ಕುಂಬಳ ಬಳ್ಳಿಯೊಂದು ನನ್ನ ನೆಂಟರ ಮನೆಯ ತೋಟ ತುಂಬಾ ಹಬ್ಬಿ, ಬಿಲ್ವಮರವನ್ನೂ ಏರಿ, ಅಲ್ಲಿ ಕಾಯಿಗಳನ್ನು ಬಿಟ್ಟಿದ್ದನ್ನು ನೋಡುವಾಗ, "ಅಪ್ಪು ಹಾಡು (ನೆಲ್ಲಿಕಾಯಿ ಮರದಲ್ಲಿಟ್ಟನೂ ನಮ್ಮ ಶಿವ, ಕುಂಬಳಕಾಯಿ..)" ನೆನಪಾಯಿತು.
ಒಂದು ಕಾಯಿ ಎತ್ತಿಕೊಂಡು ಹತ್ತು ನಿಮಿಷ ನಿಂತಿದ್ದಾಗ ಕೈ ನೋವು ಆಗಲು ಪ್ರಾರಂಭಿಸಿತು...ಆ ಬಳ್ಳಿ...ಆ ಎತ್ತರದಲ್ಲಿ.......ಆ ಮುಳ್ಳಿನ ಮರದಲ್ಲಿ... ಕುಂಬಳದ ಭಾರವನ್ನು ಹೊತ್ತುಕೊಂಡಿರುವುದು ನೋಡಿದಾಗ ಮತ್ತೊಂದು ಹಳೇ ಹಾಡು ನೆನಪಾಯಿತು-"ಬಳ್ಳಿಗೆ ಕಾಯಿ ಭಾರವೇ..ಹೆತ್ತ ತಾಯಿಗೆ ಮಗುವು ಭಾರವೇ..."
ಈ ದಸರಾ/ದೀಪಾವಳಿ ಹಬ್ಬಕ್ಕೆ ಬೆಂಗಳೂರಲ್ಲಿ ಪಟಾಕಿಗಿಂತ ಕುಂಬಳ ವ್ಯಾಪಾರನೇ ಭರ್ಜರಿಯಾಗಿತ್ತು. ಬೆಂಗಳೂರಿಗರು ಹಬ್ಬ ಮಾಡುವುದರಲ್ಲಿ, ಮಾರನೇ ದಿನ ಕಸದ ರಾಶಿ ಹಾಕುವುದರಲ್ಲಿ, ನಂತರ ಅದನ್ನೇ ನೋಡಿ ಬಿಬಿಎಮ್ಪಿಯನ್ನು ತೆಗಳುವುದರಲ್ಲಿ ಎತ್ತಿದ ಕೈ. ಎಸೆದ ಬಾಳೆಯ ಗಿಡಗಳು, ಹೂಗಳು, ಕಡಿದ ಕುಂಬಳಕಾಯಿ ರಾಶಿ,ರಾಶಿ ಬಿದ್ದಿರುವುದನ್ನು ನೋಡುವಾಗ ಬೇಸರವಾಗುವುದು. ಪೂಜೆ ಮಾಡಿದ ತೆಂಗಿನಕಾಯಿ, ಬಾಳೆಹಣ್ಣು ಎಲ್ಲ ಉಪಯೋಗಿಸುವರು-ಅದೇ ಕುಂಬಳಕಾಯಿ ಒಡೆದು ಕುಂಕುಮ ಇತ್ಯಾದಿ ಹಾಕಿ ಎಸೆಯುವರು.
ಔಷಧಿಯಾಗಿಯೂ ( http://www.himalayawellness.com/herbfinder/benincasa-hispida.htm ) ಆಹಾರವಾಗಿಯೂ ( http://savioota.blogspot.in/2009/03/kumbalakai-sambar.html , http://www.ruchiruchiaduge.com/2010/10/kumbalakayi-halwa-kashi-halwa.html ) ಬಹಳ ಉಪಯುಕ್ತವಾದ ಕೂಷ್ಮಾಂಡ(ಬೂದುಗುಂಬಳ- http://kanaja.in/archives/45765) ವನ್ನು ದೇವರ ಹೆಸರಲ್ಲಿ ( http://www.boldsky.com/yoga-spirituality/faith-mysticism/2013/story-of-d... ) ಕೊಲ್ಲಬೇಡಿ..( http://kannada.oneindia.com/literature/articles/2007/1910-pumkins-pooje-... )
ಪ್ರತಿಕ್ರಿಯೆ (3)
