ಕೃಷ್ಣಾ...... ಬಲು ದೂರ ಸಾಗ ಹಾಕಿದೆ, ನಿತ್ಯ ದರುಶನ ಇನ್ನಿಲ್ಲವಾಯಿತೇ

ಅತ್ತು ಕರೆದು ಗೋಗರೆದು ನಿನ್ನ ಕಾಲನೇ ಹಿಡಿದಿರುವೆ

ಹಠವೆಂದು ತಿಳಿಯದೆ, ಕೊಡವದೆ, ಕರುಣೆಯಲಿ ಎತ್ತಿಕೊಳ್ಳಯ್ಯಾ

ಶಿಶುವಿನೋಪಾದಿ ನಿನ್ನ ವದನದಲೇ ಕಣ್ಣ ನೆಟ್ಟಿರುವೆನು

ಒಮ್ಮೆ ನನ್ನ ನೋಡೆಂದು ನಿನ್ನನೇ ಕರೆಯುತಿರುವೆನು

ವೇದಮಾತೆ ನೀನು ನೇವರಿಸಿ ಹಾಲನುಣಿಸಯ್ಯಾ

ಒಂದೆಡೆ ಸೊಂಟಕೆ ಹಗ್ಗ ಬಿಗಿದು, ಇನ್ನೊಂದೆಡೆ ನಿನ್ನ ಪಾದಗಳಿಗೆ ಸುತ್ತಿರುವೆನು

ಮತಿ ಹೀನ ಚೇಷ್ಟೆಯಿದು ಜಗದೊಡೆಯನ ಪ್ರೇಮದಿ ಬಂದಿಸುವ ತವಕ

ನಿನ್ನ ಮರೆತರೆ ಈ ಜೀವ ಹಗ್ಗ ಎಳೆದು ಹತ್ತಿರ ಸೆಳೆಯಯ್ಯಾ.

4.1.2015 - ಉಡುಪಿ ಬಿಟ್ಟು ಬಂದ ದಿನ.