ಮುಖಪುಟ / ಪುಸ್ತಕ ಸಂಪದ / ಅಮೋಘವರ್ಷ
ಅಮೋಘವರ್ಷ

ಅಮೋಘವರ್ಷ

ಲೇಖಕರು: ಪ್ರಕಾಶ್ ಹೇಮಾವತಿ

₹195.00 ಲಭ್ಯವಿದೆ

ಪುಸ್ತಕದ ಬಗ್ಗೆ

ಕರ್ನಾಟಕದ ಭವ್ಯ ಇತಿಹಾಸದಲ್ಲಿ ರಾಷ್ಟ್ರಕೂಟರು ಆಳಿದ ಕಾಲ ಅತ್ಯಂತ ಮಹತ್ವಪೂರ್ಣವಾದದ್ದು. ಸಮ್ರಾಟ್ ಅಶೋಕನ ನಂತರ ಇಡೀ ಭಾರತದ ರಾಜಕೀಯದಲ್ಲಿ ರಾಷ್ಟ್ರಕೂಟರಷ್ಟು ಪ್ರಭಾವ ಬೀರಿದ ರಾಜಮನೆತನ ಇನ್ನೊಂದು ಇರಲಿಲ್ಲವೆಂದೇ ಹೇಳಬಹುದು. ಈ ಮನೆತನದ ರಾಜರು ಮೂರು ಸಲ ಉತ್ತರ ಭಾರತದ ದಂಡಯಾತ್ರೆ ಕೈಗೊಂಡು ವಿಜಯಿಗಳಾಗಿದ್ದಾರೆ. ಕನ್ನಡ ಮಣ್ಣಿನ ಮಕ್ಕಳಾಗಿ ಉದಯಿಸಿದ ಇವರು ಕನ್ನಡದ ಸಾಂಸ್ಕೃತಿಕ ಪರಂಪರೆಯನ್ನು ಭವ್ಯತೆಯ ಉತ್ತುಂಗ ಶಿಖರಕ್ಕೇರಿಸಿ ಇಂದಿಗೂ ಎಲ್ಲಾ ಕನ್ನಡಿಗರ ಹೆಮ್ಮೆಗೆ ಕಾರಣರಾಗಿದ್ದಾರೆ. ಯಲ್ಲಾಪುರದ (ಎಲ್ಲೋರಾ) ಏಕಶಿಲೆಯಲ್ಲಿ ನಿರ್ಮಿತವಾಗಿರುವ ಕೈಲಾಸನಾಥ ದೇವಾಲಯ, ಗೊರವಪುರಿಯ (ಎಲಿಫೆಂಟಾ) ಗುಹಾಂತರ ದೇವಾಲಯಗಳು ರಾಷ್ಟ್ರಕೂಟರು ವಾಸ್ತುಶಿಲ್ಪ ಶಾಸ್ತ್ರದ ಕಲೆ ಹಾಗೂ ತಾಂತ್ರಿಕತೆಯಲ್ಲಿ ಸಾಧಿಸಿದ್ದ ಪರಿಪೂರ್ಣತೆಗೆ ಸಾಕ್ಷಿಯಾಗಿವೆ. ಇಂತಹ ಮನೆತನದಲ್ಲಿ ಜನಿಸಿದ ನೃಪತುಂಗದೇವ, ತನ್ನ ಅಮೋಘ ವ್ಯಕ್ತಿತ್ವ, ನ್ಯಾಯಪರತೆ, ಸಾಹಿತ್ಯ ಕಲೆ ವಾಸ್ತುಶಿಲ್ಪಗಳ ಆಸಕ್ತಿಯಿಂದ ಕನ್ನಡ ಸಂಸ್ಕೃತಿಯನ್ನು ಶ್ರೀಮಂತಗೊಳಿಸಿದ್ದಾನೆ, ಸ್ವತಃ ಭಾಷಾತಜ್ಞನಾಗಿದ್ದ ಈತ ಕನ್ನಡ ಸಾಹಿತ್ಯದ ಸಮಗ್ರ ಬೆಳವಣಿಗೆಗೆ ಸ್ಪಷ್ಟವಾದ ದಾರಿ ರೂಪಿಸಿ ಇಂದಿಗೂ ಕನ್ನಡ ಸಾಹಿತ್ಯ ರಾರಾಜಿಸುತ್ತಿರುವುದಕ್ಕೆ ಕಾರಣನಾಗಿದ್ದಾನೆ. ಈತ ಜಾರಿಗೆ ತಂದಿದ್ದ ಸಾಮಾಜಿಕ ಬದಲಾವಣೆಗಳು ಇಂದಿಗೂ ಅನುಕರಣೀಯವಾಗಿವೆ. ಇಂತಹ ಭವ್ಯ ಚಕ್ರವರ್ತಿಯ ಇಡೀ ಜೀವನ, ಸಾಧನೆಗಳನ್ನು ಕನ್ನಡಿಗರಿಗೆ ಅರ್ಪಿಸುತ್ತಿರುವುದು ಅತ್ಯಂತ ಹರ್ಷದಾಯಕ ಸಂತರಿಯಾಗಿದೆ.
ಸಂಖ್ಯೆ
ಇಡೀ ಭಾರತದಲ್ಲಿ ₹50 ಶಿಪ್ಪಿಂಗ್ · ಕರ್ನಾಟಕದಲ್ಲಿ ₹500 ಮೇಲೆ ಉಚಿತ · ಭಾರತದಲ್ಲಿ ₹500 ಮೇಲೆ ಉಚಿತ ವಿವರ ↗
ಸುರಕ್ಷಿತ ಪಾವತಿ ಇಡೀ ಭಾರತಕ್ಕೆ ರವಾನೆ ಚೆಕ್‌ಔಟ್‌ನಲ್ಲಿ ಉಡುಗೊರೆ ಆಯ್ಕೆ
₹195.00

ವಿಮರ್ಶೆಗಳು

ವಿಮರ್ಶೆ ಬರೆಯಲು ಲಾಗಿನ್ ಆಗಿ.

ಇನ್ನೂ ವಿಮರ್ಶೆಗಳಿಲ್ಲ — ಮೊದಲ ವಿಮರ್ಶೆ ನಿಮ್ಮದಾಗಲಿ.

ನಿಮಗೆ ಇಷ್ಟವಾಗಬಹುದು

ಸಹಾಯ ಬೇಕೇ?