ಹಿಂದೊಮ್ಮೆ ಸರಕಾರವು ನಕಲಿ ಮೊಬೈಲ್ ಫೋನುಗಳ ಮೇಲೆ ದಾಳಿಯನ್ನೇ ಆರಂಭಿಸಿತ್ತು.ಟೆಲಿಕಾಂ ಕಂಪೆನಿಗಳು ತಮ್ಮ ಚಂದಾದಾರರ ಮೊಬೈಲ್ ಫೋನುಗಳಲ್ಲಿ ಐಎಮ್ಇಐ
ಸಂಖ್ಯೆ ನಮೂದಾಗಿದ್ದರೆ,ಅಂತಹ ಪೋನುಗಳಿಗೆ ಸೇವೆ ಒದಗಿಸಬಾರದು ಎಂದು ಕಟ್ಟಪ್ಪಣೆ ಮಾಡಿದ್ದು ನಿಮಗೆ ನೆನಪಿರಬಹುದು.ಹೆಚ್ಚಿನ ಚೀನೀ ಸೆಟ್ಗಳಲ್ಲಿ, ಈ ಸಂಖ್ಯೆ ಇಲ್ಲ ಎನ್ನುವುದು ಮನವರಿಕೆಯಾದಾಗ,ಸರಕಾರವು,ಸಂಖ್ಯೆ ಇಲ್ಲದ ಮೊಬೈಲ್ ಫೋನುಗಳಿಗೆ ಹೊಸತಾಗಿ ಸಂಖ್ಯೆ ನೀಡಲು ಅನುಮತಿಸಿತ್ತು.ಅಂತೂ ಒಂದು ಸಲ,ಎಲ್ಲ ಟೆಲಿಕಾಂ ಕಂಪೆನಿಗಳೂ ಎಚ್ಚೆತ್ತುಕೊಂಡು,ತಮ್ಮೆಲ್ಲಾ ಚಂದಾದಾರರೂ ಅಧಿಕೃತರಾವಾಗಿ,ಸರಿಯಾದ ಫೋನುಗಳ ಮೂಲಕ ಸೇವೆ ಪಡೆಯುವಂತಾಯಿತು.ನಂತರದ ದಿನಗಳಲ್ಲಿ,ಮತ್ತೆ ಹಳೆಯ ಚಾಳಿ ಮರುಕಳಿಸಿದ ಹಾಗಿದೆ.ಈಗ ಮತ್ತೆ ಕಡಿಮೆಯೆಂದರೂ,ಹದಿನೆಂಟು ಸಾವಿರ ಮೊಬೈಲ್ ಫೋನುಗಳಲ್ಲಿ ಐಎಂಇಐ ಸಂಖ್ಯೆ ಇಲ್ಲವೆಂದು ಸರಕಾರದ ಗಮನಕ್ಕೆ ಬಂದಿದೆ.
--------------------------------------------------------------
4ಜಿಗೆ ನೀರಸ ಪ್ರತಿಕ್ರಿಯೆ
ಏರ್ಟೆಲ್ ಕಂಪೆನಿಯು ಕಳೆದ ಎಪ್ರಿಲ್ ತಿಂಗಳಲ್ಲಿ ಕೊಲ್ಕತ್ತಾದಲ್ಲಿ ನಂತರ ಮುಂದಿನ ತಿಂಗಳಲ್ಲಿ ಬೆಂಗಳೂರಿನಲ್ಲಿ 4ಜಿ ಸೇವೆಯನ್ನು ದೇಶದಲ್ಲೇ ಮೊದಲಾಗಿ ಆರಂಭಿಸಿದ ದಾಖಲೆ ಮಾಡಿತ್ತು.ಈ ವರ್ಷದ ಮೊದಲ ತ್ರೈಮಾಸಿಕದಲ್ಲಿ ಕಂಪೆನಿಯು,ಹೊಸ ಸೇವೆಗೆ ಸುಮಾರು ನಾಲ್ಕು ಸಾವಿರ ಚಂದಾದಾರರನ್ನು ಕಲೆಹಾಕಲು ಸಮರ್ಥವಾಗಿದೆ.4ಜಿ ಸೇವೆಗೆ ಸೂಕ್ತವಾದ ಹ್ಯಾಂಡ್ಸೆಟ್ಗಳ ಲಭ್ಯತೆ ಸೀಮಿತ ಸಂಖ್ಯೆಯಲ್ಲಿರುವುದು ಈ ನೀರಸ ಪ್ರತಿಕ್ರಿಯೆಗೆ ಕಾರಣವಾಗಿರಬಹುದು ಎಂಬುದು ತಜ್ಞರ ಅಂದಾಜು.