(೧೮೧) ಅರ್ಥಹೀನವಾಗಿ ನಡೆದುಕೊಳ್ಳುವುದು ನನಗೆ ಬಹಳ ಇಷ್ಟ ಏಕೆಂದರೆ ಅದನ್ನು ರೂಢಿಸಿಕೊಳ್ಳಲು ಮೊಲಭೂತ ಪರಿಜ್ಞಾನದ ಅವಶ್ಯಕತೆಯೊ ಇರುವುದಿಲ್ಲ!
(೧೮೨) ನಾನು ಮುಂದೆಂದಾರರೂ ನಿನ್ನನ್ನು ನೆನೆಸಿಕೊಂಡಿದ್ದೇ ಅದಲ್ಲಿ ಆಶ್ಚರ್ಯಪಡುವ ಅವಶ್ಯಕತೆಯೇನಿಲ್ಲ. ಮಧ್ಯದಲ್ಲಿ ನಾನು ನಿನ್ನನ್ನು ಮರೆತುಹೋಗಿದ್ದೆ ಎಂದು ಅದರರ್ಥ!
(೧೮೩) ಅತ್ಯಂತ ಆಕರ್ಷಕ ವ್ಯಕ್ತಿಯ ವಿಳಾಸವು ಕಲ್ಪನೆಯಲ್ಲಿದೆ!
(೧೮೪) ಅಂತಿಮ ಉತ್ತರ ಹುಡುಕುತ್ತಿರುವ ನಿರಂತರ ಸೋಲುವ ಯೋಜನೆಯನ್ನು ’ಹಬ್ಬ’ ಎಂದು ವಿಂಗಡಿಸಿ, ಅದನ್ನು ವಿಜೃಂಭಣೆಯಿಂದ ಆಚರಿಸುತ್ತೇವೆ!
(೧೮೫) ಜೀತಪದ್ಧತಿಯ ಅನೇಕ ವೃತ್ತಗಳ ಒಟ್ಟಾರೆ ಸಂಗ್ರಹವು ಒಂದು ಸರಪಳಿಯಾಗುತ್ತದೆ. ಅದರೊಳಗೆ ಮತ್ಯಾವುದೋ ಒಂದು ವೃತ್ತವು ಸರಪಳಿಯ ಹೃದಯಭಾಗವನ್ನೇ ಛೇದಿಸಿ ಹೋಗುತ್ತಿರುವುದರ ಬಗ್ಗೆ ಪ್ರತಿ ವೃತ್ತವೂ ಅಜ್ಞಾನದಿಂದಿರುತ್ತದೆ!
ಪ್ರತಿಕ್ರಿಯೆ (1)