ನಿಮ್ಮ ಬಂದೂಕುಗಳಿಗೆ ಇನ್ನೂ ಹಸಿವು ತಣಿದಿಲ್ಲ

ಅವುಗಳಿಗೆ ಇನ್ನಷ್ಟು ರಕ್ತವನು ಕುಡಿಸಿ 

ಆರೋಗ್ಯವಾಗಿಡಿ,,,,,,,,

ಸತ್ತ ಹೆಣದ ರಾಶಿಗಳ ನಡುವಿನ

ರಕ್ತವನು ಕೊಳಾಯಿಯಲಿ ಸಂಗ್ರಹಿಸಿ

ದಿನವೂ ಆ ರಕ್ತವನು ಅಮೃತದಂತೆ ಕುಡಿಯಿರಿ,,,,,,

ಹೆಣದ ಮೆಟ್ಟಿಲುಗಳನ್ನು ಮಾಡಿಕೊಂಡು

ಸ್ವರ್ಗಕ್ಕೆ ಹತ್ತಿ ಹೋಗಿ, ಅಲ್ಲಿ

ಸ್ವರ್ಗದ ಬಾಗಿಲು ಬಡಿಯಿರಿ,

ನಿಮ್ಮ ಅಟ್ಟಹಾಸಕ್ಕೆ ಧರ್ಮದ ಹಣೆಪಟ್ಟಿಯನು,

ಗಟ್ಟಿಯಾಗಿ ಅಂಟಿಸಿಕೊಂಡಿರುವಿರಲ್ಲ,

ಜಾಗ್ರತೆಯಿಂದ ಕಾಪಾಡಿ, ಕಳೆದು ಹೋಗದಂತೆ.

ಇತಿಹಾಸದ ಪ್ರತಿ ಪುಟದಲ್ಲಿಯೂ 

ಒಂದೊಂದು ರಕ್ತದ ಹನಿ ಇರಬೇಕು, 

ಹಾಗೆ ಇತಿಹಾಸವನ್ನು ಬರೆದು ಇಡಿ.

ನೀವೆಲ್ಲ ಅಂದುಕೊಂಡಂತೆ, 

ನಮ್ಮನ್ನೆಲ್ಲ ಸಮೂಹಿಕವಾಗಿ ಕೊಂದು

ನಮ್ಮ ಮೂಳೆಗಳಲ್ಲಿ ಅರಮನೆ ಕಟ್ಟಿ, ವಿಜೃಂಭಿಸಿ.

*******************************************

ಎಲ್ಲವೂ ಮುಗಿದ ಮೇಲೆ ನಿಮಗೆ ಉಳಿಯುವುದು

ನಮ್ಮ ಹೆಣಗಳ ವಾಸನೆ,,,,,, ಅಷ್ಟೇ,,,,,,,,,