ಎಲ್ಲರಿಗೂ ಹೊಸವರ್ಷದ (೨೦೧೨)  ಹಾರ್ದಿಕ ಶುಭಾಶಯಗಳು. ನಿಮಗೆಲ್ಲ ಹೊಸವರ್ಷ ಮಂಗಳವನ್ನು ಉಂಟುಮಾಡಲಿ !

೨೦೧೧ ರ, ಡಿಸೆಂಬರ್, ೨೯, ೩೦ ಮತ್ತೆ  ೩೧ ರ ತನಕ ,  ೩ ದಿನಗಳು ಸತತವಾಗಿ ರಾತ್ರಿಯ ಸಂಭ್ರಮದ ಕಾರ್ಯಕ್ರಮಗಳನ್ನು ಆಯೋಜಿಸಲು ಕುಣಿದು, ಕುಪ್ಪಳಿಸಿ, ಹಾರಿ, ಎಗರಿ, ಮತ್ತೆ  ಒಬ್ಬರನ್ನೊಬ್ಬರು ಹಿಡಿದು ಜಗ್ಗಿ-ಎಳೆದಾಡಿ  ದುಡಿದು ದಣಿದ ಈ ಮಕ್ಕಳು ಏನೋ  ಸಾಧಿಸಿದ ಒಂದು ಖುಷಿಯಲ್ಲಿದ್ದಾರೆ.  ಅವರ ಜೊತೆ ನನ್ನನ್ನು ಸೇರಿಸಿಕೊಂಡರು.

ರಾತ್ರಿ ೧೨, ಯಾವಾಗಾಯಿತೋ ನನಗೆ ತಿಳಿಯದು. ಲಕ್ಕಿ ಡಿಪ್, ಮತ್ತಿತರ ಪ್ರತಿಯೋಗಿತೆಗಳಲ್ಲಿ ಗೆದ್ದ ಮಕ್ಕಳಿಗೆ ಪ್ರೈಜ್ ಹಂಚುವ ಕಾರ್ಯದಲ್ಲೇ ಎಲ್ಲರು ಮಗ್ನರಾಗಿದ್ದರು.

ಅಲ್ಲಿ ನೋಡಿ ! ಆಕಾಶದಲ್ಲಿ  ಹೂವಿನ ರಾಕೆಟ್ ಸಿಡಿದು ಮೇಲೇರುತ್ತಿದೆ. ಹೂವಿನ ಬಣ್ಣದ ಕಾಗದದ ಹುಸಿಪುಡಿಯನ್ನು ಎಲ್ಲೆಡೆ ಚೆಲ್ಲಿ ಸಾಗುತ್ತಿದೆ ! ಹೌಸಿ, ಕ್ರಿಕೆಟ್ ಆಟ, ಮತ್ತ  'ಬ್ರೆಕಿಂಗ್ ದ ಚೆಟ್ಟಿ ಕಾರ್ಯಕ್ರಮ' ಗಳು ಎಲ್ಲರಿಗೂ ಮುದ ಕೊಟ್ಟವು.  ಹರೆಯದ ಹುಡುಗ ಹುಡುಗಿಯರು ಮತ್ತು ಮಕ್ಕಳಂತೂ ಕುಣಿದು ಕುಪ್ಪಳಿಸಿದರು. ಅವರ ಜೊತೆಗೆ ನನ್ನನ್ನು ಸೇರಿಸಿಕೊಂಡು ನೆಗೆದಾಡಲು, ಆಶಿಸಿದರೆ ನನಗೆ ಸಾಧ್ಯವೇ ?!