದ ಚರ್ಚೆಗಿಂತ ಸಿದ್ಧಾಂತ ತವನ್ನು ಮುಂದಿಡುತ್ತಿರುವ ವ್ಯಕ್ತಿ ಮತ್ತು ಅವರ ಹಿನ್ನೆಲೆ, ಉದ್ದೇಶಗಳ ಕುರಿತ ವಿಮರ್ಶೆ ಟೀಕೆಗಳೇ ಹೆಚ್ಚಾಗುತ್ತಿದೆ ಹಾಗೂ ಈ ರೀತಿಯ ಬೆಳವಣಿಗೆಗಳು ಸಮಾಜ ವಿಜ್ಞಾನಗಳನ್ನು ಕೊಂದುಕೊಳ್ಳುವ ಸುಲಭ ಮಾರ್ಗವಾಗುವುದೇ ವಿನಃ ಹೊಸ ವಾದ ಅಥವಾ ಚರ್ಚೆಗಳನ್ನು ಹುಟ್ಟುಹಾಕಲಾರದು ಎನ್ನುವ  ಆತಂಕವನ್ನು ವ್ಯಕ್ತಪಡಿಸಿದರು. ಇಂದಿನ ಸಮಾಜವಿಜ್ಞಾನವನ್ನು ಬೋದಿಸುತ್ತಿರುವ ನಮಗೆ ನಮ್ಮ  ಬೋದನೆ ಸಮಾಜದ ವಾಸ್ತವವನ್ನು ಹಿಡಿದಿಡುತ್ತಿಲ್ಲವೆಂಬುದು ಅರಿವಿಗೆ ಬರುತ್ತಿರುವುದರಿಂದ ಸಮಾಜ ವಿಜ್ಞಾನದಲ್ಲಿ ಆಸಕ್ತಿ ಹೆಚ್ಚಿಸಲು ಮತ್ತು ಸಾಮಾಜಿಕ ಸಮಸ್ಯೆಗಳ ಸೂಕ್ತ ಪರಿಹಾರಗಳಿಗೆ ಸಮಾಜದ ವಾಸ್ತವವನ್ನು ಹಿಡಿದಿಡುವ ಸಿದ್ದಾಂತಗಳ ರೂಪಣೆಗೆ ಮುಂದೊಡಗುವುದು ಅನಿವಾರ್ಯವಾಗಿದೆ ಮತ್ತು ಈ ಕೃತಿ ಈ ನಿಟ್ಟಿನಲ್ಲಿ ಹೊಸ ಹೆಜ್ಚೆಯಾಗಿದೆ ಎಂದು ಆಶಿಸಿದರು.

 

ಕಾರ್ಯಕ್ರಮದ ಒಂದು ನೋಟ ಇಲ್ಲಿದೆ...

 

 

___LINK_OPEN_href="http://cslcku.wordpress.com/" target="_blank"___ಸಭಾ ಮಂಟಪ

 

 

___LINK_OPEN_href="http://cslcku.wordpress.com/" target="_blank"___ಅತಿಥಿಗಳು : ರವಿ ಬೆಳಗೆರೆ, ಜೆ.ಎಸ್.ಸದಾನಂದ, ಜಿ. ಸಿವರಾಮಕೃಷ್ಣನ್, ರಾಜಾರಾಮ ಹೆಗಡೆ

 

 

___LINK_OPEN_href="http://cslcku.wordpress.com/" target="_blank"___ಷಣ್ಮುಖ. ಎ : ಸ್ವಾಗತ

 

 

___LINK_OPEN_href="http://cslcku.wordpress.com/" target="_blank"___ರಾಜಾರಾಮ ಹೆಗಡೆ : ಪ್ರಸ್ತಾವನೆ

 

 

___LINK_OPEN_href="http://cslcku.wordpress.com/" target="_blank"___ಲೋಕಾರ್ಪಣೆ : ರವಿ ಬೆಳಗೆರೆ, ಜೆ.ಎಸ್.ಸದಾನಂದ, ಜಿ. ಸಿವರಾಮಕೃಷ್ಣನ್, ರಾಜಾರಾಮ ಹೆಗಡೆ

 

 

___LINK_OPEN_href="http://cslcku.wordpress.com/" target="_blank"___ಲೋಕಾರ್ಪಣೆ : ರವಿ ಬೆಳಗೆರೆ, ಜೆ.ಎಸ್.ಸದಾನಂದ, ಜಿ. ಸಿವರಾಮಕೃಷ್ಣನ್, ರಾಜಾರಾಮ ಹೆಗಡೆ

 

 

___LINK_OPEN_href="http://cslcku.wordpress.com/" target="_blank"___ರವಿ ಬೆಳಗೆರೆ : ನನ್ನ ಮಾತು

 

 

___LINK_OPEN_href="http://cslcku.wordpress.com/" target="_blank"___ಜಿ. ಸಿವರಾಮಕೃಷ್ಣನ್ : ಕೃತಿ ಪರಿಚಯ

 

 

___LINK_OPEN_href="http://cslcku.wordpress.com/" target="_blank"___ಜೆ.ಸದಾನಂದ : ಅಧ್ಯಕ್ಷೀಯ ನುಡಿ

 

 

___LINK_OPEN_href="http://cslcku.wordpress.com/" target="_blank"___ಶಂಕರಪ್ಪ : ಧನ್ಯವಾದಗಳೊಂದಿಗೆ

 

 

___LINK_OPEN_href="http://cslcku.wordpress.com/" target="_blank"___ಮಾತು ಕಥೆ ನಿರಂತರ...

 

 

___LINK_OPEN_href="http://cslcku.wordpress.com/" target="_blank"___ರವಿ ಬೆಳಗೆರೆಯೊಂದಿಗೆ ಅನುವಾದಕರು

 

 

___LINK_OPEN_href="http://cslcku.wordpress.com/" target="_blank"___ಸಂಪದದ ಗೆಳೆಯರು ಹರೀಶ್ ಆತ್ರೇಯ, ಆಸು ಹೆಗ್ಡೆ, ಭಾಸ್ಕರ ಮೈಸೂರು, ಸಾತ್ವಿಕ್, ಅರವಿಂದ್ ಮತ್ತು ಗಿರೀಶ್ ರಾಜ್ನಾಳ್

 

 

___LINK_OPEN_href="http://cslcku.wordpress.com/" target="_blank"___ಸಂಪದದ ಗೆಳೆಯರು ಪ್ರವೀಣ್ ಕೋಣಂದೂರು, ಹರೀಶ್ ಆತ್ರೇಯ, ಆಸು ಹೆಗ್ಡೆ, ಕಿರಣ್ ಗಾಜನೂರು, ಸಂತೋಷ್ ನವುಲೆ, ಶಂಕ್ರಪ್ಪ, ಭಾಸ್ಕರ ಮೈಸೂರು, ಸಂದೀಪ,  ಸಾತ್ವಿಕ್, ಅರವಿಂದ್ ಮತ್ತು ಗಿರೀಶ್ ರಾಜ್ನಾಳ್

 

 

___LINK_OPEN_href="http://cslcku.wordpress.com/" target="_blank"___ಸಂಪದದ ಗೆಳೆಯರು ರವಿ ಬೆಳೆಗೆರೆಯೊಂದಿಗೆ
ಹರೀಶ್ ಆತ್ರೇಯ, ಆಸು ಹೆಗ್ಡೆ,  ಸಾತ್ವಿಕ್, ಅರವಿಂದ್,  ಗಿರೀಶ್ ರಾಜ್ನಾಳ್ ಮತ್ತು ಸಂದೀಪ್