ಇವತ್ತಿನ ಡಿಜಿಟಲ್ ಯುಗದಲ್ಲಿ ಸ್ಮಾರ್ಟ್‌ಫೋನ್ ಕೈಲಿದ್ದರೆ ಸಾಕು, ಕಣ್ಣು ಮುಚ್ಚಿ ಕಣ್ಣು ಬಿಡುವುದರೊಳಗೆ ನೂರಾರು ಸುಂದರ ಫೋಟೋಗಳನ್ನು ಕ್ಲಿಕ್ ಮಾಡಬಹುದು. ಆದರೆ, ಎಂದಾದರೂ ಯೋಚಿಸಿದ್ದೀರಾ? ಈ ಸುಂದರ ತಂತ್ರಜ್ಞಾನದ ಆರಂಭ ಎಲ್ಲಿಂದ ಆಯ್ತು? ಜಗತ್ತಿನ ಅತ್ಯಂತ ಮೊದಲ ಫೋಟೋ ಯಾವುದು ಮತ್ತು ಅದನ್ನು ತೆಗೆದವರು ಯಾರು ಎಂದು?

ಜೋಸೆಫ್ ನಿಸೆಫೋರ್ ನೀಪ್ಸ್? ಫ್ರಾನ್ಸ್ ದೇಶದ ಪ್ರಸಿದ್ಧ ಸಂಶೋಧಕ ಮತ್ತು ವಿಜ್ಞಾನಿ. ಇವತ್ತಿನ ಆಧುನಿಕ ಫೋಟೋಗ್ರಫಿ ಮತ್ತು ಕ್ಯಾಮೆರಾ ತಂತ್ರಜ್ಞಾನದ ಇತಿಹಾಸದಲ್ಲಿ ಇವರ ಹೆಸರು ಸುವರ್ಣಾಕ್ಷರಗಳಲ್ಲಿ ಬರೆಯುವಂತದ್ದು. ಏಕೆಂದರೆ, ಫೋಟೋಗ್ರಫಿಯ ಆವಿಷ್ಕಾರದಲ್ಲಿ (Invention of Photography) ಇವರು ಅತ್ಯಂತ ಪ್ರಮುಖ ಪಾತ್ರ ವಹಿಸಿದ್ದಾರೆ.

nisephor.jpeg

ಮಾನವ ಇತಿಹಾಸದ ಅತ್ಯಂತ ಹಳೆಯ, ಮೊದಲ ಛಾಯಾಚಿತ್ರ! ಮೇಲ್ಗಡೆ ನೀಡಲಾಗಿರುವ ಜೋಸೆಫ್ ತೆಗೆದ ಇದು ಕೇವಲ ಒಂದು ಕಪ್ಪು-ಬಿಳುಪಿನ ಚಿತ್ರವಲ್ಲ. ಇದು ಇಡೀ ಮಾನವ ಇತಿಹಾಸದಲ್ಲೇ ಕ್ಯಾಮೆರಾ ಮೂಲಕ ಸೆರೆಹಿಡಿಯಲಾದ ಅಂತ್ಯಂತ ಹಳೆಯ ಮತ್ತು ಮೊದಲ ಛಾಯಾಚಿತ್ರ.

ಚಿತ್ರದ ಹೆಸರು: "View from the Window at Le Gras"
ವರ್ಷ: ಅಂದಾಜು 1826 ಅಥವಾ 1827

ಜೋಸೆಫ್ ಅವರು ಫ್ರಾನ್ಸ್‌ನ ಬರ್ಗುಂಡಿಯಲ್ಲಿರುವ ತಮ್ಮ ಮನೆಯ ಕಿಟಕಿಯಿಂದ ಹೊರಗೆ ಕಾಣುತ್ತಿದ್ದ ದೃಶ್ಯವನ್ನು ಈ ಕ್ಯಾಮೆರಾ ಮೂಲಕ ಸೆರೆಹಿಡಿದಿದ್ದರು. ಇವರು ಕಂಡುಹಿಡಿದ ಈ ವಿಶೇಷ ತಂತ್ರಜ್ಞಾನವನ್ನು "ಹೆಲಿಯೋಗ್ರಫಿ" (Heliography) ಎಂದು ಕರೆಯಲಾಗುತ್ತದೆ. 

(ಜಾಲತಾಣವೊಂದರಿಂದ ಸಂಗ್ರಹಿತ)

-ಸಂತೋಷ ಕುಮಾರ್, ಸುರತ್ಕಲ್