ಒಂದು ದಿವಸ ನಾನು ಮನೆಯಲ್ಲಿ ಕೆಲಸ ಮಾಡ್ತಾ ಇದ್ದೆ, ಯಾವುದೇ ಸದ್ದು ಗದ್ದಲ ಇರಲಿಲ್ಲ. usually ನಾನು ನನ್ನ ಕಣ್ಣಿಗೆ ಕಾಂಟಾಕ್ಟ್ ಲೆನ್ಸ್ use ಮಾಡ್ತಿನಿ, ಮತ್ತು ನನ್ನ ತಂದೆ ಕನ್ನಡಕ use ಮಾಡ್ತಾರೆ.
ಅದೇ ಸಮಯ ನನ್ನ ತಂದೆ, ನನ್ನ ಅತ್ತಿರ ಬಂದು....... ಎ ನೀನು ಕಣ್ಣಿಗೆ glass use ಮಾಡ್ತಿಯಲ್ಲ ಅದರ ಹೆಸರೇನು? ಎಂದು ಕೇಳಿದರು.
ನಾನು ಕೆಲಸದಲ್ಲಿ ಬ್ಯುಸಿ ಆಗಿದ್ದರಿಂದ....hmm ಅದರ ಹೆಸರು ಕಾಂಟಾಕ್ಟ್ ಲೆನ್ಸ್ ಅಂತ ಅಂದೆ.
ಎರಡು ನಿಮಿಷ ಕಳೆದ ನಂತರ, ನನ್ನ ತಂದೆ ಅದೇ ಪ್ರಶ್ನೆ ಕೇಳಿದರು.
ಒಹ್ ಸ್ವಲ್ಪ ನನಗೆ irritate ಆಯ್ತು, ಅದರೂ ಸಮಾದಾನ ಮಾಡಿಕೊಂಡು ಅದರ ಹೆಸರು ಕಾಂಟಾಕ್ಟ್ ಲೆನ್ಸ್ ಅಂತ ಅಂದೆ. ಆಮೇಲೆ ನಾನು ನನ್ನ ಕೆಲಸದಲ್ಲಿ ತಲ್ಲಿನನಾದೆ.
ಮತ್ತೆ ಎರಡು ನಿಮಿಷದ ನಂತರ, ನನ್ನ ತಂದೆ ಅದೇ ಪ್ರಶ್ನೆ ಕೇಳಿದರು.
ಓಹ್ ಬಹಳ irritate ಅಯ್ತು ಮತ್ತು ಸಿಕ್ಕಾಪಟ್ಟೆ ಕೋಪ ಬಂತು. ಆಗ ಅದೆಲ್ಲಾ ನಿನಗೆ ಏನಕ್ಕೆ keep quite ಅಂತ ಹೇಳಿಬಿಟ್ಟೆ......
ಆಗ ನನ್ನ ತಂದೆ ನನ್ನನು ಸಮಾದಾನ ಮಾಡಿ, ತನ್ನ ಕನ್ನಡಕವನ್ನು ನನ್ನ laptop ಪಕ್ಕದಲ್ಲಿ ಇಟ್ಟು ನೋಡು ಮಗು ಇಷ್ಟಕ್ಕೆ ಕೋಪ ಮಾಡಿಕೊಳ್ಳಬಾರದು. ನೀನು ಚಿಕ್ಕವನಿದ್ದಾಗ ಇದೆ ಪ್ರಶ್ನೆಯನ್ನು ನನಗೆ ನೂರು ಬಾರಿ ಕೇಳಿದ್ದೆ, ಆಗ ನಾನು ನಿನಗೆ ನೂರು ಬಾರಿಯು ಉತ್ತರ ಹೇಳಿದ್ದೆ ಎಂದರು.
ಆ ಮಾತನ್ನು ಕೇಳಿ ನನಗೆ ಬಹಳ ದುಃಖ ಅಯ್ತು ಮತ್ತು ಅದರ ಪರಿಣಾಮ ಅರಿವಾಗಿದ್ದು ಹೀಗೆ ........"ಅವರು ಕೇಳಿದ್ದು ಬರಿ ಮೂರು ಪ್ರಶ್ನೆ ಆದರೆ ನಾನು ಕೇಳಿದ್ದು ನೂರು ಪ್ರಶ್ನೆ"
ಹೆಚ್, ಆರ್, ಕೆ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!