ಗಮಕ ಕಲೆಯ ಪ್ರಸ್ತುತತೆ ( ಭಾಗ -೧ )
ಗಮಕಕಲೆಯ ಪ್ರಸ್ತುತತೆಯ ಕುರಿತಾಗಿ ಚರ್ಚೆಗೆ ತೊಡಗುವಾಗ ಮೊದಲು ಪ್ರಸ್ತುತತೆ ಎಂಬ ಪದದ ಕುರಿತು ಗ್ರಹಿಸಬೇಕು. ಯಾವುದು ಪ್ರಸ್ತುತ ? ಯಾವುದು ಅಪ್ರಸ್ತುತ ? ಇದರ ಆಯ್ಕೆಗೆ ಮಾನದಂಡಗಳೇನು ? ಗುಣ ಸತ್ವ ಮೌಲ್ಯವೇ ? ಜನಾಭಿಪ್ರಾಯವೇ ? ಹೆಚ್ಚು ಚಲಾವಣೆಯಲ್ಲಿದ್ದುದು ಪ್ರಸ್ತುತವೆಂದು, ಬಹು ಜನ ಹೆಚ್ಚು ಸುಲಭವಾಗಿ ಮೆಚ್ಚದ್ದನ್ನು ಅಪ್ರಸ್ತುತವೆಂದು ಕರೆದುಬಿಡೋಣವೇ ? ಅದು ಹೇಗೆ ಸರಿ ? ರೋಗಿಗೆ ಔಷಧವು ಅವಶ್ಯವಾದುದು. ರೋಗವು ಪ್ರಸ್ತುತವೆಂದಾದರೆ ಔಷಧಿಯ ಪ್ರಸ್ತುತತೆ ಅನಿವಾರ್ಯ. ರೋಗಿಗೆ ಪ್ರಿಯವೆನಿಸದಿದ್ದರೂ ಅದುಬೇಕು. ಸಮಾಜದಲ್ಲೂಕೆಲವು ಸಂಗತಿಗಳು ಹಾಗೆಯೇ ಅನ್ವಯವಾಗುವಂತದ್ದು. ಇದರಲ್ಲಿ ಜನಾಕರ್ಷಣೆ ಅಥವಾ ಜನಾಭಿಪ್ರಾಯವೇ ಪ್ರಧಾನವಾಗುವುದಿಲ್ಲ. ಗುಣ ಮೌಲ್ಯವುಳ್ಳದ್ದು ತನ್ನ ಮೌಲ್ಯಗಳಿಂದಾಗಿಯೇ ಸಾರ್ವಕಾಲಿಕ ಮಹತ್ವವನ್ನು ಗಳಿಸುತ್ತದೆ. ಅವು ಎಲ್ಲ ಕಾಲದಲ್ಲೂ ಪ್ರಸ್ತುತವೇ. ಜನರು ಹಸಿವು, ದುಃಖ ಭೀತಿಗಳಿಂದ ಕಂಗಾಲಾಗಿರುವಾಗ ಕಾವ್ಯಗಳು ಬೇಕಾಗುವುದಿಲ್ಲ. ಅಂತೆಯೇ ಉನ್ಮಾದದ ಮೋಜು ಮಸ್ತಿಗಳಿಗೂ ಇವು ಬೇಡ. ಸಮಚಿತ್ತನಾಗಿ ಜಗತ್ತನ್ನು ಅರಿಯಲು ಹೊರಟವನಿಗೆ ಕಾವ್ಯಗಳು, ಭಿನ್ನ ಭಿನ್ನ ಸನ್ನಿವೇಶಗಳು, ಚಿತ್ರಣಕ್ರಮಗಳು ಅತ್ಯಂತ ಪ್ರಸ್ತುತವೆನಿಸುತ್ತದೆ.
