ಎಲೆ ಮರೆಯ ಅಲರು
ಕಳೆದ ವರ್ಷ ಶಶಿದರ ಅವರು ಬೆಳೆಗೆರೆ ಕೃಷ್ಣಶಾಸ್ತ್ರಿಗಳ 'ಯೇಗ್ದಾಗೆಲ್ಲ ಐತೆ' ಪುಸ್ತಕ ಪರಿಚಯ ಮಾಡಿಸಿದರು, ಅದನ್ನು ತಂದು ಓದುವಾಗಲೆ ಅದೆ ಲೇಖಕರ ಇನ್ನೊಂದು ಪುಸ್ತಕ 'ಎಲೆ ಮರೆಯ ಅಲರು' ಸಿಕ್ಕಿತು. ಅದರಲ್ಲಿ ಸಣ್ಣ ಸಣ್ಣ ಘಟನೆಗಳನ್ನು ನಿರೂಪಿಸಲಾಗಿದೆ, ಅದರಲ್ಲಿ ನನ್ನ ಮನಸಿಗೆ ಹಿಡಿಸಿದ 'ದಿವಾನ್ ಮಿರ್ಜಾ' ಪುಟ್ಟ ಅಧ್ಯಾಯವನ್ನು ಯಾವುದೆ ಟಿಪ್ಪಣಿ ಇಲ್ಲದೆ ಸಂಕ್ಷಿಪ್ತ ರೂಪದಲ್ಲಿ ಇಲ್ಲಿ ನೀಡುತ್ತಿದ್ದೇನೆ, ಅದೇಕೊ ಹಾಗೆ ಬರೆಯ ಬೇಕೆನಿಸಿತು. ಹಾಗೆ ಈ ಶೀರ್ಷಿಕೆಯನ್ನು ಕಾಯ್ದಿಟ್ಟುಕೊಂಡಿರುವೆ.
---------------------------------------------------------------------------------
ಸುಮಾರು ೧೯೩೦-೩೫ ರ ಕಾಲ ಮೈಸೂರಿನ ದಿವಾನ ಮಿರ್ಜಾರವರು ಹರಿಹರ ಕಡೆ ಹೊರಟಿದ್ದರು ಹಿರಿಯೂರಿನ ಹತ್ತಿರ ಅದವಾಲ ಗ್ರಾಮಕ್ಕೆ ಬಂದಾಗ ಊರಿನ ಜನರೆಲ್ಲ ಅವರನ್ನು ಸ್ವಾಗತಿಸಿದರು. ಕುಶಲ ವಿಚಾರಿಸಿ ಹೊರಡುವ ಮುಂಚೆ ದಿವಾನರು ಅದೆ ಗ್ರಾಮದ ರಾಮನಾಥ್ ಐಯ್ಯರ್ ಎಂಬುವರು ಕೊಟ್ಟ ಹೂವು ಹಣ್ಣು ಸ್ವೀಕರಿಸಿ, ರಸ್ತೆಗೆ ಅಡ್ಡಬರುವ ಮರದ ಕೊಂಬೆಯನ್ನು ತೋರಿಸಿ , ಇದು ಪ್ರಯಾಣಿಕರಿಗೆ ತೊಂದರೆ ಕೊಡುತ್ತಿದೆ ತೆಗೆಸಿ ಎಂದು ನಾರಾಯಣಸ್ವಾಮಿ ಎಂಬ ಪಿ.ಡಬ್ಲು.ಡಿ ಇಂಜಿನೀಯರ್ ರವರಿಗೆ ಸೂಚನೆ ನೀಡಿ ಹೊರಟರು.
ಹಿಂದೆ ಬರುವಾಗ ಪುನಃ ಅದೆ ಗ್ರಾಮದ ಹತ್ತಿರ ಬರುವಾಗ ಗಾಡಿನಿಲ್ಲಿಸಿದ ದಿವಾನರು ಮರದ ಕೊಂಬೆ ಕಡಿಸಿರುವುದು ಗಮನಿಸಿ, ಹಾಗೆ ಆ ಕೊಂಬೆಗಳನ್ನು ಹಳ್ಳದಲ್ಲಿ ಕಾಯ್ದು ಇಟ್ಟಿರುವದನ್ನು ಗಮನಿಸಿ ತೆರಳಿದರು, ನಂತರ ನಾರಾಯಣಸ್ವಾಮಿ ಆ ಮರದ ಕೊಂಬೆಗಳನ್ನು ಸರ್ಕಾರಿ ಪದ್ದತಿಯಂತೆ ನೋಟಿಸ್ ನೀಡಿ ಹರಾಜು ಕೂಗಿ ಬಂದ ಹಣವನ್ನು ಟ್ರೆಜರಿಗೆ ಕಟ್ಟಿ ರಸೀತಿಯನ್ನು ಪಡೆದರು. ವಿಷಯ ತಿಳಿದ ಅವರ ಪ್ರಾಮಾಣಿಕತೆಗೆ ಸಂತಸ ಪಟ್ಟ ದಿವಾನರು ದಸರಾ ಸಮಯದಲ್ಲಿ ಕರೆಸಿ ಸನ್ಮಾನಿಸಿ ಕಳಿಸಿದರು.
ಈ ಸಮಯದಲ್ಲಿ ಸೋಮೇಶ್ವರ ಶತಕವೊಂದು ನೆನಪಿಗೆ ಬರುತ್ತದೆ
ಪ್ರಜೆಯಂ ಪಾಲಿಸಬಲ್ಲಡಾತನ ಅರಸಂ
ಕೈಯಾಸೆಯಂ ಮಾಡದಂ ನಿಜ ಮಂತ್ರೀಶ್ವರಂ
ತಂದೆ ತಾಯಿಯಂ ಸಲಹಬಲ್ಲಾತನೇ ಧಾರ್ಮೀಕಂ
ಭಜಕಂ ದೈವಭಕ್ತಿಯುಳ್ಳಡೆ ಭಟ ನಿರ್ಭೀತನಾದವಂ
ದ್ವಿಜನಾಚಾರ್ಯತೆಯುಳ್ಳವ ಹರಹರಾ ಶ್ರೀಚೆನ್ನಸೋಮೇಶ್ವರ
ಈಗಿನ ಪರಿಸ್ಥಿಥಿಯಲ್ಲಿ ಈ ಶತಕ ಬಹಳ ಮಾರ್ಮಿಕ ಎನಿಸುತ್ತದೆ
------------------------------------------------------------------------------------------------
ಚಿತ್ರವನ್ನು : internet ನಿಂದ ಪಡೆದಿದೆ.
http://t3.gstatic.com/imagesq=tbn:ANd9GcSVf5VDbZmLZJnlD1oVLXwMRDUKB8FpApTTWQdH9yG7SQ59fwoBsw
ಪ್ರತಿಕ್ರಿಯೆ (3)