ಒಂದು ಜಾಗತಿಕ ಕೂಟದಲ್ಲಿ, ಜರ್ಮನಿ, ಜಪಾನ್ ಹಾಗೂ ಭಾರತೀಯ ತಂತ್ರಜ್ಞರು ಭಾಗವಹಿಸಿದ್ದರು. ಅವರೊಳಗೆ ತಮ್ಮ ತಮ್ಮಲ್ಲೆ ಯಾರು ಹೆಚ್ಚು ಎಂಬ ಚರ್ಚೆ ಪ್ರಾರಂಭವಾಯಿತು. ಆಗ ಜರ್ಮನಿಯವನು ಹೇಳೋದಕ್ಕೆ ಷುರು ಮಾಡಿದ; ನಮ್ಮ ದೇಶದಲ್ಲಿ ತಂತ್ರಜ್ಞಾನ ಎಷ್ಟು ಅಭಿವೃದ್ಧಿಯಾಗಿದೆಯೆಂದರೆ, ಅಪಘಾತವೊಂದರಲ್ಲಿ ವ್ಯಕ್ತಿಯೊಬ್ಬ ಕಾಲು ಕಳೆದುಕೊಂಡ. ಅವನಿಗೆ ಕೃತಕ ಕಾಲು ಜೋಡಿಸಲಾಯಿತು, ಈಗ ಅವನೊಬ್ಬ ಪ್ರಖ್ಯಾತ ಫುಟ್ಬಾಲ್ ಆಟಗಾರನಾಗಿದ್ದಾನೆ! ಆಗ ಜಪಾನಿನವನೆಂದ, “ಅದೇನು ಮಹಾ! ನಮ್ಮಲ್ಲಿ ಒಬ್ಬಾತ ಯಂತ್ರದೊಂದಿಗೆ ಕೆಲಸ ಮಾಡುತ್ತಿದ್ದಾಗ ಅವನ ಒಂದು ಕೈ ಕತ್ತರಿಸಿ ಹೋಯಿತು, ಅವನಿಗೆ ಒಂದು ಕೃತಕ ಕೈ ಹಾಕಲಾಯಿತು, ಈಗ ಅವನು ಆಪರೇಷನ್‍ಗಳನ್ನು ಮಾಡುವ ಸರ್ಜನ್ ಆಗಿ ನಮ್ಮ ದೇಶದಲ್ಲಿಯೇ ನಂ. ೧ ಸ್ಥಾನದಲ್ಲಿ ಇದ್ದಾನೆ”. ಈಗ ಮಾತನಾಡುವ ಪಾಳಿ ನಮ್ಮ ಭಾರತೀಯನದಾಗಿತ್ತು, ಆಗ ಅವನೆಂದ, “ಓ ಅಷ್ಟೇನಾ...!ನಮ್ಮ ದೇಶದಲ್ಲಿ ಒಬ್ಬನಿಗೆ ಅಕ್ಸಿಡೆಂಟಿನಲ್ಲಿ ತಲೆಚಿಪ್ಪು ಒಡೆದು, ಮೆದಳು ಹೊರಗೆ ಬಂದು ಹಾಳಾಗಿತ್ತು, ಅವನಿಗೆ ಮೆದುಳಿಲ್ಲದಯೆ ತಲೆಸರಿಮಾಡಿದ್ರು, ಈಗ ಅವನು ನಮ್ಮ ದೇಶದ ವಿದ್ಯಾಮಂತ್ರಿ ಆಗಿದ್ದಾನೆ.” "ಆ...ಹ್ಞ್! ಹೌ...ದಾ..!" ಎಂದು ಇತರ ದೇಶದ ತಂತ್ರಜ್ಞರು ತೆರೆದ ಬಾಯಿ ಮುಚ್ಚಲಿಲ್ಲ.