ನಮ್ಮ ಮಹಾ ಕಾವ್ಯಗಳನ್ನು ಜನರಿಗೆ ಮುಟ್ಟಿಸುವಲ್ಲಿ ಗಮಕ ಕಲೆ ವಹಿಸುತ್ತಿರುವ ಪಾತ್ರ ಬಹು ಮಹತ್ವದ್ದಾಗಿದೆ. ಬಹಳ ಹಿಂದೆ ಜನ ಅನಕ್ಷರಸ್ಥರಿದ್ದರು. ಅವರು ಕಾವ್ಯಗಳನ್ನು ಸ್ವತಃ ಓದಲು ಅಶಕ್ತರಾಗಿದ್ದರು. ಹಾಗಾಗಿ ಗಮಕ ಕಲೆ ಅವಶ್ಯವಾಗಿತ್ತು. ಇತ್ತೀಚಿನ ದಿನಗಳಲ್ಲಿ ಎಲ್ಲರು ಅಕ್ಷರಸ್ಥರಾಗಿದ್ದಾರೆ. ಎಲ್ಲ ಕಾವ್ಯಗಳ ಮುದ್ರಿತ ಪ್ರತಿಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಆದರು ಗಮಕ ಕಲೆ ಹಿಂದೆಂದಿಗಿಂತಲೂ ಈಗ ಹೆಚ್ಚು ಪ್ರಸ್ತುತವಾಗಿ ಮಹತ್ವದ ಪಾತ್ರವನ್ನು ನಿರ್ವಹಿಸಬೇಕಿದೆ. ಕಾರಣವಿಷ್ಟೇ. ಈಗಿನ ಅಕ್ಷರಸ್ಥರನೇಕರಿಗೆ ಕನ್ನಡ ಮತ್ತು ಸಂಸ್ಕೃತಗಳನ್ನು ಓದಲುಬಾರದು. ಕನ್ನಡವನ್ನು ಮಾತಾಡಲಷ್ಟೇ ಕಲಿತವರು ಸಂಸ್ಕೃತಿಯ ಸಾರವನ್ನು ಅರಿಯಬೇಕಾದರೆ ನಮ್ಮ ಅಮೂಲ್ಯ ಕಾವ್ಯಗಳನ್ನು ಕೇಳಿಯಾದರೂ ತಿಳಿಯಬೇಕಿದೆ. ಇದು ಗಮಕ ಕಲೆಯಿಂದ ಮಾತ್ರವೇ ಸಾಧ್ಯವಾಗಬೇಕಾದಕಾರ್ಯ.ಕನ್ನಡವನ್ನು ಓದಲು ಕಲಿತವರೆಲ್ಲರುಕಾವ್ಯಗಳನ್ನು ಓದಿಅರ್ಥೈಸಿಕೊಳ್ಳುತ್ತಾರೆಂದುಹೇಳುವಂತಿಲ್ಲ.ಇಂತಹವರಿಗೆಗಮಕಕಲೆ ಒಂದು ಸಾಧನ. ಇಂದಿನಓದಿನ ಬಗ್ಗೆ ಕವಿ ಬೇಂದ್ರೆಯವರುಹೀಗೆ ಹೇಳುತ್ತಾರೆ. ( ೮೦ ರ ದಶಕದಮಾತು) "ಕುರುಡೋದು ಎಂಬ ನಾಣ್ಣುಡಿಯಿದೆ.ಆದರೆಕಿವುಡೋದುಎಂಬಮಾತು ರೂಡಿಯಾಗುವುದಗತ್ಯ. ಇಂಗ್ಲಿಷ್ಶಾಲೆಗಳು ಪ್ರಚಾರಕ್ಕೆತರುತ್ತಿರುವಸೈಲೆಂಟ್ ರೀಡಿಂಗ್ ಕಣ್ಣೋದಿಗೆ ಸರಿಹೋಗುವ ಮಾತು . ಕಿವಿಯಿಂದೀಂಟಿಸುವಪ್ರಯತ್ನವು ಕವಿ ಗಮಕಿಗಳದಾದರೆ, ಕಣ್ಣಿಂದೋದಿಸುವಪ್ರಯತ್ನವುನಮ್ಮ ಶಿಕ್ಷಣಕರ್ತರದು. ಸಾವಕಾಶವಾಗಿ ಚಿತ್ರಗಳನ್ನುಕಿವಿಯಿಂದ ನೋಡಿಸುವಪ್ರಯತ್ನವನ್ನುಅವರು ಮಾಡಬಹುದೇನೋ." ಹಾಗೆಯೇ "ಸಂಗೀತಮತ್ತು ಸಾಹಿತ್ಯಗಳು ಪರಸ್ಪರಪೂರಕಗಳು.