ಹಾಸನದ ವೇದಭಾರತಿ ಮೂರು ವರ್ಷಗಳನ್ನು ಪೂರ್ಣಗೊಳಿಸಿ ನಾಲ್ಕನೆಯ ವರ್ಷಕ್ಕೆ ಕಾಲಿಡುತ್ತಿರುವ ಸಂದರ್ಭದಲ್ಲಿ ಒಂದು ವಿಶೇಷ ಕಾರ್ಯಕ್ರಮವನ್ನು ಆಯೋಜಿಸಿದೆ. 5.08.2015ರಿಂದ 9.08.2015ರವರೆಗೆ 5 ದಿನಗಳ ಕಾಲ "ಯೋಗ-ವೇದ-ಸಂಸ್ಕೃತ ಸಂಗಮ" ಎಂಬ ಹೆಸರಿನಲ್ಲಿ ನಡೆಸುತ್ತಿರುವ ಕಾರ್ಯಕ್ರಮದ ವಿವರ ಹೀಗಿದೆ:

ಪ್ರತಿನಿತ್ಯ ಬೆ. 5.15ರಿಂದ6.30 ಮತ್ತು ಸಾ. 5.30ರಿಂದ 6.30ರವರೆಗೆ ಯೋಗ, ಪ್ರಾಣಾಯಾಮದ ಅಭ್ಯಾಸ - ನುರಿತ ಯೋಗಪಟುಗಳು ಮಾರ್ಗದರ್ಶನ ಮಾಡುವರು.

ಪ್ರತಿನಿತ್ಯ ಬೆ. 6.30ರಿಂದ 7.00 ಮತ್ತು ಸಾ.6.30ರಿಂದ 7.00 -  ಅಗ್ನಿಹೋತ್ರ

ಪ್ರತಿನಿತ್ಯ ಬೆ. 7.00ರಿಂದ 8.30 ಮತ್ತು ಸಾ. 7.00ರಿಂದ 8.30 - ಪೂಜ್ಯ ಸ್ವಾಮಿರಾಮರ ಶಿಷ್ಯರಾದ ಗುರೂಜಿ ಪಟ್ಟಾಭಿರಾಮರಿಂದ ಗಾಯತ್ರಿ ಮಹಾಮಂತ್ರದ ಅನುಷ್ಠಾನ, ಮಹತ್ವ, ಪರಿಣಾಮ, ಇತ್ಯಾದಿಗಳ ಕುರಿತು ಉಪನ್ಯಾಸಗಳು.

ಪ್ರತಿನಿತ್ಯ ಬೆ. 8.30ಕ್ಕೆ ಉಪಹಾರದ ವ್ಯವಸ್ಥೆ ಮಾಡಿದೆ.

9.08.2015ರ ಸಾ. 5.00ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ. ಸಾ. 6.00ಕ್ಕೆ ಬೆಂಗಳೂರಿನ ಸಂಗೀತ ವಿದುಷಿ ವಿನಯ ವಿ.ಪ್ರಭು ಮತ್ತು ಬಳಗದವರಿಂದ ಭಕ್ತ ಸಂಗೀತ ಕಛೇರಿ ಏರ್ಪಡಿಸಿದೆ.

ಆಸಕ್ತರು ಸದುಪಯೋಗ ಪಡೆಯಬಹುದಾಗಿದೆ. ಎಲ್ಲರಿಗೂ ಆದರದ ಸ್ವಾಗತವಿದೆ.

-ಕ.ವೆಂ.ನಾಗರಾಜ್.