ಕುಂಬಳ ಕಾಯಿ ಎಂದಾಗ -ಒಂದು ಗಾದೆ ನೆಂಪಿಗೆ ಬರುತ್ತೆ ಹಾಗೂ ಚಿತ್ರ ಒಂದರ ಸನ್ನಿವೇಶ (ಶಂಕರ್ ನಾಗ್ ಅವರ ಸಾಂಗ್ಲಿಯಾನ ಇರ್ಬೇಕು-ಅಥವಾ ಸೀ ಬಿ ಐ ಶಂಕರ್ ) ಕುಂಬಳಕಾಯಿಯಲ್ಲಿ ಬಾಂಬು ಉಂಟು ಎನ್ನುವ -ದಿನೇಶ್ ಅವರ ಹಾಸ್ಯ ಸನ್ನಿವೇಶ ....!! ಹಾಗೆಯೇ ಬಹು ಹಿಂದೆ ನಮ್ಮೂರಲ್ಲಿ ಬಯಲಾಟ ಆಡುವಾಗ ಪ್ರತಿ ಒಂದು ಪಾತ್ರ ಬರುವಾಗ ತೆಂಗಿನ ಕಾಯಿ ಹೊಡೆಯುವರು-ಅವುಗಳನ್ನು ಆರಿಸಿ ಒಂದು ಚೀಲದಲ್ಲಿ ಹಾಕಿ ಮನೆಯಲ್ಲಿ ಒಣಗಿಸಿ ಬೆಲ್ಲ ಸೇರಿಸಿ ಕುಟ್ಟಿ ತಿನ್ನುತ್ತಿದ್ದ್ವು-ಬಯಲಾಟದ ಅಂತ್ಯದಲ್ಲಿ ಒಂದು ಕುಂಬಳಕಾಯಿಯನ್ನು ಹೊಡೆಯುವರು (ನಿವಾಳಿಸಿ) ಅದನ್ನೂ ಅವರು ನನಗೆ ಹೊಯ್ಯಲು ಕೊಟ್ಟರು-ಮನೆಗೆ ತಂದು ಗಂಟೆ ಆಗಿಲ್ಲ -ಆಗಲೇ ಮೈ ಎಲ್ಲ ಸುಡು ಸುಡು ಜ್ವರ-ಇದಕ್ಕೆ ಆ ನಿವಾಳಿಸಿದ ಕುಂಬಳ ಕಾಯಿ ಕಾರಣ ಎಂದರು ಮನೆಯವರು-ಆಮೇಲೆ ಮಾತ್ರ ತಂತ್ರ ತಾಯಿತ ಹಾಕಿಸಿ ಸರಿ ಮಾಡಿದರು..!!
ಗಣೇಶ್ ಅಣ್ಣಾ ಅವರ ಗಮನ ಯಾವಾಗಲೂ 'ವಿಶೇಷ'ವಾದುದರತ್ತ.....!!
ಮುಂದಿನ ವಿಶೇಷ ಬರಹಕ್ಕೆ ಕಾಯುತ್ತಿರುವೆವು...
ನನ್ನಿ
ಶುಭವಾಗಲಿ \|/
ಕುಂಬಳಕಾಯಿ ಬಗ್ಗೆ ಇನ್ನೂ ಕೆಲ ಮಾಹಿತಿ- http://mumbai-magic.blogspot.in/2008/07/my-intimate-connections-with-ash...
http://www.thehindu.com/2001/09/06/stories/0806002b.htm
ಮುಂದಿನ (ವಿಶೇಷ ಅಲ್ಲ) ಸಚಿತ್ರ ಬರಹ- ದೇವನಹಳ್ಳಿ ಕೋಟೆ,ಜಮಲಾಬಾದ್ ಕೋಟೆ ಸೆರೆಹಿಡಿದಿದ್ದೆ(ಕ್ಯಾಮರದಲ್ಲಿ). ಈಗ ಕರಾವಳಿ ತೀರದ ಕೋಟೆಗೆ ನನ್ನ ಸೈನ್ಯದೊಂದಿಗೆ ಧಾಳಿ ಮಾಡಿದ್ದೆ! ಸೆರೆಹಿಡಿದೂ ಆಯಿತು. ಯಾರದ್ದು ಕೋಟೆ ಇತ್ಯಾದಿ ವಿವರ ಸಂಗ್ರಹಿಸುತ್ತಿರುವೆ :). ಸದ್ಯದಲ್ಲೇ..
ಕ್ಲೂ : ತೂ..ಹೀ...ರೇ.....ತೂ..ಹೀ....ರೇ.... ತೆರೆ ಬಿನಾ ಮೈ ಕೈಸೆ ಜಿಯೂಂ...
ನಮ್ಮವರು ಅಲ್ಲಿ ಮಪ್ತಿಯಲ್ಲಿರುವರು..!! \|||/
ವಿಧಾನಸೌಧದ ಎದುರು, ಮಂಗಳೂರಲ್ಲೂ..ಕೆಲ ವರ್ಷಗಳ ಹಿಂದೆ ಕುಂಬಳ+ಕುಂಕುಮ ಎಲ್ಲಾ ಚೆಲ್ಲಿ ಮಾಟ ಇತ್ಯಾದಿ ಮಾಡಿದ್ದರಲ್ಲ. ನಿರ್ಲಕ್ಷಿಸುವ ಬದಲು ವಿಚಾರವಂತರು ಇದರ ಬಗ್ಗೆ ಜನಸಾಮಾನ್ಯರಿಗೆ ಅರಿವಾಗುವಂತೆ ಇನ್ನಷ್ಟು ವಿವರಿಸಿ ಹೇಳುವುದು ಒಳ್ಳೆಯದು- http://sampada.net/article/18286