ಮೊನ್ನೆ ನಾನು ಘೋಷಿಸಿದ ಶ್ರಮದಾನ ಪರಿಕಲ್ಪನೆಯ ಕಾರ್ಯಕ್ರಮಕ್ಕೆ ನನ್ನ ಆತ್ಮೀಯ ಓದುಗ ಮಿತ್ರರು ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಒಳ್ಳೆಯ, ಪ್ರೋತ್ಸಾಹದಾಯಕ ಮಾತುಗಳನ್ನಾಡಿದ್ದಾರೆ. ಕೆಲವರು ನೇರವಾಗಿ ಮೊಬೈಲ್ ಮುಖಾಂತರ ಸಂಪರ್ಕಿಸಿ ಅಭಿನಂದನೆ ಸಲ್ಲಿಸಿದ್ದಾರೆ ಮತ್ತು ಸುಮಾರು 25ಕ್ಕೂ ಹೆಚ್ಚು ವಾರಗಳು ಈಗಾಗಲೇ ನಿಗದಿಯಾಗಿದೆ. ಎರಡೂ ಕಡೆಯ ಅನುಕೂಲಕರ ದಿನಾಂಕಗಳನ್ನು ನೋಡಿಕೊಂಡು ಕಾರ್ಯಕ್ರಮ ಮುಂದುವರಿಸುತ್ತೇನೆ. ಇವುಗಳಲ್ಲಿ ಕೆಲವು ಅಭಿಪ್ರಾಯಗಳನ್ನು ಮಾತ್ರ ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ.
ಸ್ವಾರ್ಥವೇ ತುಂಬಿರುವ ಈ ಪ್ರಪಂಚದಲ್ಲಿ 52 ವಾರಗಳ 52 ಕೆಲಸ ಶ್ರಮದಾನದ ಈ ಪರಿಕಲ್ಪನೆ ಹಾಗೂ ತಮ್ಮನ್ನು ತಾವು ಮಾನಸಿಕವಾಗಿ ಭೌತಿಕವಾಗಿ ಅಳವಡಿಸಿಕೊಂಡು ಇಡುತ್ತಿರುವ ಈ ಹೆಜ್ಜೆಗೆ ನಮ್ಮ ಹೃತ್ಪೂರ್ವಕವಾದ ಅಭಿನಂದನೆಗಳು, ನಿಮ್ಮ ಈ ಅದ್ಭುತ ಪರಿಕಲ್ಪನೆಯ ಶ್ರಮದಾನದ ನಿಸ್ವಾರ್ಥದ ನಡೆಗೆ ಪ್ರತಿಯೊಬ್ಬ ಭಾರತೀಯರಿಗೆ ಹಾಗೂ ಯುವ ಜನತೆಗೆ ಪ್ರೋತ್ಸಾಹದಾಯಕವಾಗಿರಲಿ
ಈ ನಡೆ ಕಷ್ಟಪಟ್ಟು ದುಡಿಯಲು ಬಯಸುವ ಯುವ ಜನತೆಗೆ ಪ್ರೇರಣಾದಾಯಕ ಹಾಗೂ ಮಾರ್ಗದರ್ಶನ ವಾಗಿರಲಿ
ನಿಮಗೆ ನಮ್ಮ ಹೃತ್ಪೂರ್ವಕ ಅಭಿನಂದನೆಗಳು. ಸರ್ಕಾರಿ ರಜಾ ದಿನ ಹಾಗೂ ಭಾನುವಾರ ನಿಮ್ಮ ಜೊತೆ ಸ್ವಚ್ಛತಾ ಸಿಬ್ಬಂದಿಗಳ ಜೊತೆ ಸೇರಿಕೊಂಡು ಸಾರ್ವಜನಿಕ ಶೌಚಾಲಯವನ್ನು ಸ್ವಚ್ಛತೆ ಮಾಡಲು ಉಚಿತವಾಗಿ & ಮತ್ತೊಂದು ದಿನ ಕೃಷಿ ಕೆಲಸ ಮಾಡಲು ಉಚಿತವಾಗಿ ನಾನು ನಿಮ್ಮ ಜೊತೆ ಬರುತ್ತೇನೆ... ಇದು ಅತ್ಯಂತ ಅರ್ಥಪೂರ್ಣ ಮತ್ತು ಸಮಾಜಮುಖಿ ಪರಿಕಲ್ಪನೆ.