ಅಲ್ಲದೆ ಇಂತಹ ಹ್ಯಾಂಡ್ಸೆಟ್ಗಳು ದುಬಾರಿಯಾಗಿವೆ.ಇದೇ ವೇಳೆ ಸರಕಾರಿ ಭಾರತ್ ಸಂಚಾರ ನಿಗಮ್ ಲಿಮಿಟೆಡ್ ಅವರು ವೈಮ್ಯಾಕ್ಸ್ ಸೇವೆಯ ಮೂಲಕ ಐವತ್ತು ಸಾವಿರ ಚಂದಾದಾರರಿಗೆ 4ಜಿ ಸೇವೆ ನೀಡುತ್ತಿದೆಯೆಂದು ಸರಕಾರ ಪ್ರಕಟಿಸಿದೆ.
----------------------------------------------
ಹೊಸ ವಿಕಿರಣ ಮಿತಿ:ತ್ರೀಜಿ ಸೇವೆಗಳ ಗುಣಮಟ್ಟ ಕುಸಿತ ಸಂಭವ
ಕಳೆದವಾರ ಸರಕಾರ,ಮೊಬೈಲ್ ಗೋಪುರಗಳ ವಿಕಿರಣ ಮಟ್ಟವನ್ನು ಈಗಿನ ಮಿತಿಯ ಹತ್ತು ಪಟ್ಟು ಇಳಿಸಲು ಆದೇಶಿಸಿತ್ತು.ಸದ್ಯದ ಮಿತಿ ಪ್ರತಿ ವರ್ಗ ಮೀಟರ್ ವಿಸ್ತೀರ್ಣದಲ್ಲಿ 9.2 ವ್ಯಾಟ್ ಇತ್ತು.ಇನ್ನಿದನ್ನು ಹತ್ತು ಪಟ್ಟು, ಅಂದರೆ ಪ್ರತಿ ವರ್ಗ ಮೀಟರ್ ವಿಸ್ತೀರ್ಣದಲ್ಲಿ 0.92 ವ್ಯಾಟ್ ಮಟ್ಟಕ್ಕೆ ಇಳಿಸಬೇಕಿದೆ.ಹೀಗಾಗಿ,ಗೋಪುರಗಳ ಸುತ್ತ,ಸಂಕೇತ ದುರ್ಬಲವಾಗುತ್ತದೆ.ಹಾಗಾಗಿ,ಬಳಕೆದಾರರಿಗೆ ಮೊಬೈಲ್ ಸಂಕೇತಗಳ ಲಭ್ಯತೆ ಕಷ್ಟವಾಗಲಿದೆ.ಗೋಪುರವೊಂದರ ಸಂಕೇತ ದುರ್ಬಲವಾದರೆ,ಗೋಪುರವೊಂದರಿಂದ ಸಂಕೇತ ಸಿಗುವ ಸ್ಥಳದ ವಿಸ್ತೀರ್ಣ ಕುಸಿಯುತ್ತದೆ. ಹೀಗಾಗಿ,ನಿಬಿಡವಾಗಿ ಜನಸಂಖ್ಯೆ ಇರುವ ನಗರಗಳಲ್ಲಿ,ಕೆಲವು ಸ್ಥಳಗಳು ಮೊಬೈಲ್ ಸಂಕೇತ ಇಲ್ಲದೆ ಇರುವ ಪ್ರಸಂಗ ಉದ್ಭವವಾಗಬಹುದು.ಹೀಗಾದರೆ,ಸಂಕೇತವಿಲ್ಲದ ಪ್ರದೇಶದಿಂದ ಕರೆ ಮಾಡುವ ಜನರಿಗೆ ತೊಂದರೆಯಾಗಲಿದೆ.ಇದನ್ನು ತಪ್ಪಿಸಲು,ಟೆಲಿಕಾಂ ಕಂಪೆನಿಗಳು ಹೆಚ್ಚೆಚ್ಚು ಗೋಪುರಗಳನ್ನು ಸ್ಠಾಪಿಸಬೇಕಾಗುತ್ತದೆ.