ಕಳೆದು ಹೋಗಿದೆ ಗೆಳೆಯ ,
ಬಚ್ಚಿಟ್ಟ ಹುಚ್ಚು ಹೃದಯವು
ನೆನಪಿನಂಗಡಿಯ ಸಾಲಿನಲಿ
ತುಮುಲದಲಿ ನಾನಲೆವಾಗ...
ನೀ ನನ್ನೆದುರು ಬಂದಾಗ
ಎಲ್ಲೆ ಮೀರಿ ಉಲಿಯುತ್ತಿತ್ತು,
ಕಣ್ಣೆವೆಗಳು ಮುಚ್ಚಲಾರದೆ ಮುಚ್ಚಿದಾಗ,
ಜಾರಿ ಹೋಗಿದೆಯೇನೋ ಈ ಹೃದಯ...
ಹೆಚ್ಚು ಹೇಳಲಿ ಏನು?
ಬಚ್ಚಿಟ್ಟುಕೊ ನಿನ್ನೊಳಗೆ.
ಕಾಣದ ಹೊಸಿಲೆಡೆಗೆ
ಹೆಜ್ಜೆ ಹಾಕುವ ಕೈ ಹಿಡಿದು...
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!