ಜಾಗತಿಕ ಕೃಷಿ, ವಾಣಿಜ್ಯ, ಹಾಗೂ ಆಹಾರ ಸಂಸ್ಕರಣ ಶೃಂಗಸಭೆಯ ಸಕ್ಸೆಸ್‌ನಿಂದ ಉತ್ತೇಜಿತರಾಗಿ ಮುಂದಿನ ವರ್ಷ "ಸಮೃದ್ಧ ಕರ್ನಾಟಕ-ಸುಸ್ಥಿರ ರಾಜಕೀಯ" ಎಂಬ ಸ್ಲೋಗನೊಂದಿಗೆ, ರಾಜಕೀಯ ಕ್ಷೇತ್ರದಲ್ಲಿ ಜಾಗತಿಕ ಬಂಡವಾಳ ಹೂಡಿಕೆಗೆ ಶೃಂಗಸಭೆ ನಡೆಸಲಾಗುವುದು.
ಪತ್ರಿಕೆ ಹಾಗೂ ನೆಟ್‌ನಲ್ಲಿ ಜಾಹಿರಾತು ಕೊಡಲು ಈಗ ತಯಾರಿ ನಡೆಯುತ್ತಿದೆ.
ಅದರ ಒಂದು ಝಲಕ್ :
-"ಸಮೃದ್ಧ ಕರ್ನಾಟಕವು ರೂ ಒಂದು ಲಕ್ಷ ಕೋಟಿಗೂ ಹೆಚ್ಚಿನ ಅವಕಾಶವಾಗಿದೆ"
-ರಾಜಕೀಯ ಕ್ಷೇತ್ರವು ಬಂಡವಾಳ ಹೂಡಿಕೆಗೆ ಸಾಧ್ಯತೆಗಳ ಮಹಾಸಾಗರವಾಗಿದೆ"
************
ಈ ಶೃಂಗ ಸಭೆ ಯಾತಕ್ಕೆ? ಕೆಲ ತಪ್ಪು ಗ್ರಹಿಕೆಗಳು ಹಾಗೂ ವಸ್ತುಸ್ಥಿತಿ :
ತಪ್ಪುಗ್ರಹಿಕೆ ೧ : ವಿದೇಶೀಯರನ್ನು ರಾಜಕೀಯದಲ್ಲಿ ತೊಡಗಿಸುವುದು.
ವಸ್ತುಸ್ಥಿತಿ : ರಾಜಕೀಯ ಮಾಲಿಕತ್ವದಲ್ಲಿ ವಿದೇಶೀಯರ ಯಾವುದೇ ಹಸ್ತಕ್ಷೇಪವಿರುವುದಿಲ್ಲ.
ತಪ್ಪುಗ್ರಹಿಕೆ ೨ : ಸ್ಥಳೀಯ ರಾಜಕಾರಣಿಗಳು ತಮ್ಮ ಅಳಿವು ಉಳಿವಿನ ಸಮಸ್ಯೆ ಎದುರಿಸಬೇಕಾಗುತ್ತದೆ.
ವಸ್ತುಸ್ಥಿತಿ : ಸಂಪರ್ಕಜಾಲ ವೃದ್ಧಿಯಾಗಿ ರಾಜಕಾರಣಿಗಳ ಆದಾಯ ಹೆಚ್ಚಾಗುವುದು.
ತಪ್ಪುಗ್ರಹಿಕೆ ೩ : ಈ ಸಮಾವೇಶವು ಸಂವಿಧಾನಕ್ಕೆ ವಿರುದ್ಧವಾಗಿದೆ.
ವಸ್ತುಸ್ಥಿತಿ : ಇದು ವಿರೋಧಿಗಳ ಅಭಿಪ್ರಾಯ ಅಷ್ಟೇ. ಅವರಿಗೆ ಹೀಗೆ ಹೇಳಿಕೆ ಕೊಡುವುದೇ ಚಟವಾಗಿದೆ. ಸರಕಾರ ಇದನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ.
ತಪ್ಪುಗ್ರಹಿಕೆ ೪ : ರಾಜಕಾರಣಿಗಳು ತಮ್ಮ ಕ್ಷೇತ್ರ ಕಳೆದುಕೊಳ್ಳುವರು.
ವಸ್ತುಸ್ಥಿತಿ : ಯಾವುದೇ ರಾಜಕಾರಣಿಗಳ ಇಚ್ಛೆಗೆ ವಿರುದ್ಧವಾಗಿ ಕ್ಷೇತ್ರವನ್ನು ವಶಪಡಿಸಿಕೊಳ್ಳುವುದಿಲ್ಲ. ಪರಸ್ಪರ ಒಪ್ಪಿಗೆಯ ಮೂಲಕ ಬೆಲೆ ನಿಗದಿಪಡಿಸಿ ತೆಗೆದುಕೊಳ್ಳಲಾಗುವುದು.
ಈಗಾಗಲೇ ಕರ್ನಾಟಕದ ಕರಾವಳಿ ಕ್ಷೇತ್ರಗಳಲ್ಲಿ ೩೦ಸಾವಿರ ಕೋಟಿ ಬಂಡವಾಳ ಹೂಡಲು ಪಾಕಿಸ್ಥಾನ ಮುಂದೆ ಬಂದಿದೆ, ಹಾಗೇ ಬೆಂಗಳೂರು ಕ್ಷೇತ್ರದ ಮೇಲೆ ಅಮೆರಿಕಾ ೫೦ಸಾವಿರ ಕೋಟಿ, ಬಳ್ಳಾರಿ ಮೇಲೆ ೩೦ಸಾವಿರ ಕೋಟಿ ಚೀನಾ ಬಂಡವಾಳ ಹೂಡಲು ಉತ್ಸುಕವಾಗಿದೆ. ಅಲ್ಲದೇ ಇಸ್ರೇಲ್, ಇಂಗ್ಲೇಂಡ್, ಜಪಾನ್, ಇತ್ಯಾದಿ ದೇಶಗಳೂ ಭಾಗವಹಿಸಲು ತಯಾರಿ ನಡೆಸಿವೆ.
*********
ಬನ್ನಿ ಸಹಭಾಗಿಗಳಾಗಿ......
ಜಾಗತಿಕ ರಾಜಕೀಯ ಶೃಂಗಸಭೆ-೨೦೧೨
***********
(ಚಿತ್ರಕೃಪೆ-ನೆಟ್ನಿಂದ)
ಪ್ರತಿಕ್ರಿಯೆ (8)