ಆಗ,ಪ್ರತಿ ಒಂದು ಪ್ರದೇಶದಲ್ಲಿನ ಗೋಪುರಗಳ ಸಂಖ್ಯೆ ಮೊದಲಿಗಿಂತ ಹೆಚ್ಚಿ,ಕರೆ ಮಾಡುವವರಿಗೆ ಹತ್ತಿರದ ಗೋಪುರದಿಂದ ಸಂಕೇತ ಸಿಗುತ್ತದೆ.ಮೊಬೈಲ್ ಸಂಚಾರಿಯಾಗಿದ್ದರೆ,ಅದು ಒಂದು ಗೋಪುರದಿಂದ ಸಿಗುವ ಸಂಕೇತ ದುರ್ಬಲವಾದರೆ,ಕರೆಯನ್ನು ಇನ್ನೊಂದು ಗೋಪುರಕ್ಕೆ ಬದಲಿಸಬೇಕಾಗುತ್ತದೆ.ಹೀಗಾಗಿ,ಕರೆಗಳು ವಿಫಲವಾಗುವ ಸಾಧ್ಯತೆ ಹೆಚ್ಚುತ್ತದೆ.ಒಟ್ಟಿನಲ್ಲಿ ಚಂದಾದಾರರು ಹೊಸವಿಕಿರಣ ನಿಯಮದ ನಂತರ,ಹಿಂದಿನ ಗುಣಮಟ್ಟಕ್ಕಿಂತ,ಈಗಿನ ಗುಣಮಟ್ಟದಲ್ಲಿ ಕುಸಿತ ಕಾಣುವ ಸಾಂಭಾವ್ಯತೆ ಹೆಚ್ಚು.ಟೂಜಿ ಚಂದಾದಾರರಿಗಿಂತ,ತ್ರೀಜಿ ಚಂದಾದಾರರಿಗೆ ಇದು ಹೆಚ್ಚು ಸಮಸ್ಯೆ ತಂದೊಡ್ಡುವುದು ಖಂಡಿತ.
---------------------------------------------
ಇಂಟರ್ನೆಟ್ ಬಳಕೆಯಲ್ಲಿ ಸ್ವೀಡನ್ ಮುಂದೆ!
___LINK_OPEN_href="http://www.udayavani.com/udayavani_cms/gall_content/2012/9/2012_9$largeimg210_Sep_2012_002901183.jpg" imageanchor="1"___
ಸ್ವೀಡನ್ ದೇಶದ ಜನಸಂಖ್ಯೆಯ ಶೇಕಡಾ ತೊಂಭತ್ತು ಭಾಗ ಜನತೆ ಇಂಟರ್ನೆಟ್ ಸವಲತ್ತು ಹೊಂದಿದ್ದಾರೆ.ಅಮೆರಿಕಾದಲ್ಲಿ ಈ ಪಾಲು ಎಪ್ಪತ್ತೈದು ಶೇಕಡಾ ಆಗಿದೆ.ಹಾಗೆ ನೋಡಿದರೆ,ಅಮೆರಿಕಾದ ಜನರು ಉಪಯೋಗಿಸುವ ಕಂಪ್ಯೂಟರುಗಳ ಸಂಖ್ಯೆಯೂ ತಲಾವಾರು ಕಡಿಮೆಯೇ.ಐರ್ಲ್ಯಾಂಡ್,ಕೆನಡಾದಲ್ಲಿ ಅಮೆರಿಕಾಕ್ಕೆ ಹೋಲಿಸಿದರೆ ಹೆಚ್ಚು ಕಂಪ್ಯೂಟರ್ ಮತ್ತು ಲ್ಯಾಪ್ಟ್ಯಾಪ್ ಅಂತಹ ಸಾಧನಗಳಿವೆಯೆಂದು ಸಮೀಕ್ಷೆಯೊಂದು ತಿಳಿಸುತ್ತದೆ.ಈ ಸಮೀಕ್ಷೆಯನ್ನು ಓಕ್ಸ್ಫರ್ಡ್ ಇಕಾನೋಮಿಕ್ಸ್ ಎನ್ನುವ ಸಂಸ್ಥೆ ನಡೆಸಿತು.