ಸರಸ್ವತಿಯ ಸ್ಥನದ್ವಂದ್ವಗಳು."ವರಕವಿಯಮಾತುಗಳು ಎಷ್ಟುಅರ್ಥವತ್ತಾಗಿದೆ. ನಿಜನಮ್ಮವರಿಗೆಕಾವ್ಯಗಳನ್ನು ಓದಲು ಬರುವುದಿಲ್ಲ. ರಾಷ್ಟ್ರಕವಿ ಕುವೆಂಪುರವರುಒಂದು ಕಡೆಹೀಗೆಹೇಳುತ್ತಾರೆ. " ಸರಿಯಾಗಿಓದಲುಬಾರದಿದ್ದರೆಕಾವ್ಯದಅರ್ಥಸ್ವಾರಸ್ಯಗಳುಓದುಗರಿಗೆದೊರಕುವುದೇಇಲ್ಲ.ಕವನಗಳಾಗಲೀ, ನಾಟಕಗಳಾಗಲೀ, ಬರಿಯಭಾವಗಳುಮಾತ್ರವೇಅಲ್ಲ. ಭಾವ-ಲಯಬದ್ದವಾದಭಾಷೆಯಲ್ಲಿಮೈವೆತ್ತರಸಕಾವ್ಯಗಳು.ಉತ್ತಮಗಮಕಿಗಳುಕನ್ನಡಕಾವ್ಯಗಳನ್ನುಓದಿದರೆ ವಾಣಿಯವೈಖರಿಯೇ ಭಾವದ ಮಹಿಮೆಯನ್ನುಪದಗಳಅರ್ಥವನ್ನುಎಲ್ಲರಿಗುತಿಳಿಸಿಬಿಡುವುದು."
ಗಮಕ ಮತ್ತು ಗಮಕಿಗಳ ಕುರಿತಾದ ತಜ್ಞರ ಮಾತುಗಳನ್ನು ಒಮ್ಮೆ ಗಮನಿಸೋಣ .
- ಡಾ|| ಎಂ. ಚಿದಾನಂದಮೂರ್ತಿ : "ಗಮಕಿಯು ಕಾವ್ಯಕ್ಕೂ ಮತ್ತು ಸಹೃದಯರಿಗೂಮಧ್ಯವರ್ತಿಯಾಗಿರುವನು. ಸಮಾಜದಲ್ಲಿಗಮಕಿಗೆ ಕವಿಗಿರುವಷ್ಟುಪ್ರಮುಖ ಸ್ಥಾನವಿರದಿದ್ದರೂ ಕವಿಯ ನಂತರದ ಪ್ರಮುಖಸ್ಥಾನವು ಆತನಿಗೆ ಮೀಸಲು .
- ಪ್ರೊ.ಜಿ. ವೆಂಕಟಸುಬ್ಬಯ್ಯ : "ಒಬ್ಬಕವಿಯಕಾವ್ಯವನ್ನುಗಮಕಿಯುಎಷ್ಟುಚೆನ್ನಾಗಿಅರ್ಥಮಾಡಿಕೊಂಡಿದ್ದಾನೆಂಬುದುಅವನವಾಚನದಲ್ಲಿವ್ಯಕ್ತವಾಗುತ್ತದೆ. ಕವಿಯಅರ್ಥಕ್ಕೆ ಎಷ್ಟೆಷ್ಟುಹತ್ತಿರಗಮಕಿಸುಳಿಯಬಲ್ಲನೋಅಷ್ಟಷ್ಟುಅವನಗಮಕವುಸಾರ್ಥಕವಾಗುತ್ತದೆ."
- ವಿ.|| ಎಂ.ವಿ. ಸೀತಾರಾಮಯ್ಯ : "ಛಂದೋಲಯ, ಅರ್ಥಯತಿ, ಶಬ್ದಾರ್ಥಗುಣಇವುಗಳಸಮನ್ವಯಸಿದ್ಧಿಯಿಂದಕೂಡಿದಕಾವ್ಯದವಾಚಿಕ ನಿರೂಪಣೆಯೇ ಗಮಕ. ಈಗಮಕಕ್ಕೆಸಂಗೀತರಾಗಗಳಬಳಕೆ ಪರಿಣಾಮಕಾರಿಸಾಧನವಾದರೂಗಮಕದಲ್ಲಿಶಬ್ಧೋಚ್ಚಾರಣಾಪ್ರಕ್ರಿಯೆಗೆಪ್ರಾಮುಖ್ಯ."
- ವಿ.|| ರಾ.ನರಸಿಂಹಾಚಾರ್ಯ : "ಗಮಕಿಗಿರಬೇಕಾದಮುಖ್ಯಲಕ್ಷಣಗಳುರಾಗ-ಸಾಹಿತ್ಯ-ಭಾವಈಮೂರೂಕಲೆಗಳಲ್ಲಿಯೂ ಸಮಾನತೆಯನ್ನುಸಾಧಿಸಿದವನೇ ಉತ್ತಮ ಗಮಕಿಯಾಗಬಲ್ಲನು."
