ಮುಂಬೈ ನ ಕೊಲಾಬಾದ ನಿವಾಸಿ, ೩೨ ವರ್ಷಪ್ರಾಯದ ’ಪಾಂಡು ಚೌಹಾನ್’ ಶುಕ್ರವಾರ ಬಿಳಿಗ್ಯೆ ಮುಂಬೈನ ’ಜೆ.ಜೆ.ಆಸ್ಪತ್ರೆಯ ವಾರ್ಡ್’ ನಲ್ಲಿ ೪ ಗಂಟೆಯ ಸಮಯದಲ್ಲಿ ಪಂಚೆಯನ್ನು ತನ್ನ ಕುತ್ತಿಗೆಗೆ ಉರುಲುಹಾಕಿಕೊಂಡು ಮರಣಿಸಿದ್ದಾರೆ. ಅವರು, (schizophrenia) ಕಾಯಿಲೆಯಿಂದ ನರಳುತ್ತಿದ್ದರು. ಕ್ರಿಕೆಟ್ ಆಟದ ಬಗ್ಗೆ ’ಪಾಂಡು ಚೌಹಾನ್’ ರವರಿಗೆ, ತೀವ್ರ ಆಸಕ್ತಿಯಿತ್ತು. ಗೆದ್ದ ತಂಡವನ್ನು ಭೆಟ್ಟಿಮಾಡಿ ಅಭಿನಂದಿಸುವ ಆಶೆಯೂ ಹೆಚ್ಚಾಗಿತ್ತು. ವಿಶ್ವಕಪ್ ಕ್ರಿಕೆಟ್ ಸೆಮಿಫನಲ್ಸ್ ಪಂದ್ಯವನ್ನು ಮನೆಯಲ್ಲೇ ವೀಕ್ಷಿಸಿ ಆನಂದಿಸಿದ ಚೌಹಾನ್ ಭಾರತದ ವಿರುದ್ಧದ ’[[ಶ್ರೀಲಂಕಾ ವಿಶ್ವಕಪ್ ಪಂದ್ಯದ ಫೈನಲಸ್]]’ ನೋಡಲು ಕುತೂಹಲದಿಂದಿದ್ದರು. ಆದರೆ ಅಷ್ಟರಲ್ಲೇ ಅವರನ್ನು ಮನೆಯವರು ಜೆ. ಜೆ. ಆಸ್ಪತ್ರೆಗೆ ದಾಖಲುಮಾಡಿದಾಗ ಅವರ ಆಶೆ ಫಲಿಸುವ ಸಾಧ್ಯತೆಗಳು ಕಾಣಿಸದಾದವು.
ಆಸ್ಪತ್ರೆಯ ಡೀನ್, ಡಾ. ಟಿ.ಪಿ ಲಹಾನೆ ೨೦ ಅಂತಹ ವಿಷಮ ಮಾನಸಿಕ ಮಟ್ಟದ ರೋಗಿಗಳು ವಾರ್ಡ್’ ನಲ್ಲಿದ್ದು ಉಪಚಾರಪಡೆಯುತ್ತಿರುವುದಾಗಿ ತಿಳಿಸಿ, ಅವರನ್ನು ಸದಾಕಾಯುವ ಕೆಲಸ ಅತಿ ಮುಖ್ಯವಾದದ್ದು. ತಕ್ಕ ಸಿಬ್ಬಂದಿಯನ್ನು ಹೆಚ್ಚಿಸಬೇಕಾಗಿ ಅಂದರೆ ಅದನ್ನೂ ಮಾಡಲು ಸಿದ್ಧರಾಗಿರುವುದಾಗಿ ತಿಳಿಸಿದರು. ಮನೆಯಿಂದ ಆಗಾಗ ಚೌಹಾನ್ ತಪ್ಪಿಸಿಕೊಂಡು ಓಡಿ ಹೋಗುತ್ತಿದ್ದ ಕಾರಣಕ್ಕೆ ಮನೆಯವರು ಈ ನಿರ್ಧಾರವನ್ನು ತೆಗೆದುಕೊಳ್ಳದೆ ವಿಧಿಯಿರಲಿಲ್ಲ.(ಆಸ್ಪತ್ರೆಗೆ ಸೇರಿಸುವ) ಆದರೆ ಕ್ರಿಕೆಟ್ ಆಟ ಆತನ ಜೀವವನ್ನೇ ಬಲಿ ತೆಗೆದುಕೊಳ್ಳುತ್ತದೆ ಎಂಬ ಅರಿವಿದ್ದರೆ ಮನೆಯಲ್ಲಿ ಅವರಿಗೆ ನೋಡಲು ಅನುವುಮಾಡಿಕೊಡುತ್ತಿದ್ದೆವು ಎಂದು ದಿವಂಗತ ಚೌಹಾನ್ ರವರ ಪತ್ನಿ, (೩ ಮಕ್ಕಳ ತಾಯಿ), [[ಸೀತಾ]] ಪತ್ರಿಕಾಕರ್ತರಿಗೆ ಶೋಕಿಸುತ್ತಾ ತಿಳಿಸಿದರು.
ಕೊಂಡಿ :
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!