ಭಾನುವಾರದ ಬೇಸರಗಳು,  ಉಮಾ ಚಿತ್ರಮಂದಿರಗಳು,  ಒಂದು ಗಂಟೆಯ ಆಟಗಳು,

ಪಂಚರಂಗಿ ಸಿನಿಮಾಗಳು,  ನಿಧಿ ಸುಬ್ಬಯ್ಯನ ಮುದ್ದು ಮುಖಗಳು,

ದಿಗಂತನ ಗಳು, ಗಳು, ಗಳು ಸಂಭಾಷಣೆಗಳು,  ರಾಜು ತಾಳಿಕೋಟೆಯ ಹಾಸ್ಯ ಸಂಭಾಷಣೆಗಳು,

 ಮೈಲಾರಿ ಪಾತ್ರಧಾರಿಯ ಅಭಿನಯಗಳು, ಪದ್ಮಜಾರಾವ್ ಗಳು, ಸುಧಾ ಬೆಳವಾಡಿಗಳು,

ಸುಂದರ್ ರಾಜ್ ಗಳು,  ಲತಾ ಪಾತ್ರಧಾರಿಗಳು,  ಲಕ್ಷ್ಮಿ ಪಾತ್ರಧಾರಿಗಳು,

ವಿಂಗ್ರಾ ಪಾತ್ರಧಾರಿಗಳು,  ಅನಿರೀಕ್ಷಿತವಾಗಿ ಬರುವ ಅನಂತ್ ನಾಗ್ ಗಳು,  ಪ್ರಿಯಾಂಕ ಉಪೇಂದ್ರಗಳು,

ಕಡಲ ಕಿನಾರೆಗಳು,  ಲೈಫು ಇಷ್ಟೇನೆ ಹಾಡುಗಳು, ಸುಂದರ ಹಾಸ್ಯ ಸನ್ನಿವೇಶಗಳು,  ಪ್ರೇಮ ಸನ್ನಿವೇಶಗಳು,

ಭಟ್ಟರ ಹಿನ್ನೆಲೆ ಧ್ವನಿಗಳು,  ಮನಸ್ಸಿಗೆ ಮುದ ನೀಡುವ ಸಂಗೀತಗಳು,  ಸಾಹಿತ್ಯಗಳು, 

ಕಳೆದವು ಭಾನುವಾರದ ಬೇಸರಗಳು.

 

ಬಹಳ ದಿನಗಳ ನಂತರ ಕಂಡ ಒಂದು ಸುಂದರ ಸಿನಿಮಾ ಪಂಚರಂಗಿ..ನೋಡಿಲ್ಲದಿದ್ದರೆ ಆದಷ್ಟು ಬೇಗ

ನೋಡಿ...ನೀವು ಆನಂದಿಸಿ.

 

ಅಂದ ಹಾಗೆ ಈ ವಾರಾಂತ್ಯಗಳು, ಕಂಡ ಸಿನಿಮಾಗಳು, ನಾಲ್ಕುಗಳು..."ದಬಾಂಗ್" ಗಳು, "ಪಂಚರಂಗಿ"

ಗಳು,"ಮಠ" ಗಳು, "೩ ಈಡಿಯಟ್ಸ್" ಗಳು.