ಸೃಷ್ಟಿಯ ಕಾರ್ಮುಗಿಲಿನ ಕಣ್ತುಂಬಲು ಧರೆಯರಳಿದೆ
ಜಗವೆ ಕುಣಿದಾಡುತ ಮಳೆಬಿಲ್ಲನು ಬರೆದಂತಿದೆ
ಮುಸ್ಸಂಜೆಯ ತಂಪಲಿ ನಿನ್ನೊಲವಿನ ಸವಿಯಿದೆ
ಉನ್ಮಾದದ ನಷೆಯಲಿ ಹಿತವಾದ ಖುಷಿಯಿದೆ
ಪ್ರೀತಿಯಿಂದ ಎದುರಾಗುವೆ ತುಸುವಾದರು ಕಾಡದೆ
ನೆನಪುಗಳ ಸೆರೆಮನೆಯಲಿ ಬಂಧಿಯಾದ ಬದುಕಿಗೆ
ಅಳಿಸಿ ಅಳಿಸಿ ನನಗಾಗಿ ನೀ ಬರೆದ ಓಲೆಯಿದೆ
ಅನುಕ್ಷಣ ಜೀವತುಂಬುತ ಮಿಡಿಯದ ಹೃದಯಕೆ
ಸಂಧ್ಯೆಯ ಮಳೆಯಲಿ ಮಿಂಚಾಗಿ ನೀ ಬಂದು
ನೆಮ್ಮದಿಗೆ ನೆಲೆಯಾದ ಕಾರಣವಾದರು ಏನಿದೆ ??
ದೈವವೆ ಹರಸಲು ನಮ್ಮಿಬ್ಬರ ಭಾಂಧವ್ಯಕೆ
ಅರಿಯದೆ ಮೌನಿಯಾದೆ ವರ್ಷಧಾರೆಯ ಸಾಕ್ಷಿಗೆ
- ಪ್ರಮೋದ್ ಗೌಡ
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
ಮತ್ತೆ ಮತ್ತೆ ಒಲವು
ಒಂದೆರಡು ಸಾಲು
ಕಿಟಕಿ ಪಕ್ಕದ ಹುಡುಗಿ
"ನೆನಪುಗಳ" ಪೋಣಿಸಿ ಬರೆದ “ಹನಿ”ಗಳು...1
ಮಾನವ ಜನ್ಮ ದೊಡ್ಡದು
ತಿಳಿಯದೋ ನಿನ್ನಾಟ..ರಚನೆ ಹೆಳವನಕಟ್ಟೆ ಗಿರಿಯಮ್ಮ
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (6)