ಗಮಕಕಲೆಯಿಂದಾಗುವಪ್ರಯೋಜನಗಳು :
ಕಾವ್ಯಗಳುವ್ಯಕ್ತಿಯನ್ನುಸುವಿಚಾರಿಯನ್ನಾಗಿಮಾಡುತ್ತದೆ. ಸದಾಲೋಚನೆಗಳಿಗೆತೊಡಗಿಸುತ್ತದೆ. ಸತ್ಕಾರ್ಯಗಳಲ್ಲಿ ಪ್ರವೃತ್ತಿಯು, ಅಸತ್ಕಾರ್ಯಗಳಲ್ಲಿ ನಿವೃತ್ತಿಯೂಉಂಟಾಗುವಂತೆ ಮಾಡುವುದು ಕಾವ್ಯದ ಪರಮ ಪ್ರಯೋಜನ. ಕುಮಾರವ್ಯಾಸ ಹೇಳುವಂತೆ ವೇದ ಪಾರಾಯಣದಫಲ, ಗಂಗಾದಿ ತೀರ್ಥ ಸ್ನಾನ ಫಲ, ತಪಸ್ಸಿನ ಫಲ, ಕನ್ಯಾದಾನ ಫಲ, ಯಾಗಗಳ ಫಲಗಳ ಬಗ್ಗೆ ನಮಗೆಸ್ಪಷ್ಟತೆಯಿಲ್ಲವಾದರೂ ಒಂದಂತೂ ನಿಜ. ಕಾವ್ಯಗಳ ಅಧ್ಯಯನ, ಆಸ್ವಾದನೆ ಮಾಡಿರುವ ವ್ಯಕ್ತಿಗಳನಡವಳಿಕೆಗಳು ಅದನ್ನು ಮಾಡದವರ ನಡೆ ನುಡಿಗಳಿಗಿಂತ ಮೇಲ್ಮಟ್ಟದಲ್ಲಿರುತ್ತವೆ. ಸಾಂದರ್ಭಿಕ ಜಾಣ್ಮೆ, ಪ್ರತ್ಯುತ್ಪನ್ನಮತಿ, ಸಮುಚಿತ ಉದಾಹರಣೆಗಳು ಆದರ್ಶಗಳ ಪರಿಕಲ್ಪನೆ ಇವೆಲ್ಲವುಗಳ ಮಿಳಿತದಿಂದಕಾವ್ಯಗಳು ವ್ಯಕ್ತಿಗಳನ್ನು ಸುಸಂಸ್ಕೃತರನ್ನಾಗಿಸುವ ಸಾಧನ. ಬೌಧ್ಧಿಕತೆಗೆ ಒರೆಗಲ್ಲು.ಇಂದಿನ ಸಮಾಜದ ಅಗತ್ಯ ಇದೇ ಆಗಿದೆ. ಎಲ್ಲೆಡೆ ಬ್ರಷ್ಟಾಚಾರ, ಅಪ್ರಾಮಾಣಿಕತೆ, ಗುಂಡಾಗಿರಿ,ಕೃತಘ್ನತೆ, ವಚನ ಬ್ರಷ್ಟತೆ, ಸ್ವಜನ ಪಕ್ಷಪಾತಗಳು ತಾಂಡವವಾಡುತ್ತಿರುವಇಂದಿನ ದಿನಗಳಲ್ಲಿ ಒಂದು ಸುಂದರ ಸಮಾಜವನ್ನು ನಿರ್ಮಾಣ ಮಾಡುವಲ್ಲಿ ಗಮಕ ಕಲೆಯು ಅತ್ಯಂತಮಹತ್ವದ ಪಾತ್ರವನ್ನು ನಿರ್ವಹಿಸುವ ಶಕ್ತಿಯನ್ನು ಹೊಂದಿದೆ. 'ಕುಮಾರವ್ಯಾಸನುಹಾಡಿದನೆಂದರೆ ಕಲಿಯುಗ ದ್ವಾಪರವಾಗುವುದು' ಎಂಬ ಕವಿವಾಣಿ ಸುಳ್ಳಲ್ಲ. ಮೈಯಲ್ಲಿಮಿಂಚನ್ನು ಸುಳಿಸುವ ಶಕ್ತಿ ಕುಮಾರವ್ಯಾಸನೊಬ್ಬನಲ್ಲೇ ಅಲ್ಲ. ಕನ್ನಡದ ಅನೇಕ ಕಾವ್ಯಗಳಲ್ಲಿ ಅಂತಹುದೇ ಶಕ್ತಿ ಹುದುಗಿದೆ. ಕನ್ನಡದ ಜಾಣ ಜಾಣೆಯರದನ್ನು ಕಾಣಬೇಕಿದೆ.
