ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಸವಿತ ಎಸ್.ಆರ್.
ಸ

ಸವಿತ ಎಸ್.ಆರ್.

savithasr

೫೬ ಲೇಖನಗಳು ೧,೪೯,೫೨೭ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಗಣನೆ

ಆಗಸ್ಟ್ ೦೬ ಉಲ್ಲೇಖಗಳು ೧,೧೧೩ ವೀಕ್ಷಣೆ

ಮನೆಯೊಳೋ ಮಠದಳೋ ಸಭೆಯೊಳೋ ಸಂತೆಯೊಳೊ| ಕೊನೆಗೆ ಕಾಡೊಳೊ ಮಸಾಣದೊಳೊ ಮತ್ತೆಲ್ಲೋ|| ಗಣನೆಗೇರಲಿಕೆಂದು ಜನ ತಪಿಸಿ ತೊಳಲುವುದು| ನೆನೆಯದಾತ್ಮದ ಸುಖವ-ಮಂಕುತಿಮ್ಮ||

ಜೀವನ

ಆಗಸ್ಟ್ ೦೬ ಉಲ್ಲೇಖಗಳು ೬೯೮ ವೀಕ್ಷಣೆ

ಮುಳುಗದಿರು; ಜೀವನದ ತೆರೆಯ ಮೇಲೀಜುತಿರು| ಒಳಿತನಾಗಿಸು, ಕೊಡುತ ಕೊಳುತ ಸಂತಸವ|| ಕಳವಳಂಬಡದೆ ನಡೆ ಕಡೆಯ ಕರೆ ಬಂದಂದು| ಮಿಳಿತನಿರು ವಿಶ್ವದಲಿ- ಮಂಕುತಿಮ್ಮ||

ಬಾಳದೋಣಿ

ಆಗಸ್ಟ್ ೦೬ ಉಲ್ಲೇಖಗಳು ೬೪೨ ವೀಕ್ಷಣೆ

ಕಾಲನದಿಯಲಿ ನಮ್ಮ ಬಾಳದೋಣಿಯು ಮೆರೆದು | ತೇಲುತ್ತೆ ಭಯವ ಕಾಣದೆ ಸಾಗುತಿರಲು || ಗಾಳಿಯಾವಗಮೊ ಬಂದೆತ್ತಣಿನೊ ಬೀಸುತ್ತ | ಮೇಲ ಕೀಳಗಿಪುದು - ಮಂಕುತಿಮ್ಮ||

ಬದುಕು

ಆಗಸ್ಟ್ ೦೬ ಉಲ್ಲೇಖಗಳು ೫೭೧ ವೀಕ್ಷಣೆ

ದಿವಸದಿಂ ದಿವಸಕ್ಕೆ, ನಿಮಿಷದಿಂ ನಿಮಿಷಕ್ಕೆ| ಭವಿಷಿಯವ ಚಿಂತಿಸದೆ ಬದುಕ ನೂಕುತಿರು|| ವಿವರಗಳ ಜೋಡಿಸುವ ಯಜಮಾನ ಬೇರಿಹನು| ಸವೆಸು ನೀಂ ಜನುಮವನು- ಮಂಕುತಿಮ್ಮ||

ಅನ್ನ ಋಣ

ಆಗಸ್ಟ್ ೦೬ ಉಲ್ಲೇಖಗಳು ೮೪೫ ವೀಕ್ಷಣೆ

ಇಂದು ಮದುವೆಯ ಹಬ್ಬ; ನಾಳೆ ವೈಕುಂಠ ತಿಥಿ| ಇಂದು ಮೃಷ್ಟಾನ್ನಸುಖ, ನಾಳೆ ಭಿಕ್ಷಾನ್ನ|| ಇಂದು ಬರಿಯುಪವಾಸ, ನಾಳೆ ಪಾರಣೆ-ಯಿಂತು| ಸಂದಿರುವುದನ್ನ ಋಣ- ಮಂಕುತಿಮ್ಮ||

ಸತ್ಯವೆಲ್ಲಿ?

