ನನಗೆ ಫೇಸ್ ಬುಕ್ ಮೊದಲಾದ ಜಾಲತಾಣಗಳಲ್ಲಿ ನಮ್ಮ ಪೂರ್ವ ಸಂಸ್ಕೃತಿಯ ಶ್ರೇಷ್ಠತೆ ಇತ್ಯಾದಿಗಳ ಬಗ್ಗೆ ನಡೆಯುವ ನಿರರ್ಥಕ ಚರ್ಚೆಗಳನ್ನ ಕಂಡಾಗ ಗೋಪಾಲಕೃಷ್ಣ ಅಡಿಗರ "ಇಂದು ನಮ್ಮೀ ನಾಡು" ಕವನ ನೆನಪಾಗುತ್ತದೆ. "ಆ ಕಾಲವೊಂದಿತ್ತು ದಿವ್ಯ ತಾನಾಗಿತ್ತು" ಎನ್ನುವ ನಾಸ್ಟಾಲಾಜಿಕ್ ಹಳಹಳಿಕೆಯಲ್ಲಿ ಮುಳುಗುವುದಕ್ಕಿಂದ ವರ್ತಮಾನದ ಸ್ಥಿತಿಯನ್ನ ವಿವೇಚಿಸುವುದು ಉಚಿತವಲ್ಲವೇ?
ಅಂದ ಹಾಗೆ ಅಡಿಗರು ಆಧುನಿಕತೆಯ, ಪಶ್ಚಿಮದ ಅಂಧ ಭಕ್ತರಾಗಿರಲ್ಲಿಲ್ಲ. "ಮತ್ತೆ ಮೊಳಗಲಿ ಪಾಂಚಜನ್ಯ" ಎಂದೇ ಆಶಿಸಿದವರು. ಅಡಿಗರ ಮೊನಚು ವ್ಯಂಗ್ಯಕ್ಕೇ ಶ್ರೇಷ್ಠ ಉದಾಹರಣೆಯಾದ ಈ ಕವನ ನಿಮ್ಮ ಓದಿಗೆ ಇಲ್ಲಿದೆ...
ಬೇರುಸತ್ತೀಮರವನೆತ್ತಿನಿಲ್ಲಿಸುಮಗೂ
ಕೊಂಬೆರೆಂಬೆಗಳಿರಲಿಇದ್ದಹಾಗೆ;
ಒಳಗಿದೆಲೆಗಳತಂದುಕಾಫಿಕಾಯಿಸು, ಕುಡಿ
ತುಂಬಿಬರುತಿರೆಕಂಠಕಳಲಬೇಗೆ.
ತಳಕೆಕಟ್ಟೆಯಕಟ್ಟಿಹಾಕುನೀರ, ವಿಷಾದ
ತರುಬಿದರೆಕುದಿಯೆಸರುಕಣ್ಣನೀರು
ಸುರಿದುಬೀಳಲಿಇಲ್ಲಿ; ಒಳಗೆಬೇಯಲಿಅಲ್ಲಿ
ಸೈತಾನನಡುಗೆಗೆಚಿರೋಟಿಖೀರು
ಬಲ್ಬುಗಳತಂದುಜೋಡಿಸು, ಬೆಳಕಿನುಯ್ಯಾಲೆ
ಮಳೆಬಿಲ್ಲತೂಗಿಬಿಡುಕೊಂಬೆಕೊಮಬೆ;
ಹಚ್ಚುಕಾಗದದಹೂಕುಚ್ಚುಗಳ, ಅತ್ತರನು
ಹಚ್ಚುಗುಂಜಾರವದಹಾಡುಹಲಗೆ.
ನೆರಳಿಲ್ಲ, ಕೊಂಬೆಬರೀಪೊಳ್ಳುಎನ್ನಲುಸಲ್ಲ:
ನೆರಳುಬೇಕೇಹೊನ್ನಹೊದಿಕೆಗಿಂತ?
ಇದುಸನಾತನವೃಕ್ಷವಣ್ಣ: ನೇಣಿಗೆಬೇಕೆ
ಬೇರೆಆಧಾರಈಕೊಂಬೆಗಿಂತ?
ಪಡುವಲದಗಾಳಿಆಡಿದರೆತೂಗುವುದಟ್ಟೆ-
ಎಂಥಮಾರ್ದನಿ, ಎಂಥನಕಲುಕುಣಿತ!
ನೆಲದಕೊಳೆನೀರನೊಲ್ಲದುನಮ್ಮದಿವ್ಯತರು,
ಕುಡಿದುಬೆಳೆವುದುಸ್ವಪ್ನಲೋಕದಮೃತ!
ಬಾರವೇಇಲ್ಲಿಗೊಂದೂಹಕ್ಕಿ? – ಗಿಳಿಪುರುಳೆ
ಕೋಗಿಲೆಯುಗುಬ್ಬಚ್ಚಿಕಾಗೆಕೂಗೆ?
ಇರುವಕೋಗಿಲೆಯಬಡಿ, ಕೊಲ್ಲು; ಸತ್ತರೆಹುಲ್ಲು
ತುರುಕಿಇಡುಸಾಲಾಗಿಕೊಂಬೆಮೇಲೆ!
ಹುಳುಕುತೊಗಟೆಗೆಹೊದೆಸುಅಪರಂಜಿತಗಡ; ಮೈ
ಮೇಲೆಕೆತ್ತಿಸುಇದರಪೂರ್ವಕಥೆಯ:
"ಇಲ್ಲಿನೆರಳಿತ್ತುಹಸುರೆಲೆತಳಿರುಹೂಹಣ್ಣು
ಕೋಗಿಲೆಯಸರವತ್ತಿಗಿಳಿಯನಿಲಯ!
ಇಲ್ಲಿಮಿಡಿದಿತ್ತುಕೋದಂಡ, ಮೊಳಗಿತ್ತಿಲ್ಲಿ
ಪಾಂಚಜನ್ಯವು, ಚಕ್ರತಿರುಗುತ್ತಿತ್ತು;
ದಂಡವೋ, ಕಮಂಡಲುವೋ, ದರ್ಭಾಸವೋ, ಪರ್ಣ-
ಶಾಲೆಯೋಈಇಲ್ಲೆಸೊಗಸುತ್ತಿತು".
’ಇತ್ತು’ಗಳಧ್ವಜವಹಿಡಿದೆತ್ತಿನಿಲ್ಲೋಮಗೂ,
’ಇದೆ’ಯಹೃದಯದ್ರಾವಬೇಡನಿನಗೆ.
ಮರವುಂಟು, ಮರಕೆಬಂಗಾರವುಂಟಲ್ಲದೆಯೇ
ಕಟ್ಟೆಯುಂಟಲ್ಲ! ನೀರಿಕ್ಕುಅದಕೆ!
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!