ಯಾವಾಗಲೂ ಅಂದುಕೊಳ್ಳುತ್ತಿದ್ದೆ. ಮನುಷ್ಯಳಾದ ಮೇಲೆ ಬ್ಲಾಗೊಂದು ಇರಬೇಕು ಎಂದು. ಈಗ ನನ್ನ ಬ್ಲಾಗಿನ ಮೊದಲ ಬರಹ ಬರೆಯುತ್ತಿದ್ದೇನೆ. ಮುಂದುವರೆಸಲು ಪ್ರಯತ್ನ ಮಾಡುತ್ತೇನೆ. ಪತ್ರಿಕೆಗಳಿಗೆ ಬರೆಯುವುದು ಒಂದು ರೀತಿಯಿಂದ ಸುಲಭ. ಅದಕ್ಕೊಂದು ಕೊನೆ ದಿನಾಂಕ ಇರುತ್ತೆ. ಶತಾಯ ಗತಾಯ ಅದರೊಳಗೇ ಬರೆದು ಮುಗಿಸಬೇಕು. ಎಂದೂ ಏಳದಿದ್ದವಳು ಮೊನ್ನೆಯೊಂದು ದಿನ ಬೆಳಿಗ್ಗೆ ಐದು ಗಂಟೆಗೇ ಎದ್ದು ಕುಳಿತು ಒಂದು ಲೇಖನ ಮುಗಿಸಬೇಕಾಯ್ತು. ಪ್ರೆಷರ್‌ ಜಾಸ್ತಿ ಇದ್ದಾಗ ಕೆಲಸ ಬೇಗ ಆಗುತ್ತೆ ಅನ್ನೋದು ಮತ್ತೊಮ್ಮೆ ಸಾಬೀತಾಯ್ತು :-)

ಆದರೆ ಬ್ಲಾಗಿಗೇನೂ ಟೈಮ್‌ ಲಿಮಿಟ್‌ ಇಲ್ಲವಲ್ಲ :-) ಹಾಗಾಗಿಯೇ ಬರಿಯೋಕೇನೂ ಗಡಿಬಿಡಿಯಿರಲ್ಲ. ಹಾಗಾಗಿ ಮುಂದೆ ಹೋಗುತ್ತಲೇ ಇರುತ್ತೆ.
ಸರಿ, ಮತ್ತೆ ಯಾವಾಗಲಾದರೂ ಸಿಗೋಣ.