ಮನೆಯಲ್ಲಿ ಬಡತನ, ದಿನದ ಕೂಳಿಗೂ ತತ್ವಾರ. ಆದರೂ ಮಗನಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸಲೇಬೇಕು. ಪ್ರಾಥಮಿಕ ಹಂತ ಮುಗಿದ ನಂತರ ಪಟ್ಟಣದ ಹಾಸ್ಟೆಲ್್ಗೆ ಸೇರಿದ ಮಗನಿಗೆ ತಿಂಗಳಿಗೆ ಎಂದು ಕಷ್ಟಪಟ್ಟು ಹಣ ನೀಡುವುದು. ಮಗನೂ ಹಾಗೆ ತಂದೆ ತಾಯಿಯರು ಕಷ್ಟ ಪಡುತ್ತಿದ್ದಾರೆ ಎನ್ನುವ ಕಾರಣಕ್ಕೆ ಒಂದೇ ಜೊತೆಯ ಡ್ರೆಸ್, ಲೈಬ್ರಿಯಿಂದ ಪುಸ್ತಕ ತಂದು ಓದುವುದು. ರಾತ್ರಿ ಹೊತ್ತಿನ ಊಟಕ್ಕೆ ಬ್ರೇಕ್. ಇತರರು ಫಿಲ್ಮ್ಗೆಗೆ ಹೋದರೂ ತಂದೆ ತಾಯಿಯ ಹಣ ವ್ಯರ್ಥ ಮಾಡಬಾರದೆಂಬ ಕಾರಣಕ್ಕೆ ಹಾಸ್ಟೆಲ್ ನಲ್ಲೇ ಇದ್ದು ಓದುವುದು. ಹೀಗೆ ತನ್ನ ಎಲ್ಲಾ ಕನಸುಗಳಿಗೂ ಕಡಿವಾಣ ಹಾಕುತ್ತಾ ಬದುಕುತ್ತಾನೆ. ಮುಂದೊಂದು ದಿನ ನನ್ನ ಪೋಷಕರನ್ನು ಚೆನ್ನಾಗಿಯೇ ನೋಡಿಕೊಳ್ಳಬೇಕೆಂಬ ಏಕೈಕ ಉದ್ದೇಶ ಹೊಂದಿದ ಮಗ ಇನ್ನಿಲ್ಲದಂತೆ ಕಷ್ಟಪಟ್ಟು ಓದುತ್ತಾನೆ. ಹಾಗೇ ಉತ್ತಮ ಅಂಕಗಳೊಂದಿಗೆ ತೇರ್ಗಡೆಯಾಗುತ್ತಾನೆ.
ಮುಂದೊಂದು ದಿನಾ ನೌಕರಿಯೂ ಸಿಗುತ್ತದೆ.
ಇದೀಗ ಕೈಯಲ್ಲಿ ಹಣ ಓಡಾಡುತ್ತಿದೆ. ಮೊದಲು ತನ್ನ ಆಸೆಗಳನ್ನು ಈಡೇರಿಸಿಕೊಂಡು ನಂತರ ತಂದೆ ತಾಯಿಯನ್ನು ಪಟ್ಟಣಕ್ಕೆ ಕರೆಸಿದರಾಯಿತು ಎಂಬ ಚಿಂತನೆ ಆರಂಭವಾಗುತ್ತದೆ. ಇನ್ನಿಲ್ಲದ ಬಟ್ಟೆಗಳು, ಸ್ನೇಹಿತರೊಂದಿಗೆ ವೀಕ್ ಎಂಡ್ನಲ್ಲಿ ಪಬ್, ಡ್ಯಾನ್ಸ್, ಅವಶ್ಯಕತೆ ಇಲ್ಲದೇ ಹೋದರೂ ಎರೆಡೆರಡು ಮೊಬೈಲ್, ವಾಶಿಂಗ್ ಮಿಷಿನ್, ಪಾಶ್ ಏರಿಯಾದಲ್ಲಿ ಬಾಡಿಗೆ ಮನೆ, ಕ್ರೆಡಿಟ್ ಕಾರ್ಡ್ ಹೀಗೆ ಮೋಜು ಆರಂಭವಾಗುತ್ತಾ ಹೋಗುತ್ತದೆ. ಬರುವ ಸಂಬಳಕ್ಕಿಂತ ಸಾಲ ಹೆಚ್ಚಾಗಿರುತ್ತದೆ. ಸಾಲ ತೀರಿದ ಮೇಲೆ ಮನೆಗೆ ಪ್ರತೀ ತಿಂಗಳು ಹಣ ಕಳಿಸುತ್ತೇನೆ. ಅವರನ್ನು ಸಂತೋಷವಾಗಿ ಇಟ್ಟೇ ಇಡುತ್ತೇನೆ ಎನ್ನುವ ರಾತ್ರಿ ಮಲಗುವಾಗ ಪ್ರತಿಜ್ಞೆ. ಇಷ್ಟೆಲ್ಲಾ ಇದೆ. ಹೇಗಿದ್ದರೂ ಸಾಲವಂತೂ ತೀರಿಸುತ್ತಲೇ ಇದ್ದೇನೆ. ಒಂದು ಮನೆ ತೆಗೆದುಕೊಂಡರೆ ಹೇಗೆ. ಅದೂ ನಡೆದು ಹೋಗುತ್ತದೆ. ಮತ್ತಷ್ಟು ಸಾಲ. ಇದೆಲ್ಲಾ ಸಾಲ ತೀರಿಸುವಷ್ಟರಲ್ಲಿ ಮಗನಿಗೆ 50ವರ್ಷ. ಅಪ್ಪ ಅಮ್ಮ ಕೂಲಿ ಮಾಡುವುದು ತಪ್ಪಿರಲಿಲ್ಲ. ಅವರೀಗ ಅಜ್ಜ, ಅಜ್ಜಿ. ಅವರಿಗೆ ಸಹಾಯ ಮಾಡಬೇಕು ಎನ್ನುವಷ್ಟರಲ್ಲಿ ತನ್ನ ಮಕ್ಕಳ ಭವಿಷ್ಯ ಕಣ್ಣು ಮುಂದೆ. ಹಾಗಾದರೆ ಕಡೇ ತನಕ ಮಗ ಅಪ್ಪ, ಅಮ್ಮನಿಗೆ ಏನೂ ಮಾಡಲೇ ಇಲ್ಲಾ. ಇಲ್ಲ.
ವಿದ್ಯಾರ್ಥಿಯಾಗಿದ್ದಾಗ ಅವನು ಪಟ್ಟ ಹಸಿವು, ಕನಸುಗಳಿಗೆ ಕಡಿವಾಣ ಹಾಕಿ ಕಷ್ಟಪಟ್ಟಿದ್ದೇನೋ ನಿಜ. ಆದರೆ ಅವನಿಗೆ ಕೆಲಸ ಸಿಕ್ಕಾಗ ಬರುವ ಆದಾಯದಲ್ಲಿ ವಿನಾಕಾರಣ ಖರ್ಚು ಮಾಡದೆ ಹಣ ಇಟ್ಟಿದ್ದರೆ. ಪೋಷಕರೂ ಚೆನ್ನಾಗಿರುತ್ತಿದ್ದರು. ಇವನು ಸಾಲದ ಭಾದೆಯಿಂದ ತನ್ನ ಅರ್ಧ ಆಯಸ್ಸನ್ನು ಕಳೆಯುವಂತೆಯೂ ಇರಲಿಲ್ಲ. ಕಡೆಗೆ ಅಂದುಕೊಂಡ ಕನಸುಗಳು, ಮಾಡಿದ ಪ್ರತಿಜ್ಞೆಗಳು ಹಾಗೇ ಉಳೆದು ಬಿಡುತ್ತದೆ. ಕನಸು ಹೊತ್ತ ತಂದೆ ತಾಯಿ ಸಾಯುವವರೆಗೂ ಕೂಲಿ ಮಾಡಿಕೊಂಡೇ ಜೀವನ. ಕೆಲಸ ಸಿಕ್ಕಿತು ಎಂಬ ಒಂದೇ ಕಾರಣಕ್ಕೆ ಇತರರನ್ನು ಅನುಸರಿಸುತ್ತಾ ಜೀವಿಸಿದರೆ ಜೀವನ ಹೀಗೆ ಸಾಗುತ್ತದೆ. ಅದಕ್ಕೆ ಅನ್ನೋದು ಲಾಳ ಸಿಕ್ಕಿತು ಅಂತಾ ಕುದುರೆಕೊಂಡರೆ ಹೀಗೆ ಆಗೋದು.
ಪತ್ರಕರ್ತ ರವಿಬೆಳಗೆರೆಯವರ ಲೇಖನದಿಂದ ಕೆಲ ಸಾಲುಗಳನ್ನು ಆಯ್ದುಕೊಂಡಿದ್ದೇನೆ.
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!