ಆಗಸ್ಟ್ ೨೩, ೨೦೨೬ರಂದು ಅಖಿಲ ಕರ್ನಾಟಕ ತೃತೀಯ ಗಜಲ್ ಸಮ್ಮೇಳನವು ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ ಜರುಗಲಿದೆ. ಬೆಳಿಗ್ಗೆ ೯.೩೦ ರಿಂದ ಸಾಯಂಕಾಲ ೬.೩೦ರ ತನಕ ನಡೆಯುವ ಸಮ್ಮೇಳನದಲ್ಲಿ ನಿವೃತ್ತ ಮುಖ್ಯ ಶಿಕ್ಷಕಿ, ಲೇಖಕಿ ಶ್ರೀಮತಿ ರತ್ನಾ ಕೆ ಭಟ್, ತಲಂಜೇರಿ ಅವರಿಗೆ ರಾಷ್ಟ್ರೀಯ ಮಿರ್ಜಾ ಗಾಲಿಬ್ ಪ್ರಶಸ್ತಿ ನೀಡಿ ಗೌರವಿಸಲಾಗುವುದು.