ಭ್ರಷ್ಟಾಚಾರವು ನಮ್ಮ ದೇಶದ ಅಭಿವೃದ್ಧಿಗೆ ಅಡ್ಡಿಯಾಗಿರುವ ಪ್ರಮುಖ ಸಮಸ್ಯೆಗಳಲ್ಲಿ ಒಂದಾಗಿದೆ. ಆದರೆ, "ಡಿಜಿಟಲ್ ಇಂಡಿಯಾ" ಪರಿಕಲ್ಪನೆಯು ಭ್ರಷ್ಟಾಚಾರವನ್ನು ಕಡಿಮೆ ಮಾಡುವಲ್ಲಿ ಮಹತ್ವದ ಪಾತ್ರ ವಹಿಸಿದೆ. ಸರ್ಕಾರದ ವಿವಿಧ ಇಲಾಖೆಗಳ ದಾಖಲೆಗಳು ಮತ್ತು ಸೇವೆಗಳು ಈಗ ಆನ್‌ಲೈನ್ ಮೂಲಕ ಲಭ್ಯವಾಗುತ್ತಿರುವುದರಿಂದ ಸಾರ್ವಜನಿಕರು ಕಚೇರಿಗಳಿಗೆ ಅಲೆದಾಡುವ ಅಗತ್ಯ ಕಡಿಮೆಯಾಗಿದೆ. ಇದರಿಂದ ಮಧ್ಯವರ್ತಿಗಳ ಹಸ್ತಕ್ಷೇಪ ಹಾಗೂ ಲಂಚದ ಅವಶ್ಯಕತೆ ಕಡಿಮೆಯಾಗುತ್ತಿದೆ.

ಇಂದು ಅನೇಕ ಸರ್ಕಾರಿ ಸೇವೆಗಳನ್ನು ಮನೆಯಲ್ಲಿಯೇ ಕುಳಿತು ಪಡೆಯಬಹುದು. ಸಂಬಂಧಿತ ಇಲಾಖೆಗಳ ಅಧಿಕೃತ ವೆಬ್‌ಸೈಟ್‌ಗಳಿಗೆ ಭೇಟಿ ನೀಡಿ ಅಗತ್ಯ ದಾಖಲೆಗಳನ್ನು ಪಡೆದುಕೊಳ್ಳಬಹುದು ಹಾಗೂ ನಿಗದಿತ ಶುಲ್ಕವನ್ನು ನೇರವಾಗಿ ಪಾವತಿಸಬಹುದು. ಯಾವುದೇ ಕಾರಣಕ್ಕೆ ಸೇವೆ ದೊರೆಯದಿದ್ದರೆ ಅಥವಾ ಅಧಿಕಾರಿಗಳಿಂದ ಅನಗತ್ಯ ವಿಳಂಬ ಉಂಟಾದರೆ, ವಿವಿಧ ದೂರು ನಿವಾರಣಾ ವ್ಯವಸ್ಥೆಗಳ ಮೂಲಕ ನ್ಯಾಯ ಪಡೆಯುವ ಅವಕಾಶವೂ ಇದೆ.

ಸಾರ್ವಜನಿಕರಿಗೆ ಉಪಯುಕ್ತವಾದ ಕೆಲವು ವೆಬ್‌ಸೈಟ್‌ಗಳು

  1. ಗ್ರಾಹಕರ ದೂರುಗಳಿಗಾಗಿ – ರಾಷ್ಟ್ರೀಯ ಗ್ರಾಹಕ ಸಹಾಯವಾಣಿ ಪೋರ್ಟಲ್ - ವೀಕ್ಷಿಸಲು ಕ್ಲಿಕ್ ಮಾಡಿ.

  2. ಮಾಹಿತಿ ಹಕ್ಕು ಕಾಯ್ದೆ (RTI) ಅರ್ಜಿ ಸಲ್ಲಿಸಲು – ಆನ್‌ಲೈನ್ RTI ಪೋರ್ಟಲ್ - ವೀಕ್ಷಿಸಲು ಕ್ಲಿಕ್ ಮಾಡಿ.

