ಮೊದಲೆಲ್ಲ ಹೆಣ್ಣು ಹೆತ್ತವರು ತಮ್ಮ ಮಗಳಿಗೆ ಒಬ್ಬ ಗಂಡು ಹುಡುಕಿ ಮಾಡುವೆ ಮಾಡಿಬಿಟ್ಟರೆ ಸಾಕಪ್ಪ ಎನ್ನುವ ಪರಿಸ್ಥಿತಿ ಇತ್ತು..
ಅಂದರೆ ಆಗ ಹುಡುಗರಿಗೆ ಬೇಡಿಕೆ ಇತ್ತು...ಕಾಲಾನಂತರದಲ್ಲಿ ಪರಿಸ್ಥಿತಿ ಬದಲಾಗಿದೆ...ಈಗ ಗಂಡು ಹೆತ್ತವರು ತಮ್ಮ ಮಗನಿಗೆ
ಒಂದು ಹುಡುಗಿ ಸಿಕ್ಕರೆ ಸಾಕು ಎನ್ನುವ ಪರಿಸ್ಥಿತಿ ಬಂದೊದಗಿದೆ...
ಮುಂಚೆ ಹುಡುಗ ಒಂದು ಒಳ್ಳೆ ಕೆಲಸದಲ್ಲಿ ಇದ್ದರೆ ಸಾಕು...ಅದರಲ್ಲೂ ಸರ್ಕಾರಿ ನೌಕರಿ ಇದ್ದು ಬಿಟ್ಟರಂತೂ ಹಿಂದೂ ಮುಂದು ನೋಡದೆ
ಧಾರೆ ಎರೆದುಕೊಡುತ್ತಿದ್ದ ಹೆಣ್ಣಿನ ಮಾತಾ ಪಿತೃಗಳು ಈಗ ಅವರು ಇದುವ ಬೇಡಿಕೆಗಳನ್ನು ಕಂಡರೆ ಬೇಸರ ತರಿಸುವುದು...
ಹುಡುಗ ಬಿ.ಇ., ಎಂ.ಬಿ.ಎ,, ಎಂ.ಬಿ.ಬಿ.ಎಸ. ಓದಿರಬೇಕು, ಹುಡುಗನಿಗೆ ಐ.ಟಿ. ಕಂಪನಿ ಯಲ್ಲಿ ಸಾಫ್ಟ್ವೇರ್ ಕೆಲಸ ಇರಬೇಕು,ತಿಂಗಳಿಗೆ
೩೦,೦೦೦ - ೪೦,೦೦೦ ಸಾವಿರ ಅಥವಾ ೫೦,೦೦೦ ಸಾವಿರ ಬಂದರು ಪರವಾಗಿಲ್ಲ, ಬೆಂಗಳೂರಿನಲ್ಲಿ ಸ್ವಂತ ಮನೆ ಇರಬೇಕು, ಓಡಾಡಲು
ಕಾರ್ ಇರಬೇಕು...ಇವಿಷ್ಟು ಕನಿಷ್ಠ ಕೋರಿಕೆಯಾದರೆ...ಇನ್ನು ಕೆಲ ಹುಡುಗಿಯರು ಇನ್ನು ಒಂದು ಹೆಜ್ಜೆ ಮುಂದು ಹೋಗಿ..ಮದುವೆಯ
ನಂತರ ಬೇರೆ ಮನೆ ಮಾಡಬೇಕು, ಅಪ್ಪ, ಅಮ್ಮ, ಒಡಹುಟ್ಟಿದವರು ಜೊತೆಯಲ್ಲಿ ಇರಬಾರದು...ಈ ತರಹದ ಕೋರಿಕೆಗಳನ್ನು
ಮುಂದಿಡುತ್ತಾರೆ..
ಕೆಲ ಹುಡುಗಿಯರು ತಾವು ಓದಿಕೊಂಡಿರುವುದು ಕಮ್ಮಿಯಾದರೂ ತನಗೆ ಬರುವ ಹುಡುಗ ಮಾತ್ರ ಬಿ.ಇ. ನೆ ಓದಿರಬೇಕು ಎನ್ನುತ್ತಾರೆ...
ಇಂತಹವರಿಗೆ ಏನೆನ್ನಬೇಕು...ಇವರಿಗೆ ಹುಡುಗ ಹೇಗಿದ್ದರೂ, ಎಂತವನಾದರು ಪರವಾಗಿಲ್ಲ ಕೇವಲ ತಮ್ಮ ಭದ್ರತೆಯನ್ನು ದೃಷ್ಟಿಯಲ್ಲಿಟ್ಟುಕೊಂಡು
ಮದುವೆ ಆಗುತ್ತಾರೆ...
ಇಂತಹ ಹುಡುಗಿಯರಲ್ಲಿ ಅಹಂ ಸ್ವಭಾವ ಹೆಚ್ಚು...ಇತ್ತೀಚಿಗೆ ಭಾರತದಲ್ಲಿ ವಿಚ್ಚೇದನಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿರುವ ಕಾರಣ ಸಹ ಇದೇ
ಎಂದು ನನ್ನ ಅಭಿಪ್ರಾಯ...ನಿನಗಿಂತ ನಾನು ಯಾವುದರಲ್ಲೂ ಕಮ್ಮಿ ಇಲ್ಲ...ನಾನು ಸಂಪಾದಿಸುತ್ತೇನೆ ಎನ್ನುವ ಮನೋಭಾವ..
ಹೀಗೆ ಎಲ್ಲ ಹುಡುಗಿಯರು ಹೀಗೆ ಬಿ.ಇ., ಎಂ.ಬಿ.ಎ,, ಎಂ.ಬಿ.ಬಿ.ಎಸ, ಓದಿರುವ ಹುಡುಗರೇ ಬೇಕೆಂದರೆ ಬೇರೆ ಓದಿರುವವರ ಪಾಡೇನು
ಪ್ರತಿಕ್ರಿಯೆ (5)