(೨೩೬) ವಿಚ್ಛೇದಿತ/ತೆ ಉವಾಚ: ಸ್ವರ್ಗದಲ್ಲಿ ವಿವಾಹವು ನಡೆದರೂ ನರಕದಲ್ಲಿ ಅದು ಸಾಕಾರಗೊಳ್ಳುತ್ತದೆ. ಆದರೆ ಅದನ್ನು ಭೂಮಿ ಎಂದು ತಪ್ಪಾಗಿ ಭಾವಿಸಲಾಗುತ್ತದೆಯಷ್ಟೇ!

(೨೩೭) ನೀವು ಸಿನೆಮ-ವ್ಯಸನಿಗಳಾಗಿದ್ದಲ್ಲಿ (ಫಿಲ್ಮೊಹಾಲಿಕ್)--ಎಷ್ಟೊಂದು ಚಲನಚಿತ್ರಗಳು ಸೃಷ್ಟಿಯಾಗಿವೆಯೆಂದರೆ--ದೈನಂದಿನ ಬದುಕೆಂಬುದು ಒಂದು ಜಾಹಿರಾತಿನ ವಿರಾಮವಷ್ಟೇ ಆಗಿಬಿಡುತ್ತದೆ!

(೨೩೮) ವೃದ್ಧರಾಗುವುದೆಂಬುದು ಯೌವ್ವನದ ’ನಂತರ’ದ ಸ್ಥಿತಿಯಲ್ಲ. ಬದಲಿಗೆ ಯೌವ್ವನದ ಸೋಂಬೇರಿತನವನ್ನು ಸರಿಪಡಿಸಿಕೊಳ್ಳಲಿರುವ ಸುದೀರ್ಘ ’ಅವಕಾಶ’.

(೨೩೯) ನಶ್ವರವಾದಿ: ದೇವರಾಣೆಗೂ ಆತನನ್ನೇ ಕುರಿತು ನನ್ನಲ್ಲಿ ಸಾಕಷ್ಟು ’ಗೊಂದಲ’ವಿದೆ; ಹಾಗೂ ಈ ಅನಿರ್ದಿಷ್ಟತೆಯನ್ನು ನಶ್ವರತೆ ಎಂದು ’ನಿರ್ದಿಷ್ಟ’ವಾಗಿ ವರ್ಗೀಕರಿಸ ಬಯಸುತ್ತೇನೆ!

(೨೪೦) ಪ್ರತಿದಿನ, ನಿರಂತರವಾಗಿ, ನಿಮ್ಮೊಂದಿಗಿನ ಸಂದರ್ಶನವನ್ನು ಮುಂದೂಡುವಾತನನ್ನು--ಆತ ಈಗಾಗಲೇ ಸತ್ತಿದ್ದರೂ ಸಹ--ಮತ್ತೊಮ್ಮೆ , ಎಂದೋ ಭೇಟಿಯಾಗುತ್ತೇನೆಂದು ನಿರೀಕ್ಷೆ ಇರಿಸಿಕೊಳ್ಳುವ ಸಾಮರ್ಥ್ಯವನ್ನು ’ಆಶಾವಾದ’ವೆನ್ನುತ್ತೇವೆ!