ಸಮೀಕ್ಷೆಗೆ ಕಳೆದ ಐದು ವರ್ಷಗಳ ದತ್ತಾಂಶವನ್ನು ಸಂಗ್ರಹಿಸಲಾಗಿತ್ತು.ಇಂಟರ್ನೆಟ್ನ ವೇಗ,ಮೂಲಸೌಕರ್ಯಗಳೂ ಅಮೆರಿಕಾಕ್ಕಿಂತ ಐರ್ಲ್ಯಾಂಡಿನಲ್ಲೇ ಉತ್ತಮವಾಗಿರುವುದೂ ಸಮೀಕ್ಷೆಯಿಂದ ವ್ಯಕ್ತವಾಗಿದೆ.ವಿಶ್ವದ ಜನಸಂಖ್ಯೆಯ ಮೂರರಲ್ಲಿ ಒಬ್ಬ ಮಾತ್ರಾ ಇಂಟರ್ನೆಟ್ ಬಳಸಿದರೆ,ಆಪ್ರಿಕಾದಲ್ಲಿ ಆರರಲ್ಲಿ ಒಬ್ಬಮಾತ್ರಾ ಇಂಟರ್ನೆಟ್ ಬಳಸುತ್ತಾನಂತೆ.
-------------------------------------------------------------------
ಬರಲಿದೆ ಆಪಲ್ ಕಂಪೆನಿಯ ರೇಡಿಯೋ..
ಜಗತ್ತಿನ ಐಟಿ ಕ್ಷೇತ್ರದಲ್ಲಿ ತನ್ನತನದಿಂದ ಮೆರೆಯುತ್ತಿರುವ ಆಪಲ್ ಕಂಪೆನಿಯು,ಇಂಟರ್ನೆಟ್ನಲ್ಲಿ ರೇಡಿಯೋ ಕೇಂದ್ರವನ್ನು ಸ್ಥಾಪಿಸುವ ಉದ್ದೇಶ ಹೊಂದಿದೆಯೆಂದು ಮಾಧ್ಯಮಗಳು ವರದಿ ಮಾಡುತ್ತಿವೆ.ಸಂಗೀತ ಸೇವೆ ಒದಗಿಸಿ,ಇಂಟರ್ನೆಟ್ ಬಳಕೆದಾರರಿಗೆ,ಸಂಗೀತ ಕಡತಗಳನ್ನು ಕೇಳಲು ಇರುವ ಉಚಿತ ಸೇವೆ ಒದಗಿಸುವ ಪಂಡೋರಾ ಅಂತಹ ಕಂಪೆನಿಗಳಿಗೆ ಸ್ಪರ್ಧೆ ನೀಡುವುದು ಆಪಲ್ ಕಂಪೆನಿಯ ಉದ್ದೇಶವಂತೆ.ಆಪಲ್ ಈಗಾಗಲೇ ಸಂಗೀತ ಕಡತಗಳನ್ನು ಮಾರಾಟಕ್ಕೆ ಒದಗಿಸಲು ಐಸ್ಟೋರ್ ಅಂತಹ ಇಂಟರ್ನೆಟ್ ಸೇವೆಯನ್ನು ಹೊಂದಿದೆ.ಹೊಸ ಮಿಥ್ಯಾ ರೇಡಿಯೋ ಕೇಂದ್ರವು ಉಚಿತ ಸೇವೆ ನೀಡಲಿದೆ.ಬಳಕೆದಾರರು,ಸಂಗೀತ ಕಡತಗಳನ್ನು ಬೇಡಿಕೆ ಸಲ್ಲಿಸಿ,ಇಂಟರ್ನೆಟ್ ರೇಡಿಯೋಕೇಂದ್ರದೀಂದ ನೇರವಾಗಿ ಪಡೆದು,ಆಲಿಸಬಹುದು.ಸದ್ಯಕ್ಕೆ ಈ ಕೇಂದ್ರ ಉಚಿತ ಸೇವೆ ನೀಡುತ್ತದೆ.ವೆಚ್ಚಗಳನ್ನು ನಿಭಾಯಿಸಲು ಆಪಲ್ ಕಂಪೆನಿಯು ಜಾಹೀರಾತುಗಳನ್ನು ನಡುನಡುವೆ ಪ್ರಸಾರ ಮಾಡಲಿದೆಯಂತೆ.