***
"52 ವಾರಗಳು – 52 ಕೆಲಸಗಳು (ಶ್ರಮದಾನ)" ಎಂಬ ಈ ಪರಿಕಲ್ಪನೆಯ ವಿಶೇಷತೆಗಳು: ಶ್ರಮಕ್ಕೆ ಗೌರವ: ಯಾವುದೇ ಕೆಲಸ ಚಿಕ್ಕದಲ್ಲ ಎಂಬ ಸಂದೇಶವನ್ನು ಸಮಾಜಕ್ಕೆ ನೀಡುತ್ತದೆ. ಪ್ರತಿಯೊಂದು ಕೆಲಸಕ್ಕೂ ತನ್ನದೇ ಆದ ಮೌಲ್ಯವಿದೆ ಎಂಬ ಅರಿವು ಮೂಡಿಸುತ್ತದೆ. ಅನುಭವದ ಮೂಲಕ ಕಲಿಕೆ: ಪುಸ್ತಕ ಅಥವಾ ಇತರರ ಮಾತುಗಳಿಂದ ತಿಳಿಯದ ಅನೇಕ ಸಂಗತಿಗಳನ್ನು ನೇರ ಅನುಭವದ ಮೂಲಕ ಅರಿತುಕೊಳ್ಳಲು ಸಾಧ್ಯವಾಗುತ್ತದೆ.
ಮಾನವೀಯತೆ ಮತ್ತು ಸಹಾನುಭೂತಿ: ವಿವಿಧ ವೃತ್ತಿಯ ಜನರು ಎದುರಿಸುವ ಕಷ್ಟ-ಸವಾಲುಗಳನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಇದರಿಂದ ಅವರ ಬಗ್ಗೆ ಗೌರವ ಮತ್ತು ಸಹಾನುಭೂತಿ ಹೆಚ್ಚುತ್ತದೆ. ಬರವಣಿಗೆಗೆ ಜೀವ ತುಂಬುತ್ತದೆ: ಪ್ರತಿಯೊಂದು ಕೆಲಸದ ಅನುಭವವನ್ನು ಲೇಖನವಾಗಿ ಬರೆದರೆ, ಅದು ಓದುಗರ ಮನಸ್ಸನ್ನು ಹೆಚ್ಚು ಸ್ಪರ್ಶಿಸುತ್ತದೆ. ನೈಜ ಅನುಭವದಿಂದ ಬಂದ ಬರಹ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ.
ಯುವಕರಿಗೆ ಪ್ರೇರಣೆ: ಸಮಾಜಸೇವೆ ಎಂದರೆ ಕೇವಲ ಹಣ ನೀಡುವುದು ಅಲ್ಲ, ನಮ್ಮ ಶ್ರಮವನ್ನೂ ಸಮಾಜಕ್ಕೆ ಅರ್ಪಿಸಬಹುದು ಎಂಬ ಉತ್ತಮ ಸಂದೇಶವನ್ನು ಯುವಜನತೆಗೆ ನೀಡುತ್ತದೆ. ಸಮಾಜದೊಂದಿಗೆ ನೇರ ಸಂಪರ್ಕ: ರೈತ, ಕಾರ್ಮಿಕ, ಶಿಕ್ಷಕ, ಕಾರ್ಖಾನೆ ನೌಕರ, ಹೋಟೆಲ್ ಸಿಬ್ಬಂದಿ ಹೀಗೆ ವಿವಿಧ ಕ್ಷೇತ್ರಗಳ ಜನರೊಂದಿಗೆ ಬೆರೆಯುವ ಅವಕಾಶ ದೊರೆಯುತ್ತದೆ. ಇದರಿಂದ ಸಮಾಜದ ನೈಜ ಚಿತ್ರಣ ತಿಳಿಯುತ್ತದೆ.
ಆತ್ಮಾವಲೋಕನ: ಈ ಪಯಣ ಇತರರನ್ನು ಬದಲಾಯಿಸುವುದಕ್ಕಿಂತ ಮೊದಲು ನಮ್ಮನ್ನು ನಾವು ಅರಿತುಕೊಳ್ಳುವ ಮತ್ತು ಸುಧಾರಿಸಿಕೊಳ್ಳುವ ಅವಕಾಶ ನೀಡುತ್ತದೆ. ಒಂದು ಸಣ್ಣ ಸಲಹೆ ಈ ಅಭಿಯಾನದ ಜೊತೆಗೆ ಪ್ರತಿ ವಾರ: ಮಾಡಿದ ಕೆಲಸದ ಫೋಟೋ ಅಥವಾ ವಿಡಿಯೋ, ಆ ದಿನ ಕಲಿತ ಮೂರು ಮುಖ್ಯ ಪಾಠಗಳು, ಆ ವೃತ್ತಿಯ ಕಾರ್ಮಿಕರ ಸಮಸ್ಯೆಗಳು ಮತ್ತು ಸಮಾಜಕ್ಕೆ ಅವರ ಕೊಡುಗೆ, ನಿಮ್ಮ ವೈಯಕ್ತಿಕ ಅನುಭವ ಇವುಗಳನ್ನು ದಾಖಲಿಸಿ ಹಂಚಿಕೊಂಡರೆ, 52 ವಾರಗಳ ನಂತರ ಅದು ಒಂದು ಉತ್ತಮ ಪುಸ್ತಕ, ಸಾಕ್ಷ್ಯಚಿತ್ರ ಅಥವಾ ಪ್ರೇರಣಾದಾಯಕ ಉಪನ್ಯಾಸ ಸರಣಿಯಾಗಿ ರೂಪುಗೊಳ್ಳಬಹುದು.
