ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಸವಿತ ಎಸ್.ಆರ್.
ಸ

ಸವಿತ ಎಸ್.ಆರ್.

savithasr

೫೬ ಲೇಖನಗಳು ೧,೪೯,೫೨೭ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಓಲೆಕಾರ

ಆಗಸ್ಟ್ ೦೫ ಉಲ್ಲೇಖಗಳು ೬೫೩ ವೀಕ್ಷಣೆ

ಓಲೆಕಾರನಿಗೇಕೆ ಬರೆದ ಸುದ್ದಿಯ ಚಿಂತೆ?| ಓಲೆಗಳನವರವರಿಗೈದಿಸಿರೆ ಸಾಕು|| ಸಾಲಗಳೊ, ಶೂಲಗಳೊ, ನೋವುಗಳೊ,ನಗುವುಗಳೊ| ಕಾಲೋಟವವನೂಟ- ಮಂಕುತಿಮ್ಮ||

ಸುಖಿ

ಆಗಸ್ಟ್ ೦೫ ಉಲ್ಲೇಖಗಳು ೬೪೯ ವೀಕ್ಷಣೆ

ಜಗದ ಕಲ್ಯಾಣದೊಳಗಾತ್ಮ ಕಲ್ಯಾಣವನು| ಜಗದ ಬೀದಿಗಳೊಳು ನಿಜಾತ್ಮಯಾತ್ರೆಯನು|| ಜಗದ ಜೀವಿತದಿ ನಿಜಜೀವಿತದ ಪೂರ್ತಿಯನು| ಬಗೆಯಲರಿತವನೆ ಸುಖಿ- ಮಂಕುತಿಮ್ಮ||

ವಿಧಿ

ಆಗಸ್ಟ್ ೦೫ ಉಲ್ಲೇಖಗಳು ೭೩೬ ವೀಕ್ಷಣೆ

ಹೊಟ್ಟೆಯೊಂದರ ರಗಳೆ ಸಾಲದಂದೇನೊ ವಿಧಿ| ಹೊಟ್ಟೆಕಿಚ್ಚಿನ ಕಿಡಿಯ ನೆಟ್ಟಿಹನು ನರನೊಳ್|| ಹೊಟ್ಟೆತುಂಬಿದ ತೋಳ ಮಲಗೀತು; ನೀಂ ಪೆರರ| ದಿಟ್ಟಿಸುತ ಕರುಬುವೆಯೊ- ಮಂಕುತಿಮ್ಮ||

ಆತುರ

ಆಗಸ್ಟ್ ೦೫ ಉಲ್ಲೇಖಗಳು ೭೩೫ ವೀಕ್ಷಣೆ

ಅನ್ನದಾತುರಕಿಂತ ಚಿನ್ನದಾತುರ ತೀಕ್ಷ್ಣ| ಚಿನ್ನದಾತುರಕಿಂತ ಹೆಣ್ಣುಗಂಡೊಲವು|| ಮನ್ನಣೆಯ ದಾಹವೀಯೆಲ್ಲಕಂ ತೀಕ್ಷ್ಣತಮ| ತಿನ್ನುವುದದಾತ್ಮವನೆ-ಮಂಕುತಿಮ್ಮ||

ಬದುಕು

ಆಗಸ್ಟ್ ೦೫ ಉಲ್ಲೇಖಗಳು ೬೦೨ ವೀಕ್ಷಣೆ

ತರಚುಗಾಯವ ಕೆರೆದು ಹುಣ್ಣನಾಗಿಪುದು ಕಪಿ| ಕೊರತೆಯೊಂದನು ನೀನು ನೆನೆನೆನೆದು ಕೆರಳಿ|| ಧರೆಯೆಲ್ಲವನು ಶಪಿಸಿ,ಮನದಿ ನರಕವ ನಿಲಿಸಿ| ನರಳುವುದು ಬದುಕೇನೊ?-ಮಂಕುತಿಮ್ಮ||

ನಗು

ಆಗಸ್ಟ್ ೦೫ ಉಲ್ಲೇಖಗಳು ೭೩೧ ವೀಕ್ಷಣೆ

ನಗುವು ಸಹಜದ ಧರ್ಮ ನಗಿಸುವುದು ಪರಧರ್ಮ ನಗುವ ಕೇಳುತ ನಗುವುದತಿಶಯದ ಧರ್ಮ ನಗುವ ನಗಿಸುವ ನಗಿಸಿ ನಗುತ ಬಾಳುವ ವರವ ಮಿಗೆ ನೀನು ಬೇಡಿಕೊಳೊ ಮಂಕುತಿಮ್ಮ.

ಈ ಗಾದೆಗಳು ಗೊತ್ತಾ?

ಜುಲೈ ೦೮ ಬ್ಲಾಗ್ ೧,೭೯೦ ವೀಕ್ಷಣೆ

ಈ ಗಾದೆಗಳು ಗೊತ್ತಾ? ಕಣ್ಣಿದ್ದವನಿಗೆ ಕನಕಗಿರಿ, ಕಾಲಿದ್ದವನಿಗೆ _______ ಒಳ್ಳೆಯದಕ್ಕೆ ರಾಗ , ಕೆಟ್ಟದ್ದಕ್ಕೆ ______ ನಿಮಗೆ ಗೊತ್ತಿದ್ದರೆ ತಿಳಿಸುವಿರಾ? - ಸವಿತ