ಆ ನಿನ್ನ ನಯನಗಳು

ನನ್ನನೇಕೋ ಕೆಣಕುತಿವೆ

ಆ ನಯನಗಳ ನೋಟಕೆ

ಅದರಗಳೇಕೋ ಅದರುತಿವೆ.

 

ಆ ಪ್ರೀತಿ ಹಂದರದಿ

ಭಿತಿಗೆ ಎಡೆಯುಂಟೆ

ಆ ಸರಸದ ನೋಟದಲಿ

ವಿರಸಕ್ಕೆ ಎಡೆಯುಂಟೆ.

 

ಆ ನಿನ್ನ ಮೌನದ ನೋಟಕೆ

ಮಾತಿಗೆ ಎಡೆಯುಂಟೆ

ಪ್ರೀತಿಗೆ ಮೌನದ ಲೇಪಕೆ

ಮಾತು ಬೇಕೆನಿಸುವುದುಂಟೆ.

 

ಮಾತಿಗೆ ಮೌನದ ಲೇಪವಿರಲು

ಸರಸಕ್ಕೆ ವಿರಸದ ಲೇಪವಿರಲು

ಹೊತ್ತು ಕಳೆದದ್ದು ತಿಳಿಯುವುದುಂಟೆ

ಜನ್ಮ ಕಳೆದರೂ ಮುಗಿಯುವುದುಂಟೆ

ಈ ಸರಸ ಸಲ್ಲಾಪ.

 

ನೀ ಹತ್ತಿರ ಸುಳಿಯುತ್ತಿರಲು

ಮೈ ಮನಸುಗಳು ನಿಂತಲ್ಲಿ ನಿಲ್ಲದೇ

ನಿನ್ನ ಸುತ್ತ ಸುತ್ತುತ್ತಲೇ ಇರುತ್ತವೆ

ಗಡಿಯಾರದ ಮುಳ್ಳುಗಳಂತೆ

 

ಕಂಡ ಕನಸುಗಳ ದಾರಿಯಲಿ

ನೀ ನನ್ನ ಜೊತೆಗಿರಲು

ಈ ಬದುಕು ಸಗ್ಗವಾಗಿರದೇ

ನರಕ ಆಗುವುದುಂಟೆ.

 

--ಮಂಜು ಹಿಚ್ಕಡ್