ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸರಳ ಸಮೃದ್ಧ ಹೈನುಗಾರಿಕೆ

ಡಾ. ಗಣೇಶ ಹೆಗಡೆ ನೀಲೇಸರ, ಡಾ. ಎನ್ ಬಿ ಶ್ರೀಧರ, ಡಾ. ಕೆ ಎಂ ನಾಗರಾಜ
/ 5 · ರೇಟಿಂಗ್ ಇನ್ನೂ ರೇಟಿಂಗ್ ಇಲ್ಲ
೧೯೮ ವೀಕ್ಷಣೆ ೧
ಪ್ರಕಾಶನ
ನದಿ ಪ್ರಕಾಶನ
ಬೆಲೆ
₹150
"'ಸಮೃದ್ಧ ಹೈನುಗಾರಿಕೆ' ಎಂಬ ಪುಸ್ತಕದ ಅಗತ್ಯತೆಯ ವ್ಯಾಪ್ತಿ ಬಹಳ ದೊಡ್ಡದು. ಇದನ್ನು ಪೂರ್ತಿಯಾಗಿ ಓದಿದಾಗ, ಈವರೆಗೂ ಒಮ್ಮೆಯೂ ಜಾನುವಾರುಗಳನ್ನು ಮುಟ್ಟದವರಿಗೂ 'ಎರಡು ಆಕಳುಗಳನ್ನು ಸಾಕಿಯೇ ಬಿಡೋಣ' ಅನ್ನಿಸುವಷ್ಟು ಆಪ್ತವಾಗಿದೆ. ಈಗಾಗಲೇ ಹೈನುಗಾರಿಕೆಯಲ್ಲಿ ತೊಡಗಿಕೊಂಡವರಿಗಂತೂ ಇದು ಅನೇಕ ಒಳಮಾಹಿತಿಗಳ ಕಣಜ. ನಮ್ಮಂತಹ ಪಶುವೈದ್ಯರಿಗೂ ವೃತ್ತಿಯ ಪುನರ್ನೋಟ ಇಲ್ಲಿದೆ. ಹಟ್ಟಿ ಕಟ್ಟುವುದು, ಸ್ವತಃ ಪಶು ಆಹಾರ ತಯಾರಿ, ಸಾವಯವ ಹಾಲು, ಮನೆಮದ್ದು, ವೈಜ್ಞಾನಿಕ ಸಾಕಣೆ ಕ್ರಮ—ಹೀಗೆ ಇದರಲ್ಲಿ ಮುಟ್ಟದ ವಿಷಯಗಳೇ ಇಲ್ಲ. ಈ ಪುಸ್ತಕ ನಮ್ಮ ಕಪಾಟಿನಲ್ಲಿರಬೇಕಾದ ಹೆಮ್ಮೆಯ ಆಸ್ತಿ." – ಡಾ. ಮನೋಹರ ಉಪಾಧ್ಯ, ಪಶುವೈದ್ಯರು ಮತ್ತು ಮೂಲಿಕಾ ಪಶು ಔಷಧಿ ತಯಾರಕರು, ಮಂಗಳೂರು.

ಕೊನೆಯ ನವೀಕರಣ: ಆಗಸ್ಟ್ ೦೪, ೨೦೨೬