ಅವಿರತವಾಗಿ ಚೆಲ್ಲುತ್ತಿರುವ ರಕ್ತ ಕುಡಿದ ಭೂಮಿಕಾ,

ತಾನು ವೆಜಿಟೇರಿಯನ್ನು ಎಂದು ಕೂಗಿ ಹೇಳುತ್ತಿದ್ದಾಳೆ,,,,,,,,,,

ಚೆನ್ನೈ, ಆಂದ್ರ ಗಳಲ್ಲಿ ಅವಿಶ್ರಾಂತ ಕಣ್ಣೀರು ಸುರಿಸಿ,,,

ತನ್ನ ಅಳಲನ್ನು ತೋರ್ಪಡಿಸಲೆತ್ನಿಸಿದ್ದಾಳೆ ,,,,

ಕಂಡ ಕಂಡ ಜೀವಿಗಳಲ್ಲಿ, ಕೈ ಮುಗಿದು ಬೇಡುತ್ತಿದ್ದಾಳೆ,

ಸೂರ್ಯನನೂ ಆಗಾಗ ಮೊರೆ ಹೋಗಿ, ಬಿಸಿಲ ಹೆಚ್ಚಿಸಿದ್ದಾಳೆ,,,

ಆದರೆ 

ಕಿವುಡಾಗಿದೆ ನಮ್ಮ ಕಿವಿಗಳು, ಮೊಬೈಲ್ ಇಯರ್ ಫೋನಿನ ಶಬ್ಧದಿಂದ,,,,

ಕುರುಡಾಗಿದೆ ನಮ್ಮ ಕಣ್ಣು ದಿನ ನಡೆಯುವ ರಕ್ತಪಾತದ ವಿಡಿಯೋದಿಂದ,,,

ಭೂಮಿಕೆ ಬಿಕ್ಕಿ ಸತ್ತರೆ,,,,,,,, 

ನಮಗೆಲ್ಲಿ ಬದುಕು !!!!