- ಮನದ ದುಃಖ ತುಮುಲಗಳಿಂದ ಬಿಡುಗಡೆ ಪಡೆಯಲು, ನವೋತ್ಸಾಹವನ್ನು ಪಡೆದುಕೊಳ್ಳಲು ಜೀವನೋಲ್ಲಾಸ ಪ್ರೇರಣೆ ನೀಡಬಲ್ಲುದು.
- ಹಿಂದೆವರಪರೀಕ್ಷೆಗೆ ಜೈಮಿನಿ ಭಾರತವನ್ನು ಓದಿಸುತ್ತಿದ್ದರಂತೆ. ಒಂದೂ ತಪ್ಪಿಲ್ಲದಂತೆಜೈಮಿನಿ ಭಾರತದ ಪದ್ಯಗಳನ್ನು ಓದುವವನಿಗೆ ಜಾಣನೆಂಬ ಬೇರೆ ಪ್ರಮಾಣಪತ್ರದ ಅವಶ್ಯಕತೆಇರಲಿಲ್ಲವಂತೆ. ಅದು ಇಂದಿಗೂ ಸತ್ಯವೇ. ಇಂದು ಸರಳವಾದ ಕುಮಾರವ್ಯಾಸ ಭಾರತವನ್ನೇ ಓದುವುದುಅನೇಕರಿಗೆ ಬಲು ಕಷ್ಟ.
- ಗಮಕ ವಾಚನವು ಸುತ್ತಲ ಪರಿಸರದ ಮೇಲೆ ಗಂಭೀರ ಪರಿಣಾಮವನ್ನು ಉಂಟು ಮಾಡುತ್ತದೆ.
- ವಿವಿಧಕಾವ್ಯಗಳನ್ನು ಛಂದಸ್ಸುಗಳನ್ನು ಬಲ್ಲ ಗಮಕಿಯು ಸುತ್ತಲಿನ ಸಮಾಜದ ಗೌರವಾದರಗಳಿಗೆಪಾತ್ರನಾಗುತ್ತಾನೆ. ಸ್ವಯಂ ರಚನಾ ಸಾಮರ್ಥ್ಯವುಳ್ಳವರು ತಮ್ಮ ಕವಿತಾ ಶಕ್ತಿಯಿಂದಬದುಕಿದ್ದಾಗ ರಾಜ ಮರ್ಯಾದೆಯಲ್ಲದೆ ಮುಂದೆ ಅಮರಸ್ಥಾನವನ್ನು ಗಳಿಸುತ್ತಾರೆ.
- ಬಾಲ್ಯದಲ್ಲಿಕಾವ್ಯಗಳ ಪ್ರೀತಿ, ಅರಿವು ಬೆಳೆಸಿಕೊಂಡವರು ಮುಂದೆ ಕವಿ, ಸಾಹಿತಿ, ವಾಗ್ಮಿ ಮುಂತಾಗಿಸಾರಸ್ವತ ಲೋಕದಲ್ಲಿ ವಿಹರಿಸುತ್ತಾರೆ. ವಿಶಿಷ್ಟ ವರ್ಚಸ್ಸಿಗೆ ಇದು ಕಾರಣವಾಗಬಲ್ಲುದು.
- ಮಹಾಕವಿಗಳಮಹಾಕಾವ್ಯಗಳ ಶ್ರವಣವು ಸುಂದರ ಜಗತ್ತನ್ನು ಕಾಣಿಸಬಲ್ಲುದು. 'ಸತ್ಯಂ ಶಿವಂ ಸುಂದರಂ' ಎಂಬಂತೆ ಜಗದ ನೈಜ ಸೌಂದರ್ಯಾನುಭೂತಿಯನ್ನು ಹೊಂದಲು ಸಾಧ್ಯವಾಗಬಹುದು.
