ಕನ್ನಡನವ್ಯಕಾವ್ಯ ಪರಂಪರೆಯ ಹರಿಕಾರ ಗೋಪಾಲಕೃಷ್ಣ ಅಡಿಗರ ಕಾವ್ಯದ ಒಂದು ಟ್ರೇಡ್ ಮಾರ್ಕ್ ಮೊನಚಾದ ವ್ಯಂಗ್ಯ . ಆದರೆ ಕನ್ನಡದ ಭಾವಗೀತೆಯ ಹಾಡುಗಾರರು ಅಡಿಗರ ಮೊದಮೊದಲಿನ ಭಾವಗೀತಾತ್ಮಕ ರಚನೆಗಳನ್ನಷ್ಟೆ ಹಾಡುವುದರಿಂದ ಭಾವಗೀತೆಯ ಕೇಳುಗರು, ಅವರ ಗಂಭೀರ ಕಾವ್ಯದ ಓದುಗರೂ ಕೂಡ ಅಲ್ಲದಿದ್ದರೆ, ಅಡಿಗರ ನಿಜವಾದ ಕಾವ್ಯಶೈಲಿಯನ್ನ ಆಸ್ವಾದಿಸಿರುವ ಸಾಧ್ಯತೆ ಕಡಿಮೆ. ಗಾಯಕ ಚಂದ್ರಶೇಖರ ಕೆದ್ಲಾಯರ ದನಿಯಲ್ಲಿ ಅಡಿಗರ "ಬರುತ್ತಾರೆ" ಕವನದ ಗಾಯನದಲ್ಲಿ ಆ ತೀಕ್ಷ್ಣ ವ್ಯಂಗ್ಯ ಚೆನ್ನಾಗಿ ಮೂಡಿಬಂದಿದೆ. ಇಲ್ಲಿದೆ ಕೇಳಿ..
http://www.youtube.com/watch?v=BMi1VDyYXSk
ಪ್ರತಿಕ್ರಿಯೆ (1)