ಜರ್ಮನಿ ಭಾಗವಹಿಸುತ್ತಿರುವ ಫುಟ್‌ಬಾಲ್ ಮ್ಯಾಚ್‌ನ ವರದಿಗಳನ್ನು ಗಮನಿಸಿದ್ದೀರಾ? ಎದುರಾಳಿ ಟೀಮುಗಳ ಬಲಾಬಲ ಚರ್ಚೆಗಿಂತ "ಪೌಲ್" ಎಂಬ ಅಕ್ಟೋಪಸ್ ನುಡಿಯುವ ಭವಿಷ್ಯದ ಕಡೆ ಎಲ್ಲರಿಗೂ ಆಸಕ್ತಿ!
ಮೊದಲಿಗೆ ನಾನು ಪೌಲ್ ಅಕ್ಟೋಪಸ್ ಎಂಬ ಜ್ಯೋತಿಷಿ ಭವಿಷ್ಯ ನುಡಿಯುವುದು ಎಂದು ಅದರ ಕಡೆ ಗಮನ ಕೊಟ್ಟಿರಲಿಲ್ಲ. ಚಿತ್ರ ನೋಡಿದಾಗ ಗೊತ್ತಾಯ್ತು- ಪೌಲ್ ಒಂದು ಸೈಕಿಕ್ ಅಕ್ಟೋಪಸ್!
ಕಲ್ಲು-ಕವಡೆ ಸಹ ಭವಿಷ್ಯ ಹೇಳುವ ದೇಶ್ದವರಾದ ನಮಗೆ ಇದು ಅವಮಾನದ ವಿಷಯವಲ್ಲವೇ? ಸೈಕಿಕ್ ಅಕ್ಟೋಪಸ್‌ಗೆ ಎದುರಾಗಿ ನಮ್ಮ ಬುದ್ಧಿವಂತ ಗಿಣಿರಾಮುನ ಭವಿಷ್ಯ ಹೇಳಲು ವಿನಂತಿಸಿದೆ.
( ನಮ್ಮ ಜತೆ ದಿನಾ ಪತ್ರಿಕೆ ಓದುವ,
ಅನೇಕ ವಿಷಯಗಳನ್ನು ಚರ್ಚಿಸುವ, ಗಿಣಿರಾಮು ಆಹಾರ-ಆಮಿಷಗಳಿಗೆಲ್ಲಾ ಬಲಿಯಾಗುವುದಿಲ್ಲ) ಸ್ಪರ್ಧೆ ಎಂದ ಮೇಲೆ ಅವರು ಮಾಡಿದಂತೆ ಮಾಡಬೇಕಲ್ಲಾ-

ಸ್ಪರ್ಧೆಯ ರಿಸಲ್ಟ್ ಗೊತ್ತಾಯಿತಲ್ಲಾ?
-ಗಣೇಶ.
http://www.deccanherald.com/content/79641/german-angst-psychic-octopus-tips.html
ಪ್ರತಿಕ್ರಿಯೆ (2)