  3. ಜಾತಿ ಪ್ರಮಾಣ ಪತ್ರ ಪಡೆಯಲು – ನಾಡಕಚೇರಿ ಆನ್‌ಲೈನ್ ಸೇವೆ - ವೀಕ್ಷಿಸಲು ಕ್ಲಿಕ್ ಮಾಡಿ

  4. ರಾಜ್ಯ ಸರ್ಕಾರದ ವಿದ್ಯಾರ್ಥಿವೇತನಗಳಿಗಾಗಿ – ಎಸ್‌ಎಸ್‌ಪಿ (SSP) ಪೋರ್ಟಲ್ - ವೀಕ್ಷಿಸಲು ಕ್ಲಿಕ್ ಮಾಡಿ

ಡಿಜಿಟಲ್ ಇಂಡಿಯಾ ಅಡಿಯಲ್ಲಿ ಉಪಯುಕ್ತ ಮೊಬೈಲ್ ಆ್ಯಪ್‌ಗಳು

  1. ಉಮಂಗ್ ( ಡೌನ್ಲೋಡ್ ಮಾಡಲು ಕ್ಲಿಕ್ ಮಾಡಿ)

  2. ಡಿಜಿಲಾಕರ್ (ಡೌನ್ಲೋಡ್ ಮಾಡಲು ಕ್ಲಿಕ್ ಮಾಡಿ)

  3. ಎಂ-ಆಧಾರ್ (ಡೌನ್ಲೋಡ್ ಮಾಡಲು ಕ್ಲಿಕ್ ಮಾಡಿ)

  4. ಕರ್ನಾಟಕ ಮೊಬೈಲ್ ಒನ್ (ಡೌನ್ಲೋಡ್ ಮಾಡಲು ಕ್ಲಿಕ್ ಮಾಡಿ)

  5. ವೋಟರ್ ಆನ್‌ಲೈನ್ (ಡೌನ್ಲೋಡ್ ಮಾಡಲು ಕ್ಲಿಕ್ ಮಾಡಿ)

  6. ನೆಕ್ಸ್ಟ್‌ಜೆನ್ ಎಂ-ಪರಿವಹನ್ (ಡೌನ್ಲೋಡ್ ಮಾಡಲು ಕ್ಲಿಕ್ ಮಾಡಿ)

  7. ಪಬ್ಲಿಕ್ ಐ (ಡೌನ್ಲೋಡ್ ಮಾಡಲು ಕ್ಲಿಕ್ ಮಾಡಿ)

  8. ಕರ್ನಾಟಕ ರಾಜ್ಯ ಪೊಲೀಸ್ (ಡೌನ್ಲೋಡ್ ಮಾಡಲು ಕ್ಲಿಕ್ ಮಾಡಿ)

ಇವುಗಳ ಹೊರತಾಗಿಯೂ ಹಲವಾರು ಡಿಜಿಟಲ್ ಸೇವೆಗಳು ಸಾರ್ವಜನಿಕರಿಗೆ ಲಭ್ಯವಿದ್ದು, ಅವು ಸರ್ಕಾರದ ಸೇವೆಗಳನ್ನು ಪಾರದರ್ಶಕ, ಸುಲಭ ಮತ್ತು ವೇಗವಾಗಿ ಪಡೆಯಲು ಸಹಾಯ ಮಾಡುತ್ತವೆ.

ಡಿಜಿಟಲ್ ಇಂಡಿಯಾ ಕೇವಲ ತಂತ್ರಜ್ಞಾನದ ಯೋಜನೆಯಲ್ಲ; ಅದು ಪಾರದರ್ಶಕ ಮತ್ತು ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಾಣದತ್ತ ಒಂದು ಮಹತ್ವದ ಹೆಜ್ಜೆಯಾಗಿದೆ. ಪ್ರತಿಯೊಬ್ಬ ನಾಗರಿಕನು ಡಿಜಿಟಲ್ ಸೇವೆಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ತನ್ನ ಹಕ್ಕುಗಳನ್ನು ಅರಿತುಕೊಂಡಾಗ ಮಾತ್ರ ಉತ್ತಮ ಆಡಳಿತ ಮತ್ತು ಸ್ವಚ್ಛ ಸಮಾಜದ ಕನಸು ನನಸಾಗುತ್ತದೆ.

– ಭೀಮಪ್ಪ ಬಂದಿಕೇರಿ