ಸಂಪದದಲ್ಲಿನ ನನ್ನ ಬರಹಗಳಿಂದ ಪ್ರಭಾವಿತರಾದ ಬಿ ಟಿವಿಯ ಕಾರ್ಯಕ್ರಮ ನಿರ್ಮಾಪಕ ಶ್ರೀ ಪ್ರಶಾಂತರು, ಸಂಪದದ ಮೂಲಕ ನನ್ನ ಬ್ಲಾಗು 'ಕವಿಮನ'ದಲ್ಲೂ ಹಣಿಕಿದವರು.  ಅಲ್ಲಿದ್ದ ಕೈದಿಯೊಬ್ಬ ಜೈಲು ಸೂರಿಂಟೆಂಡೆಂಟ್ ಆಗಿದ್ದು, ಮ್ಯಾಜಿಸ್ಟ್ರೇಟರೂ ಆಗಿದ್ದು ಎಂಬ ಲೇಖನ ಓದಿ ನನ್ನನ್ನು ಸಂಪರ್ಕಿಸಿದರು. ಈ ಲೇಖನ ಸಂಪದದಲ್ಲೂ ಪ್ರಕಟವಾಗಿದ್ದು, ಅದರ ಲಿಂಕ್ ಇದು:   http://ಕೈದಿಯೊಬ್ಬ-ಜೈಲು-ಸೂಪರಿಂಟೆಂಡೆಂಟ್-ಆಗಿದ್ದು-ಮ್ಯಾಜಿಸ್ಟ್ರೇಟರೂ-ಆಗಿದ್ದು  ನಂತರದ ಬೆಳವಣಿಗೆಯಲ್ಲಿ ಪ್ರಶಾಂತರು ಹಾಸನದ ವರದಿಗಾರರನ್ನು ನನ್ನ ಬಳಿಗೆ ಕಳುಹಿಸಿ ಒಂದು ಕಿರುಚಿತ್ರ ನಿರ್ಮಿಸಿಯೇ ಬಿಟ್ಟರು. ಅದು ಬಿಟಿವಿಯಲ್ಲಿ 12.05.2015ರಂದು ಪ್ರಸಾರವಾಯಿತು. ಆ ಕಿರುಚಿತ್ರದ ಎರಡು ಭಾಗಗಳ ಲಿಂಕು ಇವು:

https://www.youtube.com/watch?v=ZJiOQtHDROo 

https://www.youtube.com/watch?v=ey60zhmpSeQ

ಸಂಪದಕ್ಕೂ, ಸಂಪದದ ಮೂಲಕ ನನ್ನನ್ನು ಪರಿಚಯಿಸಿಕೊಂಡು ಟಿವಿ ಮೂಲಕ ಕರ್ನಾಟಕದ ಜನತೆಗೂ ಪರಿಚಯಿಸಿದ ಶ್ರೀ ಪ್ರಶಾಂತರಿಗೂ ಆಭಾರಿಯಾಗಿರುವೆ.

-ಕ.ವೆಂ.ನಾಗರಾಜ್.