ಒಟ್ಟಾರೆ, "ಶ್ರಮದಾನ – 52 ವಾರಗಳು, 52 ಕೆಲಸಗಳು" ಎಂಬುದು ಕೇವಲ ಒಂದು ಕಾರ್ಯಕ್ರಮವಲ್ಲ; ಶ್ರಮಕ್ಕೆ ಗೌರವ, ಮಾನವೀಯ ಮೌಲ್ಯಗಳ ಬೆಳವಣಿಗೆ ಮತ್ತು ಸಮಾಜವನ್ನು ಅರಿಯುವ ಜೀವನಯಾತ್ರೆ ಎಂದು ಹೇಳಬಹುದು. ಇದು ಯಶಸ್ವಿಯಾಗಿ ಅನುಷ್ಠಾನಗೊಂಡರೆ ಅನೇಕ ಜನರಿಗೆ ಸ್ಫೂರ್ತಿದಾಯಕ ಮಾದರಿಯಾಗುವ ಸಾಧ್ಯತೆ ಇದೆ.
ಕಾರ್ಮಿಕರ ದಿನಗೂಲಿಗರ ಶ್ರಮಿಕರ ಪರಿಶ್ರಮ ಮಾಡುವವರಿಗೆ ಅವರ ಜೀವನವಾದರೆ ಅದನ್ನು ನೋಡಿ ಅಣಕಿಸುವ ಅಸಹ್ಯ ಪಡುವ ಸಮೂಹ ಇನ್ನೊಂದು ಕಡೆ ಸಂಭಮಿಸುತ್ತೆ ಇದಕ್ಕೆ ಉದಾಹರಣೆ ಈಗ ಎದ್ದಿರುವ ಮೀಸಲಾತಿ ಮುಕ್ತ ಭಾರತ ಎಂಬ ಕೂಗು. ಇದರ ಮಧ್ಯ ತಮ್ಮ ಈ ನಿಲುವು ನೋಡಿ ಮನಸ್ಸು ಭಾರವಾಗುತ್ತಿದ್ದೆ ಸರ್.
85% ದುಡಿಯುವ ವರ್ಗ ಆ ವರ್ಗ ಸ್ವಲ್ಪ ಆರ್ಥಿಕ ಸಮೃದ್ಧಿ ಹೊಂದಿದ್ದೆ ಬಾಬಾಸಾಹೇಬರ ಸಂವಿಧಾನದ ಬಿಕ್ಷೆಯಿಂದ ಅದೇ ಕಾರಣಕ್ಕೆ ಇಡಿ ಮನುವ್ಯವಸ್ಥೇ ಅದರ ವಿರುದ್ಧ ದಂಗೆ ಎದ್ದಿದೆ. ಅವರಿಗೆ ಮೀಸಲಾತಿ ಕಣ್ಣಿಗೆ ಕಾಣ್ತಾ ಇದೆ ಬಟ್ ದುಡಿಯುವ ವರ್ಗದ ನೋವು ಹಿಂಸೆ ಅರ್ಥವಾಗ್ತಾ ಇಲ್ಲಾ.
ಜಾತಿ ವ್ಯವಸ್ಥೆ ಜೀವಂತವಿತ್ತವರು ಮೀಸಲಾತಿ ವಿರೋಧ ಮಾಡ್ತಾ ಇದ್ದಾರೆ ಅಂದ್ರೆ ಈ ದೇಶದಲ್ಲಿ ಸಂವಿಧಾನ ಉಳಿದಿದೆಯಾ ಅನ್ನೋದೆ ನನ್ನ ಪ್ರಶ್ನೆಯಾಗಿದೆ ಸರ್.. (ಇವೆಲ್ಲಾ ನನ್ನ ಶ್ರಮದಾನಕ್ಕೆ ಪೂರಕವಾಗಿ ಬಂದ ಅಭಿಪ್ರಾಯಗಳಲ್ಲಿ ಕೆಲವು ಮಾತ್ರ)
-ವಿವೇಕಾನಂದ. ಎಚ್. ಕೆ., ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!