"ಕ್ಲಾಸಿಕಲ್ ಕಥಾನಕದ

ಕಾರ್ಕೋಟಕ ಕಹಿ ಸತ್ಯಗಳು

ಒ೦ದೊ೦ದಾಗಿ ಬಿಡಿಸಿಕೊಳ್ಳತೊಡಗಿದವು

serious ಕವಿತೆಯ genius ಕವಿ

ಹಿಗ್ಗ ತೊಡಗಿದ


ಲೇಖನಿಗೆ ಮಧುಮಗನ

ಮೊದಲ ರಾತ್ರಿಯ ಗಮ್ಮತ್ತು

ಪ್ರಾಪ್ತವಾಗಿತ್ತು....

ಕವಿತೆಯ ಓಘ ,

ಬಾಳಿನ ವೇಗವನ್ನು ಮೀರಿತ್ತು

ಕೊನೆಗೂ ಸುಳ್ಳು ಬರೆಯುವ ಕವಿ

controversyಯ ಬಿಡಲಿಲ್ಲ

controversy ಬಿಟ್ಟವ

ಕವಿಯೇ ಅಲ್ಲ


-ಸಾತ್ವಿಕ್ ಹ೦ದೆ