-------------------------------------------------
ಫೈರ್ಪಾಕ್ಸ್:ಅಗ್ಗದ ಸ್ಮಾರ್ಟ್ಪೋನು
ಗೂಗಲ್ ಮತ್ತು ಆಪಲ್ ಕಂಪೆನಿಗಳಂತೆ ಮೊಜಿಲ್ಲಾ ಕಂಪೆನಿಯೂ ಸ್ಮಾರ್ಟ್ಫೋನುಗಳಿಗೆ ತನ್ನದೇ ಆದ ಆಪರೇಟಿಂಗ್ ವ್ಯವಸ್ಥೆಯನ್ನು ಅಭಿವೃದ್ಧಿ ಪಡಿಸಲಿದೆ.ಮಾತ್ರವಲ್ಲ,ಸ್ಪೈನ್ನ ಟೆಲಿಫೋನಿಕಾ ಎನ್ನುವ ಕಂಪೆನಿಯ ಸಹಯೋಗದಲ್ಲಿ,ಈ ಆಪರೇಟಿಂಗ್ ವ್ಯವಸ್ಥೆಯನ್ನು ಬಳಸುವ ಸ್ಮಾರ್ಟ್ಫೋನನ್ನೂ ಮಾರಾಟಕ್ಕೆ ಒದಗಿಸಲಿದೆ.ಈ ಸ್ಮಾರ್ಟ್ಫೋನುಗಳು ಅಗ್ಗವಾಗಿ ಲಭ್ಯವಾಗಲಿದೆ.ಅಗ್ಗದ ಸ್ಮಾರ್ಟ್ಫೋನುಗಳು ಉತ್ತಮ ವ್ಯವಸ್ಥೆಯನ್ನು ಹೊಂದಲಿವೆ.ಹುವೈ ಮತ್ತಿತರ ಕಂಪೆನಿಗಳು ಮೊಜಿಲ್ಲಾ ಕಂಪೆನಿಯ ಪೈರ್ಪಾಕ್ಸ್ ಸ್ಮಾರ್ಟ್ಫೋನುಗಳ ತಯಾರಿಸಲು ಉತ್ಸಾಹ ತೋರಿಸಿವೆಯಂತೆ.ಲ್ಯಾಟಿನ್ ಅಮೆರಿಕಾ ಮತ್ತು ಮುಂದುವರಿಯುತ್ತಿರುವ ದೇಶಗಳಲ್ಲಿ ಪೈರ್ಫಾಕ್ಸ್ ಸ್ಮಾರ್ಟ್ಫೋನುಗಳು ಮೊದಲಿಗೆ ಲಭ್ಯವಾಗಲಿವೆ.
--------------------------------------------------------
ಮಕ್ಕಳಿಗೆ ಪಾಕೆಟ್ಮನಿ ನೀಡಲು ಇಂಟರ್ನೆಟ್ ತಾಣ ಟೈಕೂನ್
ಮಕ್ಕಳಿಗೆ ಪಾಕೆಟ್ಮನಿ ನೀಡುವುದು ತಂದೆತಾಯಿಗಳಿಗಿಷ್ಟವಾದರೂ,ಅದರ ನಿರ್ವಹಣೆ ಹೆಚ್ಚಿನವರಿಗೆ ಕಷ್ಟ.ದಿನಾಲು ಪಾಕೆಟ್ಮನಿ ನೀಡಲು ಚಿಲ್ಲರೆ ಹಣ ಒಟ್ಟು ಮಾಡಬೇಕು,ದಿನಾ ನೀಡುವ ಹಣವನ್ನು ಲೆಕ್ಕ ಹಾಕಿ ಬೇರೆಯಾಗಿಟ್ಟು ಕೊಳ್ಳಬೇಕು.ನೆನಪಿನಲ್ಲದನ್ನು ಮಕ್ಕಳಿಗೆ ನೀಡಬೇಕು.ಇತ್ಯಾದಿ ಕೆಲವು ತಂದೆತಾಯಿಗಳಿಗೆ ಕಿರಿಕಿರಿ ತರುತ್ತದೆ.ಅಂತಹ ಕಷ್ಟ ಅನುಭವಿಸಿದ,ಓಬ್ಬಾತ ಇದಕ್ಕೆ ಆನ್ಲೈನ್ ಪರಿಹಾರವೇ ಉತ್ತಮವೆಂದು ಬಗೆದು,ಟೈಕೂನ್ ಎಂಬ ಇಂಟರ್ನೆಟ್ ತಾಣವನ್ನು ಆರಂಭಿಸಿದ್ದಾರೆ.
ಇದರಲ್ಲಿ ತಂದೆತಾಯಿಗಳು ಸೇವೆಗೆ ನೋಂದಾಯಿಸಿಕೊಳ್ಳಬೇಕು.ನಂತರ ಆತ ಬಯಸಿದಾಗಲೆಲ್ಲಾ ತನ್ನ ಪ್ಯಾಕೆಟ್ಮನಿ ಖಾತೆಗೆ ಹಣ ಹಾಕಬಹುದು.ಈ ಪಾಕೆಟ್ಮನಿಯನ್ನು ಮಕ್ಕಳು ಪಡೆಯುವಂತೆ ಸ್ವಯಂಚಾಲಿತ ವ್ಯವಸ್ಥೆ ಮಾಡಲು ಬರುತ್ತದೆ.ಮಕ್ಕಳಿಗೆ ತಮ್ಮ ಪಾಕೆಟ್ಮನಿಯನ್ನು ಟೈಕೂನ್ ಖಾತೆಯಿಂದ ಪಡೆಯುವುದು ಹೇಗೆ ಎಂದು ತೋರಿಸಿಕೊಟ್ಟರೆ,ಮುಂದೆ ಅವರು ಬೇಕಾದಂತೆ ಅದನ್ನು ಇಂಟರ್ನೆಟ್ ಮೂಲಕವೇ ಬಳಸಿಕೊಳ್ಳಬಹುದು.ಒಂದು ವೇಳೆ ಅಪ್ಪ-ಅಮ್ಮ,ಪಾಕೆಟ್ಮನಿ ಸಂದಾಯ ಮಾಡದೆ,ಅಲ್ಲಿ ಹಣ ಇರದಿದ್ದಾಗ,ಮಕ್ಕಳಿಗದು ಬೇಕಾದರೆ,ಹೆತ್ತವರಿಗೆ ಸಂದೇಶ ರವಾನೆಯಾಗುತ್ತದೆ.ಹೆತ್ತವರು,ಮಕ್ಕಳ ಅವಶ್ಯಕತೆ ಮನವರಿಕೆಯಾದರೆ,ಒಡನೆಯೇ ತಮ್ಮ ಕ್ರೆಡಿಟ್ಕಾರ್ಡ್ ಅಥವ ಬ್ಯಾಂಕ್ ಖಾತೆಯಿಂದ ಟೈಕೂನ್ ಖಾತೆಗೆ ಹಣ ರವಾನಿಸಬಹುದು.
___LINK_OPEN_href="http://www.udayavani.com/udayavani_cms/gall_content/2012/9/2012_9$largeimg210_Sep_2012_002901183.jpg"___EPAPER
UDAYAVANI
*ಅಶೋಕ್ಕುಮಾರ್ ಎ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!