- · ಮುಖ್ಯವಾಗಿಶಾಂತಿ, ದಯೆ, ವಿಚಾರಪರತೆ, ಉದಾರತೆ, ಗಳಂತಹ ಉನ್ನತ ಮೌಲ್ಯಗಳ ಅರಿವು ಬರುವುದಲ್ಲದೆತನ್ನ ವೈಯಕ್ತಿಕ, ಕೌಟು0ಭಿಕ, ಸಾಮಾಜಿಕ ಸ್ವಾಸ್ಥ್ಯಕ್ಕಾಗಿ ಕರ್ತವ್ಯದ ಅರಿವುಮೂಡುತ್ತದೆ.
ಇದು ಸ್ಪರ್ಧಾಯುಗ. ಎಲ್ಲ ರಂಗಗಳಲ್ಲಿ ಪೈಪೋಟಿಯಿದೆ. ಕಲಾಕ್ಷೇತ್ರವು ಇದಕ್ಕೆ ಹೊರತಲ್ಲ.ವಿವಿಧ ಕಲೆಗಳ ನಡುವಿನ ಪೈಪೋಟಿ ಒಂದೆಡೆಯಾದರೆ ದೂರದರ್ಶನದಂತಹ ಪ್ರಭಾವೀ ಮಾಧ್ಯಮದ ಜತೆಸೆಣಸಾಡುವ ಅನಿವಾರ್ಯತೆ ಇನ್ನೊಂದು ಕಡೆ. ಇವೆಲ್ಲದರ ನಡುವೆಯೂ ಗಮಕ ಕಲೆಯೆಡೆಗೆಅಭಿಮಾನಿಗಳನ್ನು ಗೆಲ್ಲಬೇಕಾದರೆ ಗಮಕಿಗಳು ವ್ಯಾಖ್ಯಾನಕಾರರು ತಮ್ಮ ತಮ್ಮಕ್ಷೇತ್ರಗಳಲ್ಲಿ ಉತ್ತಮ ಪರಿಣತಿಯನ್ನು ಪಡೆದಿರಬೇಕಾಗುತ್ತದೆ. ಸಿದ್ಧತೆಯಿಲ್ಲದೆ,ಸಮರ್ಪಕವಲ್ಲದೆ ಕಾರ್ಯಕ್ರಮಗಳನ್ನು ನೀಡುವಗಮಕಿಗಳುವ್ಯಾಖ್ಯಾನಕಾರರು ತಾವು ಪ್ರಸ್ತುತ ಪಡಿಸಿದ ಕಾರ್ಯಕ್ರಮದ ಯಶಸ್ಸನ್ನು ಮಾತ್ರವಲ್ಲದೆಗಮಕ ಕಲೆಯ ಜನಪ್ರೀಯತೆಯನ್ನು ಫಣಕ್ಕೊಡ್ಡುತ್ತಾರೆ. ವಿದ್ವಾಂಸರುಗಳು ಗಮಕ ಶಬ್ಧದಅರ್ಥವನ್ನು ವಿವೇಚಿಸಿ ಪುಷ್ಟೀಕರಿಸಿ ಹೇಳುವ ವಿವರಣೆಯಂತೆ "ಗಮಕಿಗಳು ಭಾವಸೂಚಕರಾಗಿದ್ದರು. ಈ ಭಾವಸೂಚನೆಗೆ ಅವರು ಕೈಗೊಳ್ಳುತ್ತಿದ್ದ ಸಾಧನಗಳು ಕೆಲವು ೧)ವ್ಯಕ್ತವರ್ಣೋಚ್ಚಾರಣೆ ೨) ಸುಶ್ರಾವ್ಯತೆ ೩) ಪದವಿಭಾಗ ನಿರ್ಧಾರ ೪)ಛಂದೋಲಯ ೫) ಉಚಿತ ಸಂಗೀತ
ಇವು ಒಂದೊಂದು ಕವಿಯ ಭಾವವನ್ನು ಸ್ಪಷ್ಟಪಡಿಸುವಲ್ಲಿ ಶಕ್ಯವಾಗಿರುವಾಗ ಇವೆಲ್ಲವೂಸಮತಾನದಲ್ಲಿ ಸೇರಿದರೆ ಸೃಷ್ಟಿಯಾಗುವ ರಸ ವೈವಿಧ್ಯವನ್ನು ಯಾರುತಾನೆ ಮೆಚ್ಚಲಾರರು ?
( ಮುಂದುವರಿಯುವುದು )
ಪ್ರತಿಕ್ರಿಯೆ (3)