(೨೧೬) ಪ್ರಯಾಣವೊಂದರ ಮಧ್ಯಭಾಗದಲ್ಲಿರುವುದರ ಅರ್ಥವೇನೆಂದರೆ ಸುಸ್ತಾಗಿ ಹಿಂದಿರುಗಿಬಿಡಬೇಕೆನ್ನಿಸಿದಾಗ, ಹಾಗೆ ಮಾಡಲು ಎಷ್ಟು ಶ್ರಮ ಬೇಕೋ ಅಷ್ಟೇ ಶ್ರಮ ಸಾಕು ಅಲ್ಲಿಂದ ಮುನ್ನುಗ್ಗಿ ಪ್ರಯಾಣ ಪೂರೈಸಿಬಿಡಲು!
(೨೧೭) ಸಾಕುಪ್ರಾಣಿಗಳು ಸತ್ತಾಗ ಜನ ಅಳುವುದಕ್ಕೆ ಕಾರಣಃ ನೈಸರ್ಗಿಕ ಬದುಕಿನಿಂದ ಪ್ರಾಣಿಗಳನ್ನು ಬೇರ್ಪಡಿಸಿ, ಸಾಕುಪ್ರಾಣಿಗಳನ್ನಾಗಿ ಪರಿವರ್ತಿಸಿದ ಅಪರಾಧಕ್ಕೆ ಶಿಕ್ಷೆಯ ರೂಪದಲ್ಲಿ ಅವರಿಗೆ ದೊರಕುವ ದುಃಖ!
(೨೧೮) ಸಾಹಸಮಯ ಸೋಲು ಸೋಂಬೇರಿತನದ ಗೆಲುವಿಗಿಂತಲೂ ಪ್ರಯೋಜನಕಾರಿ.
(೨೧೯) ತಪ್ಪು ಮಾಡುವುದು ಮನುಷ್ಯನಿಗೆ ಸಹಜ ಏಕೆಂದರೆ ತಪ್ಪಿಗೆ ಅಪರಾಧೀಭಾವವೆಂಬ ಪರಿಹಾರವನ್ನು ತನಗೆ ತಾನೇ ಸೂಚಿಸುವವನೂ ಅವನೇ!
(೨೨೦) ಎಲ್ಲರಲ್ಲೂ ’ತಿಳುವಳಿಕೆ’ ಇದ್ದೇ ಇರುತ್ತದೆ. ಕೆಲವರು ’ತಿಳುವಳಿಕೆ’ ಇರುವವರಾದರೆ ಮಿಕ್ಕವರು ’ತಿಳುವಳಿಕೆ’ ಇಲ್ಲದವರು, ಅಷ್ಟೇ!
ಪ್ರತಿಕ್ರಿಯೆ (2)