ಹೊಸ ದಿನದರ್ಶಿಕೆಯ ಹೊಸ ವರ್ಷವು ಎಲ್ಲ ಸಂಪದ ಓದುಗರಿಗೂ ಸಂತೋಷ, ಉಲ್ಲಾಸ, ಶುಭ, ಸಂಪ್ರೀತಿ ತರಲಿ.  ಹೊಸ ವರ್ಷದ ಬಿಸಿ ಕಾಫಿಯ ಜೊತೆ, ಆಟೋರಾಜ ಶಂಕರ್ ನಾಗ್ ನೆನಪಿನ ಹಾಡಿನ ತಾಳಕ್ಕೆ ಕುರುಕುರು ಲಘು ಬರಹ 

।। ನೋಡಿ ಸ್ವಾಮಿ ನಾವಿರುವುದು  ಹೀಗೆ ।।

।। ಅರೆ ನೋಡಿ ಸ್ವಾಮಿ ನಾವಿರುವುದು  ಹೀಗೆ ।।

 

ಟ್ರಾಫಿಕ್ ನು ಬೈತೀವಿ, ಹೊಸ ಕಾರು ಕೊಳ್ತೀವಿ, worry ಇಲ್ಲ, 

ಬೆಣ್ಣೆ ದೋಸೆ ತಿಂದು, ನಿಂಬೆ ಜೇನುತುಪ್ಪ ನೀರು ಕುಡೀತೀವಿ,

।। ನೋಡಿ ಸ್ವಾಮಿ।। ನೋಡಿ ಸ್ವಾಮಿ।।

ಭಾಷಣ ಮಾಡ್ತೀವಿ, ಹಾಗೆ ವೇದಿಕೆ ಮೇಲೂ ಮಲಗ್ತೇವೆ,

ದೇವರ ನಂಬದಿದ್ರು, ಕಾಲು ತಗುಲಿದರೆ ಕೈ ಮುಗಿತೀವಿ. 

 

ನೆರೆಹೊರೆಯವರು ನಮಗೆ ಇದ್ರೂ, ನೆಟ್ಟಲಿ ಹಾರೈಕೆ ಕೋರಿ,

ಬೀರುಲಿ ಬಟ್ಟೆ ತುಂಬಿದ್ರು, ಸೇಲ್ ಅಂತ ಡಬಲ್ ಕೊಂಡು 

ಪಿಜ್ಜಾ, ಬರ್ಗರ್, ಮಾತ್ರೆ, ಜಿಮ್ಮು ನಿತ್ಯದ ಬದುಕಿನಲಿ 

 

।। ನೋಡಿ ಸ್ವಾಮಿ ನಾವಿರುವುದು  ಹೀಗೆ ।।

।। ಅರೆ ನೋಡಿ ಸ್ವಾಮಿ ನಾವಿರುವುದು  ಹೀಗೆ ।।