(೧೭೬) ಬೇಸರದ ಅತ್ಯಂತ ಆಸಕ್ತಿಕರವಾದ ವಿಷಯವೆಂದರೆ ಅದನ್ನು ಕುರಿತಾದ ಯಾವುದೇ ಆಸಕ್ತಿ ಯಾರಲ್ಲಿಯೊ ಇಲ್ಲದಿರುವುದು. ಮತ್ತು ಅದರ ತುಂಬ ಅದನ್ನು ಕುರಿತೇ ಬೇಸರ ತುಂಬಿತುಳುಕುತ್ತಿರುತ್ತದೆ!

(೧೭೭) ಪಂಚೇಂದ್ರೀಯಗಳ ಸಾಮರ್ಥ್ಯ ಮೀರಿದ ಚಟುವತಿಕೆಯಲ್ಲಿ ತೊಡಗಿಕೊಳ್ಳುವುದನ್ನು ದೆವ್ವವೆನ್ನುತ್ತೇವೆ. ಅದು ಕಡೆಗಣಿಸಿರುವ ಒಂದೇ ಅಂಶವೆಂದರೆ: ನೈತಿಕತೆ!

(೧೭೮) ಚರ್ಚಿಸುತ್ತಿರುವ ವಿಷಯವನ್ನು ಕುರಿತು ಒಂದು ಒಪ್ಪಂದಕ್ಕೆ ಬರುವುದು ಅಸಾಧ್ಯವೆಂದು ಮನವರಿಕೆ ಮಾಡಿಕೊಳ್ಳಲು ಒಂದೆಡೆ ಸೇರುವುದನ್ನು ’ಭೇಟಿ’ ಎನ್ನುತ್ತೇವೆ!

(೧೭೯) ಅಸಾಧ್ಯವೆಂದು ಗೊತ್ತಿದ್ದರೂ ಒಂದು ಜೀವಿತಾವಧಿಯಷ್ಟು ಕಾಲ ಮತ್ತೊಬ್ಬರ ಬಹುಮುಖಿ ವಿಶ್ಲೇಷಣಾ ದೃಷ್ಟಿಗೆ ನಮ್ಮನ್ನು ಒಡ್ಡಿಕೊಳ್ಳುವುದನ್ನು ವಿವಾಹಬಂಧನವೆನ್ನುತ್ತೇವೆ!

(೧೮೦) ಒಂದು ಜೊತೆ ಪಾದರಕ್ಷೆಯು ಜಗತ್ತನ್ನು ಒಂದು ಜೋಡಿ ಕೊಳಕುಪಾದಗಳಿಂದ ರಕ್ಷಿಸುತ್ತವೆ!