ಆಗಸ್ಟ್ ೦೬ ಉಲ್ಲೇಖಗಳು ೫೯೬ ವೀಕ್ಷಣೆ

ಸತ್ಯವೆಂಬುದದೆಲ್ಲಿ? ನಿನ್ನಂತರಂಗದೊಳೊ| ಸುತ್ತ ನೀನನುಭವಿಪ ಬಾಹ್ಯಚಿತ್ರದೊಳೋ|| ಯುಕ್ತಿಯಿಂದೊಂದನೊಂದಕೆ ತೊಡಿಸಿ ಸರಿನೋಡೆ| ತತ್ತ್ವದರ್ಶನವಹುದು- ಮಂಕುತಿಮ್ಮ||

ಯತ್ನ

ಆಗಸ್ಟ್ ೦೬ ಉಲ್ಲೇಖಗಳು ೫೨೧ ವೀಕ್ಷಣೆ

ಅರೆದಿನದ ನಮ್ಮ ಯತ್ನದಿನದೇನೆನ್ನದಿರು| ಕಿರಿದುಮೊದಗೂಡಿರಲು ಸಿರಿಯಹುದು ಬಾಳ್ಗೆ|| ಪರಿಪೋಷಿಸದೆ ನಿನ್ನೊಡಲ ದಾರಿಮರದ ಫಲ?| ಕಿರುಜಾಜಿ ಸೊಗಕೊಡದೆ?- ಮಂಕುತಿಮ್ಮ||

ಉದರದೈವ

ಆಗಸ್ಟ್ ೦೬ ಉಲ್ಲೇಖಗಳು ೫೯೯ ವೀಕ್ಷಣೆ

ಉದರದೈವಕೆ ಜಗದೊಳೆದುರು ದೈವದದೆಲ್ಲಿ| ಮೊದಲದರ ಪೂಜೆ;ಮಿಕ್ಕೆಲ್ಲವದರಿಂದ|| ಮದಿಸುವುದದಾದರಿಸೆ, ಕುದಿವುದು ನಿರಾಕರಿಸೆ| ಹದದೊಳಿರುಸುವುದೆಂತೊ?- ಮಂಕುತಿಮ್ಮ||

ಹೂವು

ಆಗಸ್ಟ್ ೦೬ ಉಲ್ಲೇಖಗಳು ೭೭೧ ವೀಕ್ಷಣೆ

ಗಿಡದಿ ನಗುತಿರುವ ಹೂ ಪ್ರಕೃತಿಸಖನಿಗೆ ಚೆಂದ| ಮಡದಿ ಮುಡಿದಿರುವ ಹೂ ಯುವಕಂಗೆ ಚೆಂದ|| ಗುಡಿಯೊಳಗೆ ಕೊಡುವ ಹೂ ದೈವಭಕ್ತಂಗೆ ಚೆಂದ| ಬಿಡಿಗಾಸು ಹೂವಳಗೆ- ಮಂಕುತಿಮ್ಮ||

ತಿಳಿವು

ಆಗಸ್ಟ್ ೦೬ ಉಲ್ಲೇಖಗಳು ೬೪೬ ವೀಕ್ಷಣೆ

ಎಳೆಯ ತರು ದಿನದಿನವು ಹೊಸತಳಿರ ತಳೆವಂತೆ| ತಿಳಿನೀರು ಚಿಲುಮೆಯಲಿ ನಿಲದುಕ್ಕುವಂತೆ|| ಎಳೆ ಮಕ್ಕಳೊಳು ತಿಳಿವು ಮೊಳೆತು ಬೆಳೆವುದು ನೋಡು| ಇಳೆಯೊಳಗದೊಂದು ಸೊಗ- ಮಂಕುತಿಮ್ಮ||

ಮನ

ಆಗಸ್ಟ್ ೦೬ ಉಲ್ಲೇಖಗಳು ೫೮೬ ವೀಕ್ಷಣೆ

ಕೊಳದ ಜಲ ನಿನ್ನ ಮನ; ಲೋಗರದರೊಳಗಿಳಿಯೆ| ತಳದ ಕಸ ತೇಲುತ್ತ ಬಗ್ಗಡವದಹು|| ಕಲಕದದ್ದದೆ ಕೊಂಚ ಬಿಟ್ಟಿದ್ದೊಡದು ಮರಳಿ| ತಿಳಿಯಹುದು ಶಾಂತಿಯಲಿ-ಮಂಕುತಿಮ್ಮ|| (ಲೋಗರು= ಅದರ ಒಳಗಿಳಿಯೆ)

ದುಡುಕದಿರು

ಆಗಸ್ಟ್ ೦೬ ಉಲ್ಲೇಖಗಳು ೬೦೭ ವೀಕ್ಷಣೆ

ಒಡೆಯದಿರು ತಳಹದಿಯ ಸರಿವಡಿಪೆನದನೆಂದು| ಸಡಿಲಿಸುವ ನೀಂ ಮರಳಿ ಕಟ್ಟಲರಿತವನೇಂ?|| ಗಿಡವ ಸರಿ ಬೆಳೆಯಿಸಲು ಬುಡವ ಕೀಳ್ವುದು ಸರಿಯೆ?| ದುಡುಕದಿರು ತಿದ್ದಿಕೆಗೆ- ಮಂಕುತಿಮ್ಮ||