ಹೊಸ ಪಟ್ಟಣ
ಲೇಖಕರು: ಡಾ. ಸುಬ್ರಹ್ಮಣ್ಯ ಸಿ.ಕುಂದೂರು
₹210.00
₹270.00
22% ರಿಯಾಯಿತಿ
ಲಭ್ಯವಿದೆ
₹೬೦ ಉಳಿತಾಯ (22% ರಿಯಾಯಿತಿ)
ಪುಸ್ತಕದ ಬಗ್ಗೆ
ಕನ್ನಡ ನಾಡನ್ನು ಆಳ್ವಿಕೆಗೆ ಒಳಗು ಮಾಡಿದ ಕದಂಬರು, ಗಂಗ, ಚಾಲುಕ್ಯ, ಹೊಯ್ಸಳ, ವಿಜಯನಗರದ ಅರಸರು ಮಲೆನಾಡಿನ ಬಹುಪಾಲು ನೆಲವನ್ನು ತಮ್ಮ ಸಾಮಂತ ಅರಸರ ಮೂಲಕ ಅಳ್ವಿಕೆ ನಡೆಸಿದರು. ಅಳುಪರು, ಸಾಂತರರು, ಕಳಸ-ಕಾರ್ಕಳದ ಭೈರರಸರು, ಕೆಳದಿ ನಾಯಕರು, ಮೈಸೂರು ಒಡೆಯರು, ಟಿಪ್ಪುಸುಲ್ತಾನ ಹಾಗೂ ಆಂಗ್ಲ ಪ್ರಭುತ್ವದ ಪ್ರೇರಣೆ, ಧೋರಣೆಗೆ ಒಳಗಾಗಿದ್ದ ಈ ಪ್ರದೇಶವು ವೈದಿಕ, ಬೌದ್ಧ, ಜೈನ, ದೈತ, ಆತ, ವೀರಶೈವ ಸಿದ್ಧಾಂತಕ್ಕೆ ಕಾಲದ ನೆಲೆಯಲ್ಲಿ ಪ್ರತಿಸ್ಪಂದನೆಯನ್ನು ನೀಡುತ್ತ ಬಂದಿದೆ. ಈ ರೀತಿಯ ಚಾರಿತ್ರಿಕ ಅಭಿವ್ಯಕ್ತಿಯ ಮೀಮಾಂಸೆಯನ್ನು ಗಮನದಲ್ಲಿ ಇಟ್ಟುಕೊಂಡು ಹತ್ತನೆಯ ಶತಮಾನದಿಂದ ಹದಿನೇಳನೆಯ ಶತಮಾನದ ತನಕದ ಚಾರಿತ್ರಿಕ ವಿವರಗಳನ್ನು ಗ್ರಹಿಸಿಕೊಂಡಿರುವ ಗೆಳೆಯ ಡಾ. ಸುಬ್ರಹ್ಮಣ್ಯ ಸಿ ಕುಂದೂರು ಅವರು ತನ್ನ ಪ್ರದೇಶದ ಚಾರಿತ್ರಿಕ ಮೀಮಾಂಸೆಯನ್ನು ಶೋಧಿಸಿಕೊಂಡು 'ಹೊಸಪಟ್ಟಣ' ಅನ್ನೋ ಕಾದಂಬರಿಯನ್ನು ನಿರೂಪಿಸಿದ್ದಾರೆ. ಈ ಕಾದಂಬರಿಯು ಸಾಂಸ್ಕೃತಿಕ ಅಭಿವ್ಯಕ್ತಿಯನ್ನು ಕಟ್ಟುವ ಭಾಷೆ ನಿರೂಪಣೆಯ ಶೈಲಿಯಿಂದ ಮಹತ್ವ ಅನ್ನಿಸುತ್ತದೆ. ಬಹುಮುಖ್ಯವಾಗಿ ಕಳಸಸೀಮೆಯ ಭಾಗದಲ್ಲಿ ಉಂಟಾದ ಮತ, ಧರ್ಮ, ವ್ಯಾಪಾರ, ಮನುಷ್ಯನ ಕಾನಿನ ಜೊತೆಗಿನ ನಡೆಯನ್ನೇ ಆ ಕಾಲಮಾನದ ವಿಜಯನಗರದ ಅರಸರ, ಕಳಸ- ಕಾರ್ಕಳದ ಭೈರರಸರ, ಕೆಳದಿ ನಾಯಕರ ಪ್ರಭುತ್ವದ ನೆಲೆಯಲ್ಲೇ ಅನೇಕ ಪಾಳೇಪಟ್ಟುಗಳ ರಾಜಕೀಯ ಹೋರಾಟ, ವೀರತ್ವದ ಪರಿಕಲ್ಪನೆಗಳು ಜನರ ಬದುಕಿನ ಸ್ಪರ್ಶದಲ್ಲಿ ಕತೆಯಾಗಿರುವುದು ಓದುಗರಿಗೆ ಆಪ್ತವಾಗುತ್ತದೆ.
ವೀರಗಲ್ಲಿನ ರಚನೆಯ ತಾತ್ವಿಕತೆಯನ್ನೇ ಹುಡುಕುವ ಕಾದಂಬರಿಯು ವ್ಯಾಪಾರದ ನೆಲೆಯಿಂದ ಹುಟ್ಟಿದ ಹೊಸಪಟ್ಟಣದ ಕುರಿತಾಗಿ ಮಾತನಾಡುವ ಜೊತೆಯಲ್ಲಿ ದುರ್ಗದ ಬೆಟ್ಟದ ಕಾನಿನಲ್ಲಿ ಜೀವನಕ್ಕೆ ನಿಂತ ಜನಮಾನಿಗಳ ಲೋಕಗ್ರಹಿಕೆಯನ್ನು ರಾಜಕೀಯ ಪಲ್ಲಟವನ್ನು ಮತದ ಘರ್ಷಣೆಯನ್ನು, ಹೆಣ್ಣು ಗಂಡುಗಳ ಬದುಕಿನ ಪರಂಪರೆಯನ್ನು ಹೇಳುವ ಕಾದಂಬರಿಯು ಕಳಸಸೀಮೆಯ ಚರಿತ್ರೆಯ ಕಟ್ಟುವ ಕಡೆಗೆ ಯೋಚಿಸಿದೆ. ಬರೆಹದ ಸತ್ವವನ್ನು ಜತನವಾಗಿಸಿಕೊಂಡಿರುವ ಮಿತ್ರ ಡಾ. ಸುಬ್ರಹ್ಮಣ್ಯ ಸಿ ಕುಂದೂರು ಅವರಿಗೆ ಅಭಿನಂದನೆಗಳು.
-ಸುರೇಶ್ ಕಲ್ಲೆರೆ ಇತಿಹಾಸ ಸಂಶೋಧಕರು, ಕೊಪ್ಪ ತಾ.
ಇಡೀ ಭಾರತದಲ್ಲಿ ₹50 ಶಿಪ್ಪಿಂಗ್ · ಕರ್ನಾಟಕದಲ್ಲಿ ₹500 ಮೇಲೆ ಉಚಿತ · ಭಾರತದಲ್ಲಿ ₹500 ಮೇಲೆ ಉಚಿತ
ವಿವರ ↗
ಸುರಕ್ಷಿತ ಪಾವತಿ
ಇಡೀ ಭಾರತಕ್ಕೆ ರವಾನೆ
ಚೆಕ್ಔಟ್ನಲ್ಲಿ ಉಡುಗೊರೆ ಆಯ್ಕೆ
₹210.00
ವಿಮರ್ಶೆಗಳು
ಇನ್ನೂ ವಿಮರ್ಶೆಗಳಿಲ್ಲ — ಮೊದಲ ವಿಮರ್ಶೆ ನಿಮ್ಮದಾಗಲಿ.