ಇದು ಝಾನ್ಸಿ ರಾಣಿ ಲಕ್ಷ್ಮೀಬಾಯಿಯ ನಿಜವಾದ ಫೋಟೋ. ಸುಮಾರು ೧೬೦ ವರ್ಷಗಳ ಹಿಂದೆ ಬ್ರಿಟಿಷ್ ಫೋಟೋಗ್ರಾಫರ್ ಹಾಫ್ ಮನ್ ತೆಗೆದಿದ್ದ ಫೋಟೋ. ಕಳೆದ ವರ್ಷ ಭೋಪಾಲಿನಲ್ಲಿ ನಡೆದ ವಿಶ್ವ ಫೋಟೋಗ್ರಫಿ ಸಮ್ಮೇಳನದಲ್ಲಿ ಪ್ರದರ್ಶಿತವಾಗಿತ್ತು. ಪುರಾತತ್ವ ಮಹತ್ವದ ವಸ್ತುಗಳ ಸಂಗ್ರಹಕಾರರೊಬ್ಬರು ಈ ಚಿತ್ರವನ್ನು ಪ್ರದರ್ಶನಕ್ಕೆ ಕಳಿಸಿದ್ದರು.
ಬ್ರಿಟಿಷರ ವಿರುದ್ಧ ಹೋರಾಡಿ ವೀರಮರಣವನ್ನಪ್ಪಿದ ಈ ಭಾರತ ಕುವರಿಯ ಕುರಿತು ಬ್ರಿಟಿಷ್ ಜನರಲ್ ಹ್ಯೂಗ್ ರೋಸ್ ಉದ್ಗರಿಸಿದ್ದು ಹೀಗೆ: "ಅಪ್ರತಿಮ ಸುಂದರಿಯಾದ, ಜಾಣತನ ಮತ್ತು ತಾಳ್ಮೆಗೆ ಹೆಸರಾದ ಅವಳು ಬಂಡಾಯಗಾರರಲ್ಲಿ ಅತಿ ಹೆಚ್ಚು ಅಪಾಯಕಾರಿಯಾಗಿದ್ದಳು."
ಆಧಾರ ಮತ್ತು ಹೆಚ್ಚಿನ ಮಾಹಿತಿಗೆ: http://www.we-indians.com/2011/07/06/jhansi-ki-rani-lakshmibai/
ಪ್ರತಿಕ್